---ಹಿಂದೆಲ್ಲವಾಹನದ ಹಾರ್ಸ್ ಪವರ್ ಎಷ್ಟೆಂದು ಕೇಳುತ್ತಿದ್ದರೆ ಇಂದು ಯಾವ ಸಾಫ್ಟ್ ವೇರ್ ಇದೆ ಎಂದು ಕೇಳಲಾಗುತ್ತಿದೆ. ಕಾರುಗಳಂತೂ ಇಂದು ಚಕ್ರಗಳ ಮೇಲಿನ ಸ್ಮಾರ್ಟ್ ಫೋನ್ ಗಳಂತಾಗುವ ದಿನ ದೂರವಿಲ್ಲ.
ಧಿಧಿಧಿ---
ಸುಶಾಂತ್ ಬನಾರಿ
---
ಕಾರಿನ ಎಂಜಿನ್ ತಂತ್ರಜ್ಞಾನ ಹೇಗಿದೆ, ಎಷ್ಟು ಹಾರ್ಸ್ ಪವರ್ ಉತ್ಪಾದಿಸುತ್ತದೆ ಎಂಬ ಪ್ರಶ್ನೆಗಳಿಗಿಂತ ಕಾರಿನಲ್ಲಿಯಾವ ಸಾಫ್ಟ್ ವೇರ್ ಇದೆ ಎಂದು ಕೇಳಬೇಕಾದ ದಿನಗಳು ಬರುತ್ತಿವೆ. ಈಗಾಗಲೇ ವಾಹನಗಳಲ್ಲಿಸದ್ದಿಲ್ಲದ ಕ್ರಾಂತಿಗೆ ಸಾಫ್ಟ್ ವೇರ್ ಕಾರಣವಾಗಿದೆ. ಫೋನು ಲ್ಯಾಪ್ ಟಾಪ್ ಕೊಳ್ಳುವಾಗ ಆಪರೇಟಿಂಗ್ ಸಿಸ್ಟಮ್ ಯಾವುದು ಎಂಬ ಪ್ರಶ್ನೆ ಬಂದಷ್ಟು ಪ್ರಬಲವಾಗಿ ಕಾರಿನಲ್ಲಿಇರುವ ಸಾಫ್ಟ್ ವೇರ್ ಯಾವುದು ಎಂದು ಕಾರು ಕೊಳ್ಳುವವರು ಕೇಳುವುದಕ್ಕೆ ಈಗಿನ್ನೂ ಅಷ್ಟಾಗಿ ಆರಂಭಿಸಿಲ್ಲ. ಆದರೆ ಗ್ರಾಹಕರು ಬದಲಾಗಲಿರುವುದಂತೂ ಸನ್ನಿಹಿತ.
ಕಾರಿನ ಡ್ಯಾಶ್ ಬೋರ್ಡಿನಲ್ಲಿಈ ತುದಿಯಿಂದ ಆ ತುದಿಯವರೆಗೂ ಸ್ಕ್ರೀನುಗಳಿರುವಾಗ, ಅವುಗಳನ್ನು ಮುಟ್ಟಿದಾಗ ಪ್ರತಿಕ್ರಿಸಲು ಬೇಕಾಗುವ ಸಮಯ, ಅವುಗಳ ಸ್ಟೋರೇಜ್ ಸಾಮರ್ಥ್ಯ ಇತ್ಯಾದಿಗಳೆಲ್ಲಮುಖ್ಯವಾಗುತ್ತವೆ. ಇನ್ನೊಂದಡೆ ವಾಹನ ವಿನ್ಯಾಸಕಾರರಿಗೆ ಸಾಫ್ಟ್ ವೇರ್ ಗಳ ಅಗತ್ಯ ಮತ್ತಷ್ಟು ಹೆಚ್ಚು. ಏಕೆಂದರೆ ಇಷ್ಟು ವರ್ಷ ವಾಹನಗಳ ಇಂಜಿನ್ ನಿಯಂತ್ರಣಕ್ಕೆ ನಾವು ಸಾಮಾನ್ಯವಾಗಿ ಚಿಪ್ ಎಂದು ಕರೆಯಲ್ಪಡುವ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ ಗಳು ಬಳಕೆಯಾಗುತ್ತಿದ್ದವು. ಆದರೆ ಈ ಚಿಪ್ ಗಳಿಗೆ ಸಾಕಷ್ಟು ಮಿತಿಗಳಿವೆ. ನಿಗದಿತ ಕಾರ್ಯಕ್ಕೆ ವಿನ್ಯಾಸ ಮಾಡಿ ಅಳವಡಿಸಿದ ಮೇಲೆ ಅದರಲ್ಲಿಬದಲಾವಣೆಗಳು ಸಾಧ್ಯವಿಲ್ಲ.
ಆದರೆ ಸಾಫ್ಟ್ ವೇರ್ ಹಾಗಲ್ಲ. ಕಂಪನಿಗಳು ಕಾರನ್ನು ಮಾರಾಟ ಮಾಡಿದ ಮೇಲೆ ಕೂಡ ಮತ್ತೊಂದೆನೋ ಹೊಸತನ್ನು ಕಂಡುಕೊಂಡಾಗ ಸಾಫ್ಟ್ ವೇರ್ ಅಪ್ಡೇಟ್ ಮಾಡಬಹುದು. ಇತ್ತೀಚಿನ ಹಲವು ಕಾರುಗಳಲ್ಲಿಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿಸಿಮ್ ಕಾರ್ಡ್ ಅಳವಡಿಕೆಗೂ ಅವಕಾಶವಿರುವ ಕಾರಣ, ಸರ್ವಿಸ್ ಸೆಂಟರ್ ಗೆ ಕೊಂಡೊಯ್ಯದೆ ಮೊಬೈಲ್ ನೆಟ್ವರ್ಕ್ ಬಳಸಿ ಸಾಫ್ಟ್ ವೇರನ್ನು ಅಪ್ಡೇಟ್ ಮಾಡಿಕೊಳ್ಳಬಹುದು. ಇವಿಗಳಲ್ಲಂತೂ ಅದೇ ಬ್ಯಾಟರಿ ಅದೇ ಮೋಟಾರ್ ಇದ್ದಾಗಿಯೂ ಹೊಸ ಸಾಫ್ಟ್ ವೇರ್ ನಿಂದ ವಾಹನದ ರೇಂಜ್ ಹಾಗೂ ಪವರ್ ಹೆಚ್ಚಾದ ಉದಾಹರಣೆಗಳಿವೆ.
ಸಾಂಪ್ರದಾಯಿಕ ಇಂಧನ ಬಳಸುವ ವಾಹನಗಳಲ್ಲೂ, ಇಂಧನ ಮಿಶ್ರಣ ಪ್ರಮಾಣ, ಅಗತ್ಯವಿಲ್ಲದಾಗ ಎಂಜಿನ್ ನ ಕೆಲವು ಸಿಲಿಂಡರ್ ಗಳನ್ನು ಸ್ಥಗಿತಗೊಳಿಸಿ ಇಂಧನ ಉಳಿಸುವ ವಿಧಾನ ಇತ್ಯಾದಿಗಳನ್ನು ಸಾಫ್ಟ್ ವೇರ್ ನಿರ್ವಹಿಸುತ್ತದೆ. ಅದರಲ್ಲೂಪ್ಲಗ್ ಇನ್ ಹೈಬ್ರಿಡ್ , ಅಂದರೆ ಮೂಲತಃ ಎಲೆಕ್ಟ್ರಿಕ್ ವಾಹನವಾಗಿದ್ದು ಬ್ಯಾಟರಿ ಚಾಜ್ ರ್ ಮಾಡಲು ಜನರೇಟರ್ ರೀತಿ ಕೆಲಸ ಮಾಡುವ ಸಣ್ಣ ಎಂಜಿನ್ ಹೊಂದಿರುವ ವಾಹನಗಳಲ್ಲಿಹತ್ತು ಹಲವು ದತ್ತಾಂಶಗಳನ್ನು ಏಕಕಾಲಕ್ಕೆ ಪರಿಶೀಲಿಸಿ ವಾಹನದ ವ್ಯವಸ್ಥೆಗಳನ್ನು ನಿರ್ವಹಿಸಲು ಸಾಫ್ಟ್ ವೇರ್ ನಿಂದ ಮಾತ್ರವೇ ಸಾಧ್ಯ.
ಮಹಿಂದ್ರ ತನ್ನ ಬಿಇ6ನಲ್ಲಿಈಗಾಗಲೇ ಗೂಗಲ್ ಜೆಮಿನಿ ಎಐ ಅಳವಡಿಸಿದೆ. ಹುಂಡೈ, ಕಿಯಾ, ಎಂಜಿ ಬ್ರಾಂಡ್ ಗಳು ವಾಯ್ ್ಸ ಮೂಲಕ ನಿರ್ವಹಿಸಬಹುದಾದ ಸೌಲಭ್ಯಗಳನ್ನ ಅಳವಡಿಸಿವೆ. ಟಾಟಾ ಸಿಯಾರಾದ ಸಾಫ್ಟ್ ವೇರ್ ಕಾರಿನ ದುರಸ್ತಿಗೂ ಸಹಾಯ ಮಾಡುತ್ತದೆ, ಅಂದರೆ ಕಾಲಕ್ರಮೇಣ ಏನೆಲ್ಲಾರಿಪೇರಿಗಳು ಆಗಬೇಕು ಎಂಬುದನ್ನು ಸ್ವತಃ ಕಾರೇ ಹೇಳುತ್ತದೆ. ಅಡಾಸ್ ಸೌಲಭ್ಯವಿರುವ, ಅಂದರೆ ಅಪಾಯದ ಸಂದರ್ಭಗಳಲ್ಲಿತನ್ನಿಂದ ತಾನೇ ಬ್ರೇಕ್ ಹಾಕುವ, ತಿರುವುಗಳಲ್ಲಿಅಕಸ್ಮಾತ್ ಡ್ರೆತ್ರೖವರ್ ಮೈಮರೆತರೂ ತನ್ನನ್ನು ತಾನೇ ಸರಿಯಾದ ಫಥದಲ್ಲಿಕೊಂಡೊಯ್ಯುವ ಲೆವೆಲ್ 2 ಹಾಗೂ ಮೇಲ್ಮಟ್ಟ ಅಡಾಸ್ ಸೌಲಭ್ಯಗಳಿರುವ ವಾಹನಗಳಂತೂ ಬಹುಪಾಲು ಸಾಫ್ಟ್ ವೇರನ್ನೇ ಅವಲಂಬಿಸಿದೆ.
ಒಂದೇ ಸಾಫ್ಟ್ ವೇರ್ ಬಳಕೆ ಸಾಧ್ಯತೆ
ಪ್ರಸ್ತುತ ಈ ಹಂತದಲ್ಲಿಇರುವ ವಾಹನಗಳ ಸಾಫ್ಟ್ ವೇರುಗಳಲ್ಲಿಹಲವು ಮಿತಿಗಳೂ ಇವೆ. ಈ ಹಿಂದೆ ಫೋನುಗಳಲ್ಲಿಪ್ರತಿ ಕಂಪನಿಯೂ ತನ್ನದೇ ಆದ ವಿವಿಧ ಸಾಫ್ಟ್ ವೇರ್ ಬಳಕೆ ಮಾಡುತ್ತಿತ್ತು. ಆದರೆ ಸ್ಮಾರ್ಟ್ ಫೋನ್ ಕ್ಷೇತ್ರ ವಿಸ್ತಾರಗೊಂಡಂತೆ ಐಒಎಸ್ ಹಾಗೂ ಆಂಡ್ರಾಯ್ಡ್ ಸುಸ್ಥಿರ ಸಾಫ್ಟ್ ವೇರ್ ಗಳಾಗಿ ಉಳಿದುಕೊಂಡವು. ಹಾಗೆಯೇ ಸದ್ಯಕ್ಕೆ ಒಂದೊಂದು ವಾಹನ ಕಂಪನಿಯೂ ಒಂದೊಂದು ಬಗೆಯ ಸಾಫ್ಟ್ ವೇರ್ ಬಳಸುತ್ತಿವೆ. ಇವೆಲ್ಲಕ್ರೋಡೀಕೃತವಾಗಿ ಎಲ್ಲವಕ್ಕೂ ಆಗುವ ಒಂದೇ ಸಾಫ್ಟ್ ವೇರ್ ಬರುವ ಸಾಧ್ಯತೆ ಹೆಚ್ಚು.
ಜತೆಗೆ ಸದ್ಯ ವಾಹನ ಸಾಫ್ಟ್ ವೇರ್ ಗಳು ವಾಹನ ನಿಯಂತ್ರಣಕ್ಕೆ ಬಳಕೆಯಾಗುತ್ತಿವೆಯೇ ಹೊರತು ಆ ದತ್ತಾಂಶ ವಿಶ್ಲೇಷಣೆ ಹಾಗೂ ಭವಿಷ್ಯದ ತಂತ್ರಜ್ಞಾನ ಅಭಿವೃದ್ಧಿಗಾಗಿ ಬಳಕೆಯಾಗುತ್ತಿಲ್ಲ. ಉದಾಹರಣೆಗೆ ಗೂಗಲ್ ತನ್ನ ಮ್ಯಾಫ್ಸ್ ಅಪ್ಲಿಕೇಶನ್ ಗಾಗಿ ನಾವಿರುವ ಸ್ಥಳ, ಚಲಿಸುತ್ತಿರುವ ವೇಗ ಇತ್ಯಾದಿಗಳನ್ನು ಬಳಸಿಕೊಳ್ಳುತ್ತದೆ. ಇಂಥ ಡೇಟಾವನ್ನು ಸಾಮೂಹಿಕವಾಗಿ ಬಳಸಿಕೊಳ್ಳುತ್ತಿರುವ ಕಾರಣವೇ ನಮಗೆ ಗೂಗಲ್ ಮ್ಯಾಪ್ ನೋಡಿಗಾದ ಟ್ರಾಫಿಕ್ ಜ್ಯಾಮ್ ಹೇಗಿದೆ, ಬದಲಿ ರಸ್ತೆಯ ಆಯ್ಕೆಗಳು ಯಾವುದಿವೆ ಎಂದು ಕಾಣುತ್ತದೆ. ಹಾಗೆ ಅದೇ ಪ್ರಮಾಣದಲ್ಲಿಕಾರುಗಳಿಂದಲೇ ನೇರವಾಗಿ ದತ್ತಾಂಶ ಸಂಗ್ರಹಣೆ ಸಾಧ್ಯವಾಗಾದ ವೇಗ ನಿಯಂತ್ರಣ, ಅಪಘಾತ ತಡೆಗಟ್ಟುವಿಕೆ, ಸುಲಭ ಟೋಲ್ ಸಂಗ್ರಹಣೆ ಅಲ್ಲದೆ ಸದ್ಯಕ್ಕೆ ನಮ್ಮ ಊಹೆಗೂ ನಿಲುಕದ ಕಾರ್ಯಗಳು ಸಾಧ್ಯವಿವೆ.
ಒಟ್ಟಿನಲ್ಲಿವಾಹನಗಳ ಆತ್ಮ ಎಂಬಂತಿದ್ದ ಎಂಜಿನ್ ಸ್ಥಾನವನ್ನು ಸಾಫ್ಟ್ ವೇರ್ ಈಗಾಗಲೇ ಸದ್ದಿಲ್ಲದೆ ಆಕ್ರಮಿಸಿಕೊಳ್ಳುತ್ತಿದೆ.