(ಕಿಕ್ಕರ್ ) ಬ್ಯಾಂಕ್ ಮ್ಯಾನೇಜರ್ ಆಗುವ ಕನಸು ಹೊತ್ತಿದ್ದರೂ ರಂಗಭೂಮಿಯ ಸೆಳೆತ | ಮನೆಯಲ್ಲಿಬಡತನ ನಾಟಕದ ಪಯಣ
ನಾಟಕ ಕಂಪನಿ ಕಟ್ಟಿದ ಹಿರೇಮಠಗೆ ಅಕಾಡೆಮಿ ಗೌರವ
ವಿಕ ಸುದ್ದಿಲೋಕ ಕಲಬುರಗಿ
ಬ್ಯಾಂಕ್ ಮ್ಯಾನೇಜರ್ ಆಗಬೇಕೆಂದುಕೊಂಡಿದ್ದ ವ್ಯಕ್ತಿ ನಾಟಕ ರಂಗಕ್ಕೆ ಬಂದು ತಮ್ಮದೇ ನಾಟಕ ಕಂಪನಿ ಕಟ್ಟಿ ನಿರಂತರ ನಾಟಕಗಳನ್ನು ಆಡುತ್ತಿರುವ ವ್ಯಕ್ತಿ ಈಗ ರಾಜ್ಯ ನಾಟಕ ಅಕಾಡೆಮಿಯ 2026-27ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಿಲ್ಲೆಯ ಅಯ್ಯಣ್ಣ ಸ್ವಾಮಿ ಹಿರೇಮಠ ಪ್ರಶಸ್ತಿಗೆ ಭಾಜನರಾದವರು. ಇವರ ತಂದೆ ಈರಯ್ಯ ಸ್ವಾಮಿ ಹಿರೇಮಠ. ಇವರು ಮೂಲತಃ ಯಡ್ರಾಮಿ ತಾಲೂಕಿನ ಬಿಳ್ವಾರ ಗ್ರಾಮದವರು. ಮನೆಯಲ್ಲಿನ ತೀವ್ರ ಬಡತನ ಇವರನ್ನು ನಾಟಕ ರಂಗಭೂಮಿಗೆ ತಂದಿದೆ. ಈ ನಾಟಕ ರಂಗಭೂಮಿಯಲ್ಲಿ50 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಕಾರಣ ಇವರಿಗೆ ಈ ಬಾರಿಯ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಒಲಿದು ಬಂದಿದೆ. ಸುತ್ತಲಿನ ಜಿಲ್ಲೆ, ತಾಲೂಕುಗಳಲ್ಲಿಈಗಲೂ ಹೋಗಿ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಪೌರಾಣಿಕ, ಸಾಮಾಜಿಕ ಸೇರಿದಂತೆ ನೂರಾರು ನಾಟಕಗಳಲ್ಲಿನಟಿಸಿದ್ದಾರೆ.
*ನಾಟಕ ಆಡಿದ್ದಕ್ಕೆ ಸಹೋದರನಿಂದ ಜಗಳ
ಊರಿನಲ್ಲಿಹಣ ಹಾಕಿ ಒಂದು ನಾಟಕ ಆಡಲಾಗಿತ್ತು. ಹೊಲದಲ್ಲಿನ ಬೇವಿನ ಮರ ಮಾರಿ ನಾಟಕ ಆಡಲು ಹಣ ನೀಡಿದ್ದರಿಂದ ಇವರ ಸಹೋದರ ಅಣ್ಣನೊಂದಿಗೆ ಜಗಳವಾಡಿ ಮನೆಯಿಂದ ಹೊರ ಹಾಕಿದ್ದ. ಈ ಹಿನ್ನೆಲೆಯಲ್ಲಿಮನೆಯಿಂದ ಹೊರಬಂದು ಕಲಬುರಗಿಯಲ್ಲಿಪ್ರದರ್ಶನ ಕಾಣುತ್ತಿದ್ದ ನಾಟಕ ಕಂಪನಿಯಲ್ಲಿಬುಕಿಂಗ್ ಮಾಡುವ ನೌಕರಿ ಗಿಟ್ಟಿಸಿಕೊಂಡು ಬರುಬರುತ್ತಾ ನಾಟಕ ಮಾಡುವುದನ್ನು ಕಲಿತು ಮುಂದೆ ನಾಟಕ ಕಂಪನಿಯೇ ತೆಗೆಯಲು ನಾಂದಿಯಾಯಿತು.
*ಬ್ಯಾಂಕ್ ಮ್ಯಾನೇಜರ್ ಕನಸು: ಮೊದಲು ಉತ್ತಮವಾಗಿ ಓದಿ ಮುಂದೆ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂದು ಹಿರೇಮಠ ಅವರು ಕನಸು ಕಂಡಿದ್ದರು. ಆದರೆ, ಮನೆಯಲ್ಲಿತೀವ್ರ ಬಡತನ ಇರುವುದರಿಂದ ಹೆಚ್ಚು ಓದಲು ಆಗಲಿಲ್ಲ. ಬಿಕಾಂ ಮೊದಲ ವರ್ಷದವರೆಗೆ ಮಾತ್ರ ಓದಲು ಶಕ್ತವಾಯಿತು. ಆದರೆ, ಕೊನೆಗೆ ಇವರನ್ನು ನಾಟಕ ಕಂಪನಿಯ ಕಡೆ ಸೆಳೆತವಾಗಿ ರಂಗಭೂಮಿಯಲ್ಲೇ ತನ್ನ ಜೀವನ ಕಳೆದಿದ್ದಾರೆ. ಈಗಲೂ ನಾಟಕ ಆಡುತ್ತಿದ್ದಾರೆ.
*
ಬಾಕ್ಸ್ ...
ನಾಟಕಕಾರನಿಗೆ ಇಲ್ಲಸ್ವಂತ ಮನೆ
50 ವರ್ಷ ನಿರಂತರ ರಂಗಭೂಮಿಯಲ್ಲಿಸೇವೆ ಸಲ್ಲಿಸಿದರೂ ಅಯ್ಯಣ್ಣ ಸ್ವಾಮಿ ಹಿರೇಮಠಗೆ ಸ್ವಂತ ಮನೆ ಇಂದಿಗೂ ಇಲ್ಲ. ಇವರು ತಮ್ಮ ಅಳಿಯನ ಮನೆಯಲ್ಲಿಯೇ ಇಂದಿಗೂ ಜೀವನ ನಡೆಸುತ್ತಿದ್ದಾರೆ.
*
ಕೋಟ್ ...
ನಮ್ಮದು ಬಹಳ ಕರುಣಾಜನಕ ಕತೆ. ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ತಂದಿದೆ. ಈಗಲೂ ಕಾಲಿನ ನೋವು ಇದ್ದರೂ ನಾಟಕದಲ್ಲಿಕುಂಟುತ್ತಲೇ ನಟಿಸುತ್ತಿದ್ದೇನೆ. ಜತೆಗೆ ನನ್ನ ಮಡದಿ ಮಂಜುಳಾ ಹಿರೇಮಠ ಸಹ ನಾಟಕ ಮಾಡುತ್ತಿದ್ದಾರೆ.
- ಅಯ್ಯಣ್ಣ ಸ್ವಾಮಿ ಹಿರೇಮಠ, ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತ