ಜಿಎಂಯು ತಂತ್ರಜ್ಞಾನ ಜಾಗೃತಿ ಕೇಂದ್ರ ಉದ್ಘಾಟನೆ

Contributed byBASAVARAJU KG|Vijaya Karnataka
gmus new technology awareness center offers new opportunities for students
ತಂತ್ರಜ್ಞಾನ, ಎಂಜಿನಿಯರಿಂಗ್ , ಬಾಹ್ಯಾಕಾಶ ಮತ್ತು ಜೈವಿಕ ವಿಜ್ಞಾನಗಳ ಪರಿಚಯ ನೀಡುವ ವಿಶಿಷ್ಟ ಕೇಂದ್ರ(ಕಿಕ್ಕರ್ )

ಜಿಎಂಯು ತಂತ್ರಜ್ಞಾನ ಜಾಗೃತಿ ಕೇಂದ್ರ ಉದ್ಘಾಟನೆ
---

ವಿಕ ಸುದ್ದಿಲೋಕ ದಾವಣಗೆರೆ

ವಿದ್ಯಾರ್ಥಿಗಳಲ್ಲಿಪ್ರಾಯೋಗಿಕ ಕಲಿಕೆ, ವೈಜ್ಞಾನಿಕ ಕುತೂಹಲ ಮತ್ತು ತಂತ್ರಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯ ಆವರಣದಲ್ಲಿಸ್ಥಾಪಿಸಿರುವ ತಂತ್ರಜ್ಞಾನ ಜಾಗೃತಿ ಕೇಂದ್ರವನ್ನು(ಟಿಎಸಿ)ವಿಶ್ವವಿದ್ಯಾಲಯ ಕುಲಾಧಿಪತಿ ಜಿ.ಎಂ.ಲಿಂಗರಾಜು ಈಚೆಗೆ ಉದ್ಘಾಟಿಸಿದರು.

ಈ ಕೇಂದ್ರವು ತರಗತಿಯ ಕಲಿಕೆಯನ್ನು ನೈಜ ತಂತ್ರಜ್ಞಾನಗಳೊಂದಿಗೆ ಸಂಪರ್ಕಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿನೂತನ ತಂತ್ರಜ್ಞಾನಗಳನ್ನು ಪರಿಚಯಿಸುತ್ತದೆ. ತಂತ್ರಜ್ಞಾನ ಪ್ರದರ್ಶನಗಳು, ವಿದ್ಯಾರ್ಥಿ ಯೋಜನೆಗಳು, ನಾವೀನ್ಯತೆ, ಅಂತರ ಶಿಸ್ತೀಯ ಕಲಿಕೆ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಅವಕಾಶ ಸಿಗಲಿದೆ. ಕೇಂದ್ರದಲ್ಲಿನವೀಕರಿಸಬಹುದಾದ ಶಕ್ತಿ, ಆಟೋ ಮೊಬೈಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ , ರೋಬೋಟಿಕ್ಸ್ , ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ , ಕ್ವಾಂಟಮ್ ಕಂಪ್ಯೂಟಿಂಗ್ , ವರ್ಚುವಲ್ ರಿಯಾಲಿಟಿ, ಸೆಮಿಕಂಡಕ್ಟರ್ ತಂತ್ರಜ್ಞಾನ ಹಾಗೂ ಭವಿಷ್ಯದ ಸಾರಿಗೆ ವ್ಯವಸ್ಥೆಗಳಿಗೆ ಸಂಬಂಧಿಸಿದ ಹಲವಾರು ಶೈಕ್ಷಣಿಕ ಮಾದರಿಗಳನ್ನು ಪ್ರದರ್ಶಿಸಲಾಗಿದೆ.

ಪ್ರಮುಖ ಮಾದರಿಗಳು:

ಜಲವಿದ್ಯುತ್ ಉತ್ಪಾದನೆ, ಸೋಲಾರ್ ಜೆನ್ , ಸೌರಶಕ್ತಿ ಉತ್ಪಾದನೆ, 3-ಸಿಲಿಂಡರ್ ಐಸಿ ಎಂಜಿನ್ , ಆಟೋಮೊಬೈಲ್ ಪವರ್ ಟ್ರೇನ್ ವ್ಯವಸ್ಥೆ, ವಿಮಾನಯಾನ ಕ್ಷೇತ್ರದಲ್ಲಿಬಳಸುವ ಟ್ವಿನ್ -ಶಾಫ್ಟ್ ಗ್ಯಾಸ್ ಟರ್ಬೈನ್ ಎಂಜಿನ್ , ಹೈಪರ್ ಲೂಪ್ ಸಾರಿಗೆ ಮಾದರಿ, ಎಐ ಆಧಾರಿತ ಸಮಗ್ರ ರಕ್ಷಣಾ ವ್ಯವಸ್ಥೆ, ಬಯೋವರ್ಲ್ಡ್- ಜೈವಿಕ ತಂತ್ರಜ್ಞಾನ ಮತ್ತು ಜೀವ ವಿಜ್ಞಾನ, ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನ ಇಸ್ರೋ ಉಡಾವಣಾ ವಾಹನಗಳು, ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ, ಇಂಟಿಗ್ರೇಟೆಡ್ ಸರ್ಕಿಟ್ ಫ್ಯಾಬ್ ಮಾದರಿಗಳು ಕೇಂದ್ರದಲ್ಲಿಗಮನಸೆಳೆಯುತ್ತವೆ.

ಕಾರ್ಯಕ್ರಮದಲ್ಲಿಕುಲಪತಿ ಡಾ.ಎಸ್ .ಆರ್ .ಶಂಕಪಾಲ್ , ಪ್ರೊಚಾನ್ಸಲರ್ ಡಾ.ಎಂ.ವೇಣುಗೋಪಾಲ್ ರಾವ್ , ಕುಲಸಚಿವ ಡಾ.ಬಿ.ಎಸ್ .ಸುನಿಲ್ ಕುಮಾರ್ , ಆಡಳಿತಾಧಿಕಾರಿ ವೈ.ಯು.ಸುಭಾಷ್ ಚಂದ್ರ, ಡಾ.ಸಿ.ವಿ.ಶ್ರೀನಿವಾಸ, ಪ್ರೊ.ಜಿ.ಕೀರ್ತಿ ಪ್ರಸಾದ್ ಇದ್ದರು.

--

21 ಡಿವಿಜಿ ಜಿಎಂಯು

ದಾವಣಗೆರೆ ಜಿಎಂ ವಿಶ್ವವಿದ್ಯಾಲಯದಲ್ಲಿಈಚೆಗೆ ತಂತ್ರಜ್ಞಾನ ಜಾಗೃತಿ ಕೇಂದ್ರ ಉದ್ಘಾಟಿಸಿದ ವಿವಿ ಕುಲಾಧಿಪತಿ ಜಿ.ಎಂ.ಲಿಂಗರಾಜು, ವಿನೂತನ ತಂತ್ರಜ್ಞಾನ ಮಾದರಿ ಒಂದರ ಪ್ರಾಯೋಗಿಕ ಅನುಭವ ಪಡೆದರು.