ತುಮಕೂರು: ತುಮಕೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸಂಪನ್ಮೂಲ ಅಭಿವೃದ್ಧಿ ಮತ್ತು ಪರಿಸರ ಪುನಶ್ಚೇತನ ಸಂಸ್ಥೆ, ತುಮಕೂರು ಧ್ಯಾನ ಸಂಸ್ಥೆ ಹಾಗೂ ವೃಕ್ಷ ಮಿತ್ರ ಸಹಯೋಗದೊಂದಿಗೆ ಆ.23ರಿಂದ ಆ.25ರ ವರೆಗೆ ಮೂರು ದಿನಗಳ ಕಾಲ ‘‘ ಜಯಮಂಗಲಿ ನದಿ ನಡಿಗೆ ಮತ್ತು ಪರಿಸರ ಜಾಗೃತಿ ’’ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರಿಗೆ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆಯನ್ನು ದೇವರಾಯನದುರ್ಗದ ಕರಿಗಿರಿ ಸಭಾಂಗಣದಲ್ಲಿಆಯೋಜಿಸಲಾಗಿದೆ.
ಭಾನುವಾರ ಬೆಳಗ್ಗೆ 9 ಗಂಟೆಗೆ ತುಮಕೂರು ವಿವಿಯ ಕುಲಪತಿಯವರ ಕಚೇರಿಯಿಂದ ವಾಕಥಾನ್ ಆರಂಭವಾಗಿ, ದೇವರಾಯನದುರ್ಗದ ಭೋಗ ಲಕ್ಷ್ಮೀನರಸಿಂಹ ದೇವಾಲಯದ ಬಳಿ ಮುಕ್ತಾಯಗೊಳ್ಳಲಿದೆ. ಕಾರ್ಯಾಗಾರದ ಕೊನೆಯ ದಿನವಾದ ಮಂಗಳವಾರ ಜಯಮಂಗಲಿ ನದಿಯು ತನ್ನ ಹರಿವನ್ನು ಪ್ರಾರಂಭಿಸುವ ಇರಕಸಂದ್ರ ಕೆರೆಯಿಂದ ನಡಿಗೆ ಆರಂಭವಾಗಿ, ವಿದ್ಯಾರ್ಥಿಗಳು ನದಿಯ ನೈಜ ಸ್ವರೂಪವನ್ನು ಗ್ರಹಿಸುತ್ತಾ ಅಲ್ಲಿನ ಜೀವವೈವಿಧ್ಯದ ಕುರಿತು ಅಧ್ಯಯನದ ಪ್ರಾತ್ಯಕ್ಷಿಕೆ ನಡೆಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ನಾಗಭೂಷಣ ಬಗ್ಗನಡು ಅವರನ್ನು (ಮೊ.ಸಂ.-99648 52518) ಸಂಪರ್ಕಿಸಬಹುದಾಗಿದೆ.