ಆತ್ಮಹತ್ಯೆ ಪ್ರಕರಣ: ಪಿಐ ನಾರಾಯಣ ಅಮಾನತು

Contributed byravindra.telagadi@timesgroup.com|Vijaya Karnataka
kanakagiri suicide case police inspector narayana suspended
ಆತ್ಮಹತ್ಯೆ ಪ್ರಕರಣ : ಪಿಐ ನಾರಾಯಣ ಅಮಾನತು

ವಿಕ ಸುದ್ದಿಲೋಕ ಕನಕಗಿರಿ( ಕೊಪ್ಪಳ )
ನಿವೇಶನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬಸವರಾಜ ರೆಡ್ಡಿ ಆತ್ಮಹತ್ಯೆ ಪ್ರಕರಣವನ್ನು ಸರಿಯಾಗಿ ನಿರ್ವಹಿಸದ ಆರೋಪ ಆಧರಿಸಿ, ಕನಕಗಿರಿ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸೇರಿ ಇಬ್ಬರು ಸಿಬ್ಬಂದಿಯನ್ನು ಅಮಾನತುಮಾಡಿ ಬಳ್ಳಾರಿ ಐಜಿಪಿ ಡಾ.ಪಿ.ಎಸ್ .ಹರ್ಷ ಅವರು ಗುರುವಾರ ಆದೇಶಿಸಿದ್ದಾರೆ.

ಪಿಐ ನಾರಾಯಣ ಹಾಗೂ ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಲಕ್ಷ್ಮಣ ಅಮಾನತುಗೊಂಡವರು. ಕೊಪ್ಪಳ ಎಸ್ಪಿ ಡಾ.ರಾಮ್ ಎಲ್ .ಅರಸಿದ್ದಿ ಅವರ ವರದಿ ಆಧರಿಸಿ ಐಜಿಪಿಯವರು ಈ ಕ್ರಮ ಕೈಗೊಂಡಿದ್ದಾರೆ. ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳ ವಿರುದ್ಧ ಬಸವರಾಜ ರೆಡ್ಡಿ ನೀಡಿದ ದೂರನ್ನು ಸ್ವೀಕರಿಸದೇ ಕನಕಗಿರಿ ಠಾಣೆಯ ಸಿಬ್ಬಂದಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಮೃತರ ಕುಟುಂಬದವರ ಪ್ರತಿಭಟನೆ ನಡೆಸಿದ್ದರು. ಬಸವರಾಜ ರೆಡ್ಡಿ ಅವರು ಆ.15ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮರುದಿನ ಕೊನೆಯುಸಿರೆಳೆದರು. ಸಾವಿನ ವಿಷಯ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು ಹಾಗೂ ನೂರಾರು ಸಾರ್ವಜನಿಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐವರು ಆರೋಪಿಗಳನ್ನು ಪೊಲೀಸರು ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.