ದಿನ ವಿಶೇಷ ಪರಿಷ್ಕೃತ-2

Contributed byJaya shree|Vijaya Karnataka
senior citizens day celebration 2026 effective social welfare initiatives
ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ವಿಶ್ವ ಹಿರಿಯ ನಾಗರಿಕರ ದಿನವನ್ನು ಪ್ರತಿ ವರ್ಷ ಆಗಸ್ಟ್ 21ರಂದು ಆಚರಿಸಲಾಗುತ್ತಿದ್ದು, ಹಿರಿಯರ ಕೊಡುಗೆ, ಅನುಭವ ಮತ್ತು ಜ್ಞಾನವನ್ನು ಗೌರವಿಸುವುದು, ಅವರ ಹಕ್ಕುಗಳು, ಆರೋಗ್ಯ, ಸುರಕ್ಷತೆ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. 2026ರ ಆಚರಣೆಯು ಎಲ್ಲಾವಯಸ್ಸಿನವರಿಗೂ ಡಿಜಿಟಲ್ ಸಮಾನತೆ ಧ್ಯೇಯವನ್ನು ಒಳಗೊಂಡಿದೆ.
ವಿವಿಧ ದೇಶಗಳಲ್ಲಿಹಿರಿಯ ನಾಗರಿಕರು: ಕಾಲಕ್ರಮೇಣ ಹಿರಿಯ ನಾಗರಿಕರ ಸಂಖ್ಯೆಯು ಹೆಚ್ಚುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2023ರಲ್ಲಿಜಗತ್ತಿನಲ್ಲಿ60 ವರ್ಷ ಮೇಲ್ಪಟ್ಟವರ ಸಂಖ್ಯೆ ಸುಮಾರು 110 ಕೋಟಿಯಷ್ಟಿತ್ತು. 2050ರ ವೇಳೆಗೆ ಇದು 210 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಯುವಜನರ ದೇಶವೆಂದು ಗುರುತಿಸಿಕೊಂಡಿರುವ ಭಾರತವೂ ಈಗ ನಿಧಾನವಾಗಿ ವಯೋವೃದ್ಧ ರಾಷ್ಟ್ರದತ್ತ ಸಾಗುತ್ತಿದೆ. ಯುಎನ್ ಎಫ್ ಪಿಎಯ 2023 ಪ್ರಕಾರ, 2022ರಲ್ಲಿದೇಶದ ಒಟ್ಟು ಜನಸಂಖ್ಯೆಯಲ್ಲಿ60 ವರ್ಷ ಮೇಲ್ಪಟ್ಟವರ ಪಾಲು ಶೇ.10.5ರಷ್ಟಿತ್ತು. 2050ರ ವೇಳೆಗೆ ಅದು ಶೇ.20.8ಕ್ಕೆ ಏರುವ ನಿರೀಕ್ಷೆಯಿದೆ. ಜಪಾನ್ ವಯೋವೃದ್ಧ ಜನಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು, ಹಿರಿಯ ನಾಗರಿಕರ ಸಂಖ್ಯೆ 3.624 ಕೋಟಿ, ಅಂದರೆ ಒಟ್ಟು ಜನಸಂಖ್ಯೆಯ ಶೇ.29.3 ಆಗಿದೆ. ಒಟ್ಟು ಜನಸಂಖ್ಯೆಯಲ್ಲಿಇಟಲಿಯಲ್ಲಿಶೇ.24.3 ಹಾಗೂ ದಕ್ಷಿಣ ಕೊರಿಯಾದಲ್ಲಿಶೇ.19.5 ಹಿರಿಯ ನಾಗರಿಕರಿದ್ದಾರೆ. ಚೀನಾದಲ್ಲಿಶೇ.22, ಜರ್ಮನಿಯಲ್ಲಿಶೇ. 22.4ರಷ್ಟಿದೆ. ಫ್ರಾನ್ಸ್ ನಲ್ಲಿಸುಮಾರು ಶೇ. 21.7 ಹಾಗೂ ಅಮೆರಿಕದಲ್ಲಿಶೇ. 17.7ರಷ್ಟಿದೆ.

ಭಾರತ ಸರಕಾರವು ಹಿರಿಯ ನಾಗರಿಕರ ಆರೋಗ್ಯ , ಆರ್ಥಿಕ ಭದ್ರತೆ, ಸುರಕ್ಷತೆಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿಪ್ರಮುಖವಾದುವೆಂದರೆ:

- ಅಟಲ್ ವಯೋ ಅಭ್ಯುದಯ ಯೋಜನೆ: ಹಿರಿಯ ನಾಗರಿಕರ ಜೀವನಮಟ್ಟ ಸುಧಾರಿಸುವ ಉದ್ದೇಶ ಹೊಂದಿರುವ ಪ್ರಮುಖ ಕೇಂದ್ರ ಯೋಜನೆಯಾಗಿದ್ದು, ಇದರಡಿ ಹಿರಿಯರಿಗಾಗಿ ವಸತಿ, ಆಹಾರ, ವೈದ್ಯಕೀಯ ಆರೈಕೆ ಮತ್ತು ಇತರ ಮೂಲ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮಗಳಿಗೆ ಬೆಂಬಲ ನೀಡಲಾಗುತ್ತದೆ. ಯೋಜನೆಯ ವಿವಿಧ ಘಟಕಗಳ ಮೂಲಕ ಹಿರಿಯ ನಾಗರಿಕರ ಮನೆಗಳು, ರಾಜ್ಯ ಕ್ರಿಯಾ ಯೋಜನೆಗಳು, ಸಹಾಯಕ ಸಾಧನಗಳು, ಸಕ್ರಿಯ ವೃದ್ಧಾಪ್ಯ ಮತ್ತು ಹಿರಿಯರ ಆರೈಕೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

- ರಾಷ್ಟ್ರೀಯ ಹಿರಿಯರ ಆರೋಗ್ಯ ಆರೈಕೆ ಕಾರ್ಯಕ್ರಮ: ಹಿರಿಯರಿಗೆ ಪ್ರತ್ಯೇಕ ಮತ್ತು ಸಮಗ್ರ ಆರೋಗ್ಯ ಸೇವೆ ಒದಗಿಸುವುದು ಇದರ ಉದ್ದೇಶ. ಸರಕಾರಿ ಆರೋಗ್ಯ ವ್ಯವಸ್ಥೆಯ ವಿವಿಧ ಹಂತಗಳಲ್ಲಿತಪಾಸಣೆ, ಚಿಕಿತ್ಸೆ, ಪುನರ್ವಸತಿ ಮತ್ತು ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವ ವ್ಯವಸ್ಥೆಯನ್ನು ಇದು ಬೆಂಬಲಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಆರೋಗ್ಯ ವ್ಯವಸ್ಥೆಯ ಮೂಲಕ ಹಿರಿಯರಿಗೆ ವಿಶೇಷ ಆರೋಗ್ಯ ಸೇವೆಗಳನ್ನು ತಲುಪಿಸುವ ಗುರಿ ಹೊಂದಿದೆ.

ರಾಷ್ಟ್ರೀಯ ವಯೋಶ್ರೀ ಯೋಜನೆ: ವಯೋಸಹಜ ಅಂಗವೈಕಲ್ಯ ಅಥವಾ ದೈಹಿಕ ತೊಂದರೆ ಹೊಂದಿರುವ ಅರ್ಹ ಹಿರಿಯರಿಗೆ ಸಹಾಯಕ ಸಾಧನಗಳನ್ನು ಒದಗಿಸುವ ಯೋಜನೆಯಾಗಿದೆ. ದೃಷ್ಟಿ, ಶ್ರವಣ, ಚಲನೆ ಸೇರಿದಂತೆ ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿನೆರವಾಗುವ ಸಾಧನಗಳನ್ನು ಒದಗಿಸುವ ಮೂಲಕ ಹಿರಿಯರು ಹೆಚ್ಚು ಸ್ವಾವಲಂಬಿಯಾಗಿ ಬದುಕಲು ಸಹಾಯ ಮಾಡುವುದು ಇದರ ಉದ್ದೇಶ. ಇದು ಅ್ಖ್ಗಅ್ಗ ಅಡಿಯಲ್ಲಿಕಾರ್ಯನಿರ್ವಹಿಸುತ್ತದೆ.

- ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ: ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮದಡಿ ಜಾರಿಯಲ್ಲಿರುವ ಈ ಯೋಜನೆಯು ಅರ್ಹ ವಯೋವೃದ್ಧರಿಗೆ ಸಾಮಾಜಿಕ ಭದ್ರತೆಯ ರೂಪದಲ್ಲಿಆರ್ಥಿಕ ನೆರವು ಒದಗಿಸುವ ಉದ್ದೇಶ ಹೊಂದಿದೆ. ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ಹಿರಿಯರಿಗೆ ಇದು ಪ್ರಮುಖ ಬೆಂಬಲವಾಗಿದೆ.

ಕಾನೂನಿನ ರಕ್ಷಣೆ: ಯೋಜನೆಗಳ ಜೊತೆಗೆ ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯಿದೆ, 2007 ಜಾರಿಯಲ್ಲಿದೆ. ತಮ್ಮನ್ನು ತಾವು ನಿರ್ವಹಿಸಿಕೊಳ್ಳಲು ಸಾಧ್ಯವಾಗದ ಪೋಷಕರು ಅಥವಾ ಹಿರಿಯ ನಾಗರಿಕರಿಗೆ ಅಗತ್ಯ ಪಾಲನೆ ದೊರೆಯುವಂತೆ ಕಾನೂನು ವ್ಯವಸ್ಥೆ ಮಾಡಲಾಗಿದೆ. ನಿರ್ಲಕ್ಷ್ಯ ಅಥವಾ ಪಾಲನೆ ನಿರಾಕರಣೆಯ ಸಂದರ್ಭಗಳಲ್ಲಿನಿರ್ವಹಣಾ ನ್ಯಾಯಮಂಡಳಿಯ ಮೂಲಕ ಪರಿಹಾರ ಪಡೆಯಲು ಅವಕಾಶವಿದೆ.