ಯುಎಸ್ ಓಪನ್ ವಿಜೇತರಿಗೆ ್ಙ52 ಕೋಟಿ !

Contributed bymanjunath.gowda@timesgroup.com|Vijaya Karnataka
us open 2023 record 52 crores prize for champions
ಹೊಸದಿಲ್ಲಿ: ಮುಂಬರುವ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿಚಾಂಪಿಯನ್ ಗಳಿಗೆ ದಾಖಲೆ ಬಹುಮಾನ ಮೊತ್ತ ಪ್ರಕಟಿಸಲಾಗಿದೆ. ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಗಳು ತಲಾ ದಾಖಲೆಯ 5.5 ದಶಲಕ್ಷ ಡಾಲರ್ (52.65 ಕೋಟಿ ರೂ.)ಬಹುಮಾನ ಮೊತ್ತವನ್ನು ಪಡೆಯಲಿಧಿದ್ದಾರೆ. ಇದು ಟೂರ್ನಿಯ ಇತಿಹಾಸದಲ್ಲೇ ಅತ್ಯಧಿಕ ಬಹುಮಾನ ಮೊತ್ತವಾಗಿದೆ. ಅಮೆರಿಕನ್ ಟೆನಿಸ್ ಅಸೋಸಿಯೇಷನ್ ಗುರುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ವರ್ಷದ ಯುಎಸ್ ಓಪನ್ ನಲ್ಲಿಆಟಗಾರರಿಗೆ ನೀಡಲಾಗುವ ಒಟ್ಟು ಸಂಭಾವನೆ 108 ಮಿಲಿಯನ್ ಡಾಲರ್ ಗಳಿಗೆ ತಲುಪಲಿದೆ.