ಬಂಧಿತರ ಸಂಖ್ಯೆ 7 ಕ್ಕೆ ಏರಿಕೆ

Contributed byravindra.telagadi@timesgroup.com|Vijaya Karnataka
severe blackmail and sexual assault arrests rise to 7
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ , ವಿಡಿಯೊ ಚಿತ್ರಿಕರಿಸಿ ಬ್ಲ್ಯಾಕ್ ಮೇಲ್

ಬಂಧಿತರ ಸಂಖ್ಯೆ 7 ಕ್ಕೆ ಏರಿಕೆ
ವಿಕ ಸುದ್ದಿಲೋಕ ಕೊಪ್ಪಳ

ತಾಲೂಕಿನ ಗ್ರಾಮವೊಂದರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಖಾಸಗಿ ದೃಶ್ಯವನ್ನು ಮೊಬೈಲ್ ನಲ್ಲಿಚಿತ್ರೀಕರಿಸಿ ಸಂಗ್ರಹಿಸಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಆಧರಿಸಿ ಐವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಆರೋಪಿಗಳಾದ ಕಿರಣಕುಮಾರ ತೊಂಡಿಹಾಳ ಹಾಗೂ ಹರ್ಷಾ ಪೊಲೀಸ್ ಪಾಟೀಲ್ ಎನ್ನುವವರನ್ನು ಆ.10ರಂದು ಬಂಧಿಸಲಾಗಿತ್ತು. ರಮೇಶ, ಮಲ್ಲಪ್ಪ, ಶಿದ್ಲಿಂಗಪ್ಪ, ಕಿರಣಕುಮಾರ ಆದೋನಿ ಮತ್ತು ಫಕೀರಪ್ಪ ಧರ್ಮಾಪುರ ಬಂಧನದೊಂದಿಗೆ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಕಿರಣಕುಮಾರ ತೊಂಡಿಹಾಳ ಹಾಗೂ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು. ಬಾಲಕಿಯನ್ನು ಪುಸಲಾಯಿಸಿದ ಯುವಕ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಅಂದಿನ ದೃಶ್ಯವನ್ನು ವಿಡಿಯೊ ಮಾಡಿಕೊಂಡಿದ್ದ. ಎರಡು ವರ್ಷಗಳ ಬಳಿಕ ಈ ವಿಡಿಯೊವನ್ನು ತನ್ನ ಸ್ನೇಹಿತ ಹರ್ಷಾ ಪೊಲೀಸ್ ಪಾಟೀಲ್ ನಿಗೆ ತೊರಿಸಿದ್ದ. ಆತ ವಿಡಿಯೊ ತುಣುಕನ್ನು ತನ್ನ ಮೊಬೈಲ್ ಗೆ ಶೇರ್ ಮಾಡಿಕೊಂಡಿದ್ದ. ಬಾಲಕಿಯ ಬಳಿ ತೆರಳಿ ವಿಡಿಯೊ ತೊರಿಸಿ ಹೆದರಿಸಿದ್ದ. ಆತನೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಷಯವನ್ನು ಬಹಿರಂಗಪಡಿಸುವುದಾಗಿ ರಮೇಶ ಹಾಗೂ ಮಲ್ಲಪ್ಪ ಎನ್ನುವವರು ಹರ್ಷಾ ಹಾಗೂ ಕಿರಣಕುಮಾರ ಅವರ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಇದಾದ ಬಳಿಕ ಶಿದ್ಲಿಂಗಪ್ಪ, ಕಿರಣಕುಮಾರ ಆದೋನಿ, ಫಕೀರಪ್ಪ ಎನ್ನುವವರು ಬಾಲಕಿಯ ಖಾಸಗಿ ವಿಡಿಯೊ ಇಟ್ಟುಕೊಂಡು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿತಿಳಿಸಲಾಗಿದೆ. 7 ಜನರ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.