ಸೋರುತ್ತಿದೆ ಪುತ್ರಬೈಲು ಸಮಾಜ ಮಂದಿರ

Contributed byaravindahebbar1971@gmail.com|Vijaya Karnataka
patrabailu community hall in dilapidated condition need for new development
ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಆಗ್ರಹ

ವಿಕ ಸುದ್ದಿಲೋಕ ಬೆಳ್ತಂಗಡಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವಾಸಿಸುವ ಲಾಯಿಲ ಗ್ರಾಮದ ಪುತ್ರಬೈಲು ಪ್ರದೇಶದಲ್ಲಿರುವ ಸಮಾಜ ಮಂದಿರವು ಇದೀಗ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಚಾವಣಿಯಿಂದ ನೀರು ಸೋರಿಕೆಯಾಗುತ್ತಿದ್ದು, ಕಟ್ಟಡ ಕುಸಿಯುವ ಆತಂಕ ಎದುರಾಗಿದೆ.

ಹಂಚಿನ ಚಾವಣಿ ಹೊಂದಿರುವ ಈ ಸಮಾಜ ಮಂದಿರವು ಹಲವು ವರ್ಷಗಳಿಂದ ಸ್ಥಳೀಯ ಗ್ರಾಮಸ್ಥರ ಚಟುವಟಿಕೆಗಳಿಗೆ ಆಸರೆಯಾಗಿತ್ತು. ಈ ಭಾಗದಲ್ಲಿಹಲವಾರು ಕುಟುಂಬಗಳು ವಾಸಿಸುತ್ತಿದ್ದು, ಸಂಘ ಸಂಸ್ಥೆಗಳ ಸಭೆ, ಸಣ್ಣಪುಟ್ಟ ಕಾರ್ಯಕ್ರಮಗಳು ಹಾಗೂ ನಾನಾ ಸಾಮಾಜಿಕ ಚಟುವಟಿಕೆಗಳು ಸಮಾಜ ಮಂದಿರದಲ್ಲಿನಡೆಯುತ್ತಿದ್ದವು. ಆದರೆ ಕಟ್ಟಡದ ಒಂದು ಪಾಶ್ರ್ವದಲ್ಲಿಸೋರಿಕೆ ಹೆಚ್ಚಾಗಿರುವುದರಿಂದ ಚಾವಣಿ ಹಾಗೂ ಕಟ್ಟಡದ ಭಾಗಗಳು ದುರ್ಬಲಗೊಂಡಿದ್ದು, ಯಾವುದೇ ಸಂದರ್ಭ ಕುಸಿಯುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮಳೆ ಬಂದ ಸಂದರ್ಭ ಚಾವಣಿಯಿಂದ ನೀರು ಸೋರಿಕೆಯಾಗುತ್ತಿರುವುದರಿಂದ ಸಮಾಜ ಮಂದಿರದ ಒಳಭಾಗದಲ್ಲಿಯೂ ತೊಂದರೆ ಉಂಟಾಗುತ್ತಿದೆ. ಕಟ್ಟಡದ ದುಸ್ಥಿತಿಯಿಂದಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ನಡೆಸದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಕಟ್ಟಡವನ್ನು ತಕ್ಷಣ ಪರಿಶೀಲಿಸಿ ಅಗತ್ಯ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಅಥವಾ ಹಳೆಯ ಕಟ್ಟಡ ತೆರವುಗೊಳಿಸಿ ಅದರ ಜಾಗದಲ್ಲೇ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಸಮುದಾಯ ಭವನ ನಿರ್ಮಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ.

ಬಾಕ್ಸ್

ಹಲವು ಬಾರಿ ಮನವಿ

ಸಮಾಜ ಮಂದಿರ ಅಭಿವೃದ್ಧಿ ಬಗ್ಗೆ ಈಗಾಗಲೇ ಸಂಬಂಧಪಟ್ಟ ಹಲವು ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಪುತ್ರಬೈಲು ಭಾಗದ ಜನರಿಗೆ ಅನುಕೂಲವಾಗುವಂತೆ ಸಮಾಜ ಮಂದಿರವನ್ನು ವಿಸ್ತರಿಸಿ ಸುಸಜ್ಜಿತ ಹಾಗೂ ಭವ್ಯ ಕಟ್ಟಡ ನಿರ್ಮಿಸಬೇಕು. ಆದರೆ, ಹಲವು ಬಾರಿ ಮನವಿ ಸಲ್ಲಿಸಿ ಅಧಿಕಾರಿಗಳನ್ನು ಭೇಟಿ ಮಾಡಿದರೂ ಇದುವರೆಗೆ ನಿರೀಕ್ಷಿತ ಸ್ಪಂದನೆ ದೊರಕದಿರುವುದು ಬೇಸರದ ಸಂಗತಿಯಾಗಿದೆ. ಅದಲ್ಲದೇ ಈಗಾಗಲೇ ಅದರ ಪಕ್ಕದಲ್ಲಿಇರುವ 25 ಸೆಂಟ್ಸ್ ಸರಕಾರಿ ಜಾಗವನ್ನು ಸಮುದಾಯ ಭವನ ಅಭಿವೃದ್ಧಿಗೆ ಮೀಸಲಿಡಬೇಕು

ಕೋಟ್

ಸಾರ್ವಜನಿಕರ ಉಪಯೋಗಕ್ಕಾಗಿ ಈ ಭಾಗದಲ್ಲಿಸುಸಜ್ಜಿತ ಸಮುದಾಯ ಭವನದ ಅಗತ್ಯವಿದೆ. ಈಗಿರುವ ಸಮಾಜ ಮಂದಿರವನ್ನು ವಿಸ್ತರಿಸಿ ಉತ್ತಮ ಕಟ್ಟಡ ನಿರ್ಮಿಸಿದರೆ ಗ್ರಾಮಸ್ಥರಿಗೆ ಮಾತ್ರವಲ್ಲದೆ, ಸಂಘ-ಸಂಸ್ಥೆಗಳಿಗೂ ಸಭೆ ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಬೇಸರ ತರಿಸಿದೆ.

ಸುರೇಶ್ ಬೈರ, ಸಾಮಾಜಿಕ ಹೋರಾಟಗಾರ ಲಾಯಿಲ

ಪೊಟೋ..24ಎಂಜೆ ಲಾಯಿಲ ಸಮಾಜ ಮಂದಿರ

ಚಿತ್ರ ವಿವರ-

+ಶಿಥಿಲಾವಸ್ಥೆಯಲ್ಲಿರುವ ಸಮಾಜ ಮಂದಿರ

+ಸುರೇಶ್ ಬೈರ.