Legal Mirror Protection Of Property For Senior Citizens Change Your Rights
(ಕಾನೂನು ಕನ್ನಡಿ) ಪತಿಯಿಂದ ಅನ್ಯಾಯವಾಗಿದೆ...
Contributed by: Keerthi Kolgar|Vijaya Karnataka•
ಒಂದು ವೇಳೆ ನೀವು 75 ವರ್ಷದ ಹಿರಿಯ ಮಹಿಳೆಯಾಗಿದ್ದು, ನಿಮಗೆ ಮಕ್ಕಳಿಲ್ಲ. ನಿಮ್ಮನ್ನು ಜೀವನಪರ್ಯಂತ ನೋಡಿಕೊಳ್ಳುವುದಾಗಿ ಒಬ್ಬ ವ್ಯಕ್ತಿ ಭರವಸೆ ನೀಡಿದ್ದರಿಂದ, ನಿಮ್ಮ ಆಸ್ತಿಯನ್ನು ಆತನಿಗೆ ದಾನಪತ್ರದ ಮೂಲಕ ನೀಡಿದ್ದೀರಿ. ಆದರೆ ಈಗ ಆತ ನಿಮ್ಮನ್ನು ನೋಡಿಕೊಳ್ಳುತ್ತಿಲ್ಲ. ಇಂತಹ ಸಂದರ್ಭದಲ್ಲಿಭಾರತೀಯ ಕಾನೂನು ನಿಮಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ. ಇದಕ್ಕೆ ಪ್ರಮುಖ ಪರಿಹಾರವು ಋaಜ್ಞಿಠಿಛ್ಞಿa್ಞ್ಚಛಿ a್ಞd Wಛ್ಝ್ಛಿa್ಟಛಿ ಟ್ಛ Pa್ಟಛ್ಞಿಠಿs a್ಞd ಖಛ್ಞಿಜಿಟ್ಟ ಇಜಿಠಿಜ್ಢಿಛ್ಞಿs ಅ್ಚಠಿ, 2007 ಅಡಿಯಲ್ಲಿಲಭ್ಯವಿದೆ. 1. ದಾನಪತ್ರ ರದ್ದುಪಡಿಸುವುದು ಈ ಕಾಯಿದೆಯ ಕಲಂ 23(1)ರ ಪ್ರಕಾರ, ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ದಾನ ಅಥವಾ ಇತರೆ ರೀತಿಯಲ್ಲಿವರ್ಗಾಯಿಸಿದ್ದರೆ; ಆ ವರ್ಗಾವಣೆ, ದಾನ ಸ್ವೀಕರಿಸುವ ವ್ಯಕ್ತಿ ದಾನಕರ್ತರಿಗೆ ಮೂಲಭೂತ ಸೌಲಭ್ಯಗಳು ಹಾಗೂ ಜೀವನಾವಶ್ಯಕ ಅಗತ್ಯಗಳನ್ನು ಒದಗಿಸುವ ಷರತ್ತಿನ ಮೇರೆಗೆ ನಡೆದಿದ್ದರೆ; ಮತ್ತು ದಾನ ಸ್ವೀಕರಿಸುವ ಆ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದರೆ, ಅಂತಹ ವರ್ಗಾವಣೆಯನ್ನು ವಂಚನೆ, ಬಲಾತ್ಕಾರ ಅಥವಾ ಅನಗತ್ಯ ಪ್ರಭಾವದ ಮೂಲಕ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿನಿರ್ವಹಣಾ ನ್ಯಾಯಮಂಡಳಿ (ಋaಜ್ಞಿಠಿಛ್ಞಿa್ಞ್ಚಛಿ T್ಟಜಿಚ್ಠ್ಞಿa್ಝ) ದಾನಪತ್ರವನ್ನು ಅಸಿಂಧು (್ಖಟಜಿd) ಎಂದು ಘೋಷಿಸಿ, ಆಸ್ತಿಯನ್ನು ಹಿರಿಯ ನಾಗರಿಕರಿಗೆ ಮರುಹಸ್ತಾಂತರಿಸುವಂತೆ ಆದೇಶಿಸಬಹುದು. ದಾನಪತ್ರದಲ್ಲಿಯೇ ದಾನಸ್ವೀಕರಿಸುವ ವ್ಯಕ್ತಿಯು ನಿಮ್ಮನ್ನು ಜೀವನಪರ್ಯಂತ ಪೋಷಿಸಿ, ನೋಡಿಕೊಳ್ಳಬೇಕೆಂಬ ಷರತ್ತು ಸ್ಪಷ್ಟವಾಗಿ ಉಲ್ಲೇಖವಾಗಿದ್ದರೆ, ಕಲಂ 23ರ ಅಡಿಯಲ್ಲಿನಿಮ್ಮ ಪ್ರಕರಣವು ಅತ್ಯಂತ ಬಲಿಷ್ಠವಾಗಿರುತ್ತದೆ. ಒಂದು ವೇಳೆ ದಾನಪತ್ರದಲ್ಲಿಇಂತಹ ಷರತ್ತು ಸ್ಪಷ್ಟವಾಗಿ ಉಲ್ಲೇಖವಾಗಿರದಿದ್ದರೆ, ಪ್ರಕರಣದ ಫಲಿತಾಂಶವು ಅದರ ವಾಸ್ತವಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, ಇತ್ತೀಚಿನ ತೀರ್ಪುಗಳ ಪ್ರಕಾರ, ನ್ಯಾಯಾಲಯಗಳು ಸೂಕ್ತ ಪ್ರಕರಣಗಳಲ್ಲಿಸುತ್ತಮುತ್ತಲಿನ ಸಂದರ್ಭಗಳು, ಪಕ್ಷಗಳ ನಡುವಿನ ಪರಸ್ಪರ ತಿಳಿವಳಿಕೆ ಹಾಗೂ ದಾನಪತ್ರದ ಹಿಂದಿನ ಉದ್ದೇಶವನ್ನು ಪರಿಗಣಿಸಿವೆ. ದಾನಪತ್ರವು ಕೇವಲ ನಿಮ್ಮನ್ನು ಜೀವನಪರ್ಯಂತ ಪೋಷಿಸುವ ಭರವಸೆಯ ಆಧಾರದ ಮೇಲೆಯೇ ಮಾಡಲಾಗಿದೆ ಎಂಬುದನ್ನು ನೀವು ಸಾಬೀತುಪಡಿಸಿದರೆ, ದಾನಪತ್ರವನ್ನು ರದ್ದುಪಡಿಸುವ ಪರಿಹಾರವನ್ನು ಪಡೆಯಬಹುದು. ಆದರೆ, ಅದಕ್ಕಾಗಿ ಸಂಬಂಧಿಸಿದ ವಾಸ್ತವಾಂಶಗಳನ್ನು ನೀವು ಸ್ಪಷ್ಟವಾಗಿ ಅರ್ಜಿ ಅಥವಾ ಮನವಿಯಲ್ಲಿಪ್ರತಿಪಾದಿಸಬೇಕು (p್ಝಛಿad), ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕು (p್ಟಟvಛಿ), ಮತ್ತು ನಿಯಮಗಳಲ್ಲಿ(್ಕ್ಠ್ಝಛಿs) ಕಲ್ಪಿಸಿರುವಂತೆ ಸಮಗ್ರ ವಿಚಾರಣೆ (ಛ್ಞಿಟ್ಠಿಜ್ಟಿy) ನಡೆಯಬೇಕು.