ಮಸ್ಟ್

Contributed byshubha.hegde@timesgroup.com|Vijaya Karnataka
anubandh a musical event celebrating guru disciple relationship
ಗುರು-ಶಿಷ್ಯರ ನಾದ ಸಂಗಮ ಅನುಬಂಧ

ಶಾಸ್ತ್ರೀಯ ಸಂಗೀತದಲ್ಲಿಗುರು-ಶಿಷ್ಯರ ಬಾಂಧವ್ಯಕ್ಕೆ ಗತಕಾಲದ ಇತಿಹಾಸವಿದೆ. ಗುರುವೆಂದರೆ ಶಿಷ್ಯರಿಗೆ ಕಲಿಸುವುದು ಮಾತ್ರವಲ್ಲ, ತನ್ನ ಪರಂಪರೆಯ ಮುಂದುವರಿಕೆಗೆ ಮುನ್ನುಡಿ ಬರೆಯುವುದು. ಆದರೆ, ಗುರುವಿನ ಗರಡಿಯಲ್ಲಿಪಳಗಿದ ಶಿಷ್ಯ ಗುರುವಿನೆದುರು ಕುಳಿತು ಧೈರ್ಯವಾಗಿ ಕಛೇರಿ ನೀಡುವುದೆಂದರೆ ಶಿಷ್ಯನ ಪಾಲಿಗದು ಕಷ್ಟಕರ. ಇದಕ್ಕೆ ಗುರುವಿನ ಶಿಸ್ತು, ಗುರುವಿನ ಮೇಲಿನ ಭಯಭಕ್ತಿ, ಗೌರವವೂ ಕಾರಣವಾಗಿರುತ್ತದೆ. ಅದೇ ಕಾರಣಕ್ಕೆ ಪಂ. ಬಸವರಾಜ ರಾಜಗುರುಗಳಂಥವರು ತಮ್ಮ ಶಿಷ್ಯರ ಕಾರ್ಯಕ್ರಮ ನಡೆಯುತ್ತಿದ್ದರೆ, ಶಿಷ್ಯ ಹೇಗೆ ಹಾಡುತ್ತಾನೆಂದು ತಿಳಿಯಲು ಶಿಷ್ಯನಿಗೆ ಗೊತ್ತಾಗದಂತೆ ಬಂದು ಹಿಂದಿನ ಸಾಲಿನಲ್ಲಿಕುಳಿತು ಕೇಳುತ್ತಿದ್ದರಂತೆ. ಸಾಧನೆಗೆ ಸರ್ವ ದಾರಿಗಳನ್ನು ತೋರಿದ ಗುರುವಾದರೂ ನೇರವಾಗಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಕಾರ್ಯಕ್ರಮಗಳು ನಡೆಯುವುದು ಕಡಿಮೆ. ಒಂದು ವೇಳೆ ಗುರು-ಶಿಷ್ಯರ ಪರಂಪರೆಯಲ್ಲಿಕಛೇರಿಗಳು ನಡೆಯುತ್ತಿದ್ದರೂ ಅಲ್ಲಿಅಪ್ಪಮಕ್ಕಳ ಕಛೇರಿಗಳೇ ಹೆಚ್ಚು. ಆದರೆ ಇಂಥ ರೂಢಿಗತ ಕಛೇರಿಗಳ ನಡುವೆ ‘ಅನುಬಂಧ-ಎ ಸೇಕ್ರೇಡ್ ಬಾಂಡ್ ’ ಎಂಬ ಪರಿಕಲ್ಪನೆಯ ಸಂಗೀತ ಕಾರ್ಯಕ್ರಮ ವಿಶಿಷ್ಟವೆನಿಸಲಿದೆ.
ಆಗಸ್ಟ್ 23ರಂದು ಬೆಂಗಳೂರಲ್ಲಿವಿಭಿನ್ನ ಕಲ್ಪನೆಯ ಹಿಂದೂಸ್ತಾನಿ ಸಂಗೀತ ಕಛೇರಿಗಳು ನಡೆಯಲಿವೆ. ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ಮತ್ತು ಉಡುಪಿ ಮೂಲದ ದಿ ವರಿಜಿನಲ್ ಆಭರಣ ಜ್ಯುವೆಲರ್ಸ್ ಸಹಯೋಗದಲ್ಲಿಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿಸಂಜೆ 5ರಿಂದ ‘ಅನುಬಂಧ’ ಗುರು-ಶಿಷ್ಯರ ನಾದ ಸಂಗಮ ನಡೆಯಲಿದೆ.

ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್ ತಮ್ಮ ಶಿಷ್ಯರಾದ ಅಂಕುಶ್ ನಾಯಕ್ ಅವರೊಂದಿಗೆ ಜುಗಲ್ ಬಂದಿಗೆ ಸಾಥಿ ನೀಡಲಿದ್ದಾರೆ. ಈ ಕಛೇರಿಯಲ್ಲಿತಬಲಾ ಸಾಥಿ ನೀಡುತ್ತಿರುವವರು ಮುಂಬಯಿಯ ಯೋಗೀಶ್ ಸಂಶಿ ಮತ್ತು ಅವರ ಶಿಷ್ಯ ಯಶವಂತ್ ವೈಷ್ಣವ್ .

ಬಾಕ್ಸ್

ಬನಾರಸ್ ಘರಾಣೆಯ ಸೊಬಗು

ಕಾರ್ಯಕ್ರಮದ ಇನ್ನೊಂದು ವಿಶೇಷ ಎಂದರೆ ‘ಕಶ್ಯಪ ಬಂಧು’ ಸಹೋದರರ ಗಾಯನ. ಇವರು ಹಿಂದೂಸ್ತಾನಿ ಸಂಗೀತ ದಿಗ್ಗಜರಾದ ಬನಾರಸ್ ಘರಾಣೆಯ ರಾಜನ್ -ಸಾಜನ್ ಮಿಶ್ರಾ ಅವರ ಶಿಷ್ಯರು. ಸುಮಾರು 300 ವರ್ಷಗಳ ಸುದೀರ್ಘ ಇತಿಹಾಸ ಇರುವ ಬನಾರಸ್ ಘರಾಣೆಯನ್ನು ಜಗತ್ತಿನುದ್ದಗಲಕ್ಕೂ ಪ್ರಚುರಪಡಿಸುವಲ್ಲಿಕಶ್ಯಪ ಸಹೋದರರ (ಪ್ರಭಾಕರ ಕಶ್ಯಪ-ದಿವಾಕರ ಕಶ್ಯಪ) ಕಛೇರಿಗಳು ಈಗಾಗಲೇ ಜನಮಾನಸಗೊಂಡಿವೆ. ಅನುಬಂಧದ ಮೂಲಕ ತಮ್ಮ ಖಯಾಲ್ ಪರಂಪರೆಯ ವೈಶಿಷ್ಟ್ಯವನ್ನು ಅವರು ಬೆಂಗಳೂರಿಗೆ ಉಣಬಡಿಸಲಿದ್ದಾರೆ. ಇಡೀ ಕಾರ್ಯಕ್ರಮದಲ್ಲಿಪಂ.ರವೀಂದ್ರ ಕಾಟೋಟಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

ಕೋಟ್ ಗಳು

ಗುರುಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ‘ಅನುಬಂಧ’ದಂಥ ವೇದಿಕೆಗಳ ಅಗತ್ಯವಿದೆ. ಇಲ್ಲಿಗುರು-ಶಿಷ್ಯ ಅನ್ನೋದಕ್ಕಿಂತಲೂ ಒಂದು ಇಡೀ ಪರಂಪರೆಯ ನೋಟ ಅನಾವರಣಗೊಳ್ಳುತ್ತದೆ.

-ಉಸ್ತಾದ್ ರಫೀಕ್ ಖಾನ್ | ಸಿತಾರ್ ಕಲಾವಿದ

‘ಅನುಬಂಧ’ ಎಂಬ ಹೆಸರೇ ಕಛೇರಿಯ ಮೂಲ ಆಶಯವನ್ನು ತಿಳಿಸುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತದ ಮೂಲವನ್ನು ಅರಿಯಲು ಇಂಥ ಕಛೇರಿಗಳು ನಡೆಯಬೇಕು.

-ಪ್ರೊ.ಎಲ್ . ನರೇಂದ್ರ ನಾಯಕ್ | ಉಪಾಧ್ಯಕ್ಷರು, ಸಂಗೀತ ಭಾರತಿ ಫೌಂಡೇಶನ್