17ರಿಂದ ಶ್ರಾವಣ ಸಂಭ್ರಮ

Contributed bymudholvk@gmail.com|Vijaya Karnataka
shravana month celebration 11 day discourse program
17ರಿಂದ ಶ್ರಾವಣ ಸಂಭ್ರಮ

ವಿಕ ಸುದ್ದಿಲೋಕ ಮುಧೋಳ
‘‘ಶ್ರಾವಣ ಮಾಸದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಆ.17ರಿಂದ 27ರವರೆಗೆ 11 ದಿನಗಳ ಕಾಲ ಗವಿಮಠದ ಇಂಗಳಗಿಯ ‘ಮೃತ್ಯುಂಜಯ ಶ್ರೀಗಳ ಜೀವನ ದರ್ಶನ’ ಕುರಿತು ಪ್ರವಚನ ಆಯೋಜಿಸಲಾಗಿದೆ’’ ಎಂದು ಶ್ರಾವಣ ಸಂಭ್ರಮದ ಪ್ರವಚನ ಸಮಿತಿ ಅಧ್ಯಕ್ಷ ಎಂ.ಜಿ.ದಾಸರ ಹೇಳಿದ್ದಾರೆ.

ನಗರದ ಕಾನಿಪದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ನಗರದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿಆ.17ಕ್ಕೆ ಸಂಜೆ 7 ರಿಂದ 8ರವರೆಗೆ ತೊರವಿ ವಿಜಯಪುರದ ಸಿದ್ದಲಿಂಗೇಶ್ವರ ಮಠದ ಸಿದ್ಧಲಿಂಗ ಶ್ರೀ ಪ್ರವಚನ ನಡೆಸಿಕೊಡಲಿದ್ದಾರೆ. ವಿಜಯನಗರದ ವಿಶ್ರಾಂತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಚಾಲನೆ ನೀಡಲಿದ್ದಾರೆ. ಗವಿಮಠದ ಬಸವಲಿಂಗ ಶ್ರೀ, ವಿಜಯಪುರದ ಸ್ವಾಮಿನಾಥ ಶ್ರೀ, ಯಡಹಳ್ಳಿ ಇಂಗಳಗಿಯ ಚಂದ್ರಶೇಖರ ಶ್ರೀ ಭಾಗವಹಿಸಲಿದ್ದಾರೆ’’ ಎಂದು ತಿಳಿಸಿದರು.

ಸಾಹಿತಿ ಡಾ.ಶಿವಾನಂದ ಕುಬಸದ ಮಾತನಾಡಿ, ‘‘ತಿಂಗಳ ಕಾಲ ನಡೆಯುತ್ತಿದ್ದ ಶ್ರಾವಣ ಮಾಸದ ಸಂಭ್ರಮವನ್ನು ಈಗ 11 ದಿನಕ್ಕೆ ಸೀಮಿತಗೊಳಿಸಲಾಗಿದೆ’’ ಎಂದರು.

ಆರ್ .ಜಿ.ಪಾಟೀಲ ಮಾತನಾಡಿ, ‘‘ಸಮಾರೋಪ ಸಮಾರಂಭದಲ್ಲಿಇಂಗಳಗಿ ಗ್ರಾಮಸ್ಥರಿಂದ ಆ.27ಕ್ಕೆ ಅನ್ನಪ್ರಸಾದ ಕಲ್ಪಿಸಲಾಗಿದೆ’’ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ರಮೇಶ ಅಣ್ಣಿಗೇರಿ, ಮಹಾದೇವಪ್ಪ ದಾಸರಡ್ಡಿ, ಮಹಾದೇವಪ್ಪ ಮಡಿವಾಳರ, ಪಿ.ಬಿ.ಹಿರೇಮಠ ಇತರರು ಇದ್ದರು.