* ದಕ ಕರಡು ಪಟ್ಟಿಯಲ್ಲಿ16.46 ಲಕ್ಷ ಮತದಾರರು

Contributed bymahammed.arif@timesgroup.com|Vijaya Karnataka
1646 lakhs voters in dakshina kannada district process initiated
1.50 ಲಕ್ಷ ಮಂದಿಗೆ ನೋಟಿಸ್ | ಹಕ್ಕು- ಆಕ್ಷೇಪಣೆ ಸಲ್ಲಿಕೆಗೆ ಸೆ.23ರ ತನಕ ಅವಕಾಶ

ವಿಕ ಸುದ್ದಿಲೋಕ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನಡೆದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್ ) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿ ಪ್ರಕಟಿಲಾಗಿದ್ದು, ಒಟ್ಟು 16,46,387 ಮತದಾರರಿದ್ದಾರೆ.

ಮ್ಯಾಪಿಂಗ್ ಆಗದಿರುವ ಮತ್ತು ಹೆಸರು ಬದಲಾವಣೆ, ಪೋಷಕರ ಹೆಸರು ಬದಲಾವಣೆ, ವಯಸ್ಸಿನ ಅಂತರ ಸೇರಿದಂತೆ ತಾರ್ತಿಕ ದೋಷಗಳಿಂದ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ 1,50,153 ಮತದಾರರಿಗೆ ಬಿಎಲ್ ಒಗಳ ಮೂಲಕ ನೋಟಿಸ್ ಹಂಚಿಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ .ವಿ. ಸುದ್ದಿಗೋಷ್ಠಿಯಲ್ಲಿಸೋಮವಾರ ತಿಳಿಸಿದರು.

ಆ.24ರಿಂದ ಆರಂಭಗೊಂಡು ಸೆ.23ರ ಅವಧಿಯಲ್ಲಿಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಮತದಾರರಿಗೆ ನೋಟಿಸ್ ಹಂಚಿಕೆಯಾಗಿ, ಆ ಅವಧಿಯಲ್ಲಿಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದು ಅವರು ಹೇಳಿದರು.

ವಿಚಾರಣೆ ದಿನಾಂಕ, ಸಮಯ ಮತ್ತು ಸ್ಥಳದ ವಿವರ ನೋಟಿಸ್ ನಲ್ಲಿಇರಲಿದ್ದು, ಬಿಎಲ್ ಒಗಳು ನಿಗದಿತ ಅವಧಿಯೊಳಗೆ ನೋಟಿಸ್ ಮತದಾರರ ಮನೆಗಳಿಗೆ ತಲುಪಿಸಲಿದ್ದಾರೆ. ನೋಟಿಸ್ ನಲ್ಲಿತಿಳಿಸಲಾದ ನಿಗದಿತ ಅವಧಿಯೊಳಗೆ ಮತದಾರರು ಲಿಖಿತ ಮನವಿಯೊಂದಿಗೆ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯನ್ನು ಭೇಟಿಯಾಗಲು ಸಾಧ್ಯವಾಗದಿದ್ದಲ್ಲಿಮತ್ತೊಂದು ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿಯೂ ಮತದಾರರು ವಿಚಾರಣೆಗೆ ಹಾಜರಾಗದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತದೆ ಎಂದರು.

ಮತದಾರರು ವಿಚಾರಣೆಗೆ ಹಾಜರಾಗುವ ಸಂದರ್ಭ ನಮೂನೆಯಲ್ಲಿವಿವರಗಳನ್ನು ಭರ್ತಿ ಮಾಡಿಕೊಂಡು ಬರಬೇಕು. ಮತದಾರರು ಆನ್ ಲೈನ್ ಮೂಲಕ ದಾಖಲೆಗಳನ್ನು ಅಪ್ ಲೋಡ್ ಮಾಡಬಹುದು. ಆದರೆ ಭೌತಿಕವಾಗಿ ಮತದಾರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಎದುರು ಹಾಜರಾಗುವುದು ಕಡ್ಡಾಯ ಎಂದು ಅವರು ಹೇಳಿದರು.

ಈಗಾಗಲೇ ಚುನಾವಣಾ ಆಯೋಗ ತಿಳಿಸಿರುವಂತೆ, 1987ರ ಜು.1ಕ್ಕಿಂತ ಮೊದಲು ಜನಿಸಿದವರಾಗಿದ್ದರೆ ಸ್ವಂತಕ್ಕೆ ಸಂಬಂಧಿಸಿದಂತೆ ಜನ್ಮ ದಿನಾಂಕ ಮತ್ತು ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆ ಒದಗಿಸಬೇಕು. 1987 ಜು.1ರಿಂದ 2004ರ ಡಿ.2ರೊಳಗೆ ಜನಿಸಿದವರು ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆ ಜತೆಗೆ ತಂದೆ ಅಥವಾ ತಾಯಿಗೆ ಸಂಬಂಧಿಸಿದಂತೆ ಅವರ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.

ಕರಡು ಪಟ್ಟಿಯಲ್ಲಿರುವ ಒಟ್ಟು ಮತದಾರರಲ್ಲಿ8,07,600 ಮಂದಿ ಪುರುಷ, 8,38,768 ಮಂದಿ ಮಹಿಳಾ ಮತದಾರರು ಹಾಗೂ 19 ಮಂದಿ ತೃತೀಯ ಲಿಂಗಿಗಳು ಸೇರಿದ್ದಾರೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳಲ್ಲಿವೆಬ್ ಪೋರ್ಟಲ್ ಡಿಡಿಡಿ.್ಚಛಿಟka್ಟ್ಞaಠಿaka.ka್ಟ.್ಞಜ್ಚಿ.ಜ್ಞಿ ಅಥವಾ ಡಿಡಿಡಿ.dk.್ಞಜ್ಚಿ.ಜ್ಞಿ ನಲ್ಲಿವಿವರಗಳನ್ನು ಪರಿಶೀಲಿಸಬಹುದು. ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆಮಾಡಿಯೂ ಮಾಹಿತಿ ಪಡೆಯಬಹುದು.

ಅಪರ ಜಿಲ್ಲಾಧಿಕಾರಿ ರಾಜು ಕೆ., ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ.ಸಂತೋಷ್ ಕುಮಾರ್ , ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಅಕ್ಷತಾ ಸುದ್ದಿಗೋಷ್ಠಿಯಲ್ಲಿಉಪಸ್ಥಿತರಿದ್ದರು.

---

ಎಸ್ ಐಆರ್ ಪ್ರಕ್ರಿಯೆ ವಿವರ

*2026ರ ಜೂ.16ರಂತೆ ಜಿಲ್ಲೆಯಲ್ಲಿರುವ ಮತದಾರರು: 18,03,766

* ಹಂಚಿಕೆ ಮಾಡಲಾದ ಎನ್ಯುಮರೇಶನ್ ಫಾರಂಗಳ ಸಂಖ್ಯೆ: 18,03,766

*ಡಿಜಿಟೈಸ್ ಮಾಡಿದ ಎನ್ಯುಮರೇಶನ್ ಫಾರಂಗಳ ಸಂಖ್ಯೆ: 16,46,387 (ಶೇ.91.27)

*ಎಎಸ್ ಡಿಡಿ ಮಾರ್ಕ್ ಮಾಡಿರುವ ಸಂಖ್ಯೆ: 1,57,379 (ಶೇ.8.73)

*ಗೈರು ಮತದಾರರು: 11,124 (ಶೇ.0.62)

*ಶಾಶ್ವತವಾಗಿ ವಲಸೆ ಹೋಗಿರುವ ಮತದಾರರು: 82,988(ಶೇ.4.60)

* ಮರಣ ಹೊಂದಿರುವ ಮತದಾರರು: 45,318 (ಶೇ.2.51)

* ಬೇರೆಡೆ ಮತಪತ್ರ ಹೊಂದಿರುವವರು: 15,395 (ಶೇ.0.85)

*ಇತರ: 2,554 (ಶೇ.0.14)

-------------

ನೋಟಿಸ್ ಬಂದರೆ ಕೈಬಿಡುವುದು ಎಂದಲ್ಲ

2026ರ ಜೂನ್ ವರೆಗಿನ ಮತದಾರರ ಪಟ್ಟಿಯಲ್ಲಿಹೆಸರಿದ್ದರೂ, 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಸಂದರ್ಭ ಹೆಸರು ಬಿಟ್ಟು ಹೋಗಿದ್ದಲ್ಲಿಅಥವಾ ಹೆಸರಿನಲ್ಲಿನ ಬದಲಾವಣೆ ಹಾಗೂ ಇತರ ಕಾರಣದಿಂದ ಕರಡು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ ಮತದಾರರಿಗೆ ನೋಟಿಸ್ ಬಂದರೆ ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಎಂದರ್ಥವಲ್ಲ. ಈ ಬಗ್ಗೆ ಯಾವುದೇ ರೀತಿಯ ಅನಗತ್ಯ ಭಯ ಅಥವಾ ಅಂಜಿಕೆ ಮತದಾರರಿಗೆ ಬೇಡ. ದಾಖಲೆಗಳನ್ನು ಪಡೆದು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿಹೆಸರು ಪ್ರಕಟವಾಗುವಂತೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ .ವಿ. ಸ್ಪಷ್ಟಪಡಿಸಿದರು.