ಶ್ರಾವಣ ಶನಿವಾರದ ವಿಶೇಷ ಪೂಜೆ

Contributed byprk.k73@gmail.com|Vijaya Karnataka
reports on the special puja of shravaa shanivra
ಶ್ರಾವಣ ಶನಿವಾರದ ವಿಶೇಷ ಪೂಜೆ

ವಿಕ ಸುದ್ದಿಲೋಕ ಮುಳಬಾಗಲು
ನಗರದ ಅರ್ಜುನ ಪ್ರತಿಷ್ಠಾಪಿತ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿಶ್ರಾವಣ ಮಾಸದ 2ನೇ ಶನಿವಾರ ಪ್ರಯುಕ್ತ ವಿಶೇಷ ಪೂಜೆಗಳು ಸಾವಿರಾರು ಭಕ್ತರ ಸಮಕ್ಷಮದಲ್ಲಿನೆರವೇರಿತು.

ಶ್ರೀಆಂಜನೇಯಸ್ವಾಮಿ, ಶ್ರೀರಾಮ ದೇವರು, ಪದ್ಮಾವತಿ, ಶ್ರೀವೆಂಕಟೇಶ್ವರಸ್ವಾಮಿ, ಗೋಂವಿದರಾಜಸ್ವಾಮಿ, ವರದರಾಜಸ್ವಾಮಿ ದೇವರಿಗೆ ವಿಶೇಷ ಪೂಜೆಗಳು ನಡೆದವು. ರಾಜ್ಯ ಸೇರಿದಂತೆ ಇತರೆ ಕಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಸರತಿಯಲ್ಲಿನಿಂತು ದೇವರ ದರ್ಶನ ಪಡೆದರು. ಕೆಲವರು ಮುಡಿಯನ್ನು ದೇವರಿಗೆ ಅರ್ಪಿಸಿದರು. ಭಕ್ತಾದಿಗಳಿಗೆ ಸೇವಾ ಕರ್ತರಿಂದ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ದೇವಾಲಯದ ವತಿಯಿಂದ ಅನ್ನ ಪ್ರಸಾದ ವಿತರಣೆ ಮಾಡಲಾಯಿತು. ಮುಂಜಾಗ್ರತೆಯ ಕ್ರಮವಾಗಿ ವಿಶೇಷ ಪೊಲೀಸ್ ಬಂದೋಬಸ್ ್ತ ಮಾಡಲಾಗಿತ್ತು.

22 ಎಂ.ಬಿ.ಎಲ್ ಪೋಟೋ 4 ಮುಳಬಾಗಲು ನಗರದ ಅರ್ಜುನ ಪ್ರತಿಷ್ಠಾಪಿತ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿಶ್ರಾವಣ ಶನಿವಾರ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.