ಕೃಷ್ಣ ಜನ್ಮಾಷ್ಟಮಿ ದಿನ ಆಯೋಜನೆ | ಸಂಗಮೇಶ ನಿರಾಣಿ ಹೇಳಿಕೆ
ಹಿಪ್ಪರಗಿಯಲ್ಲಿಕೃಷ್ಣಾ ಆರತಿವಿಕ ಸುದ್ದಿಲೋಕ ಜಮಖಂಡಿ
‘‘ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ಗಂಗಾರತಿ ಮಾದರಿಯಲ್ಲಿಕೃಷ್ಣಾ ಪುಣ್ಯ ಸ್ನಾನ-ಕೃಷ್ಣಾ ಆರತಿಯನ್ನು ರೈತರ ಸಮ್ಮುಖದಲ್ಲಿಅರ್ಥಪೂರ್ಣವಾಗಿ ಜರುಗಲಿದೆ,’’ ಎಂದು ಎಂಆರ್ ಎನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.
ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಠದ ಆವರಣದಲ್ಲಿನಡೆದ ಕೃಷ್ಣಾ ನದಿ ತೀರದ ಎಡ ಮತ್ತು ಬಲ ಗ್ರಾಮದ ರೈತರ ಪೂರ್ವಭಾವಿ ಸಭೆಯಲ್ಲಿಅವರು ಮಾತನಾಡಿದರು.
‘‘ಕೃಷ್ಣಾ ನದಿಯಿಂದ ಜೀವನ ಕಟ್ಟಿಕೊಂಡಿರುವ ರೈತರಿಂದ ಕೃಷ್ಣಾ ತಾಯಿಗೆ ಗೌರವ ನೀಡುವ ನಿಟ್ಟಿನಲ್ಲಿಕೃಷ್ಣಾರತಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಹೆಸರಾಂತ ಪೂಜ್ಯರು, ಉತ್ತರ ಪ್ರದೇಶದ ಗಂಗಾರತಿ ಸಮಿತಿ ಪದಾಧಿಕಾರಿಗಳು ಹಾಗೂ ಅರ್ಚಕರು ಪಾಲ್ಗೊಳ್ಳಲಿದ್ದಾರೆ. ದೇವಸ್ಥಾನದ ಆವರಣದಲ್ಲಿವಿಶೇಷ ಹೋಮ, ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಂದು ಸಂಜೆ ಕೃಷ್ಣಾ ನದಿಗೆ ಪೂಜೆ ನಂತರ ಕೃಷ್ಣಾ ನದಿಗೆ ಆರತಿ, ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಾತ್ರಿ ಶ್ರೀಕೃಷ್ಣನ ನಾಮಕರಣ ಕಾರ್ಯಕ್ರಮ ಜರುಗಲಿದೆ,’’ಎಂದರು.
‘‘ಹಿಪ್ಪರಗಿ ಬ್ಯಾರೇಜ್ ಹಾಗೂ ನದಿ ಪಕ್ಕದಲ್ಲಿವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು, ನದಿಯಲ್ಲಿಪೂಜೆ ಹಾಗೂ ಆರತಿ ಮಾಡುವುದಕ್ಕೆ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಬೋಟ್ ಗಳನ್ನು ತರಿಸಲಾಗುವುದು,’’ ಎಂದರು.
ಜಿಪಂ ಮಾಜಿ ಸದಸ್ಯ ಪಿ.ಆರ್ .ಪಾಲಬಾಂವಿ, ಸೋಮನಾಥ ಪಾಟೀಲ, ಬಿ.ಟಿ.ಹಿಪ್ಪರಗಿ, ನೂರಾರು ರೈತರು ಇದ್ದರು.
ಪೋಟೋ ಜೆಕೆಡಿ 11-1
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿನಡೆದ ರೈತರ ಪೂರ್ವಭಾವಿ ಸಭೆಯಲ್ಲಿಎಂಆರ್ ಎನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿದರು.