ಯುವಕರನ್ನು ಒಗ್ಗೂಡಿಸಲು ಅಗೇಡಿ ಗೌಜ್ ಆಸಾಡಿ ಗಮ್ಮತ್ ಕೆಸರುಗದ್ದೆ ಕ್ರೀಡಾಕೂಟ ವೇದಿಕೆ ಕಲ್ಪಿಸುತ್ತದೆ. ಕೃಷಿ ನಮ್ಮ ಬದುಕಿಗೆ ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿಯುವ ಸಮುದಾಯ ಕೃಷಿಯತ್ತ ಆಕರ್ಪಿತರಾಗಬೇಕು. ಎಲ್ಲವಾಣಿಜ್ಯ ಉದ್ಯೋಗ, ಉದ್ಯಮಗಳ ಜತೆಗೆ ಕೃಷಿ ಬೇಸಾಯವನ್ನು ಮಾಡಬೇಕು ಎಂದು ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡ ದಿನೇಶ ಹೆಗ್ಡೆ ಮೊಳಹಳ್ಳಿ ಹೇಳಿದರು. ಮಡಾಮಕ್ಕಿ ಆಸರೆ ಯುವ ವೃಂದದ ವತಿಯಿಂದ ನಡೆದ ಅಗೇಡಿ ಗೌಜ್ ಆಸಾಡಿ ಗಮ್ಮತ್ ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಶಶಿಧರ್ ಶೆಟ್ಟಿ ಮಡಾಮಕ್ಕಿ, ಕಾರ್ಕಳ ಮುಖಂಡ ಉದಯಕುಮಾರ್ ಶೆಟ್ಟಿ ಮುನಿಯಾಲು, ಅಮಾಸೆಬೈಲು ಸಬ್ ಇನ್ಸ್ ಪೆಕ್ಟ್ರ್ ಸುಧಾರಣಿ ಟಿ., ನಿವೃತ್ತ ಶಿಕ್ಷಕ ಅನಂತ ತಂತ್ರಿ ಮಡಾಮಕ್ಕಿ, ವಕೀಲ ಅರುಣ್ ಕುಮಾರ್ ಶೆಟ್ಟಿ ಹೆಬ್ರಿ, ದಯಾನಂದ ಪೂಜಾರಿ, ರಂಜನ್ ಹೆಗ್ಡೆ ಮಡಾಮಕ್ಕಿ, ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ಆಸರೆ ಯುವ ವೃಂದ ಅಧ್ಯಕ್ಷ ಮುರಳೀಧರ ಹೆಗ್ಡೆ, ಕಾರ ್ಯದರ್ಶಿ ಅಕ್ಷಯ್ ಆಚಾರ್ಯ, ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.