ಬ್ಲರ್ಬ್ ಒಳಗೆ ಪ್ರವೇಶಿಸಿದರೆ ಕಿವಿಗೆ ರಾಚಿ ಮೈ ನಡುಗಿಸುವ ಗೂಬೆಯ ಸದ್ದು, ಜಿರುಂಡೆ, ಜಿಂಕೆ, ಮರಕುಟಿಕ, ಮಂಗ, ಸರ್ಪ ಹೀಗೆ ನಾನಾ ಧ್ವನಿಗಳು. ರಾತ್ರಿ ಹೊತ್ತಲ್ಲಿಕಾಡಿನೊಳಗೆ ಪ್ರವೇಶಿಸಿದ ಅನುಭೂತಿ. ಈ ಸುಂದರ ದೃಶ್ಯ ಕಾಣಸಿಗುವುದು ಶಿವಮೊಗ್ಗದ ಗಾಂಧಿ ಪಾರ್ಕ್ನಲ್ಲಿರುವ ‘ವನ್ಯಜೀವಿ ವ್ಯಾಖ್ಯಾನ ಕೇಂದ್ರ ಮತ್ತು ವಿಜ್ಞಾನ ಉದ್ಯಾನ’ದಲ್ಲಿ. ಇದನ್ನು 8.50 ಕೋಟಿ ರೂ. ವೆಚ್ಚದಲ್ಲಿನಿರ್ಮಾಣ ಮಾಡಲಾಗಿದೆ.
===
(ಕಿಕ್ಕರ್ ) ಪಂಚ ಕೊಠಡಿಗಳಲ್ಲಿಜ್ಞಾನ ಭಂಡಾರ
ಪಶ್ಚಿಮಘಟ್ಟಗಳ ಮಾಹಿತಿ ಕಣಜ
‘ವನ್ಯಜೀವಿ ವ್ಯಾಖ್ಯಾನ ಕೇಂದ್ರ ಮತ್ತು ವಿಜ್ಞಾನ ಉದ್ಯಾನ’ದಲ್ಲಿಒಟ್ಟು ಐದು ಕೊಠಡಿಗಳಿವೆ. ಒಂದೊಂದು ಕೊಠಡಿಯು ವಿಭಿನ್ನ ವಿಷಯಗಳ ಹೂರಣವಾಗಿದೆ. ಪಶ್ಚಿಮಘಟ್ಟದ ಹೆಬ್ಬಾಗಿಲು, ಕರ್ನಾಟಕ ಮತ್ತು ಶಿವಮೊಗ್ಗದ ಸಂಸ್ಕೃತಿ, ಶಿವಮೊಗ್ಗದ ಕೀಸ್ಟೋನ್ ಪ್ರಭೇದಗಳು, ವಿಡಿಯೊ-ಆಡಿಯೊ ಕೋಣೆಗಳಿವೆ.
ಕೊಠಡಿಗಳಲ್ಲಿಏನಿದೆ?
* ಕೊಠಡಿ 1: ದಕ್ಷಿಣ ಭಾರತದಲ್ಲಿಹರಿಯುವ ನದಿಗಳ ಭೌಗೋಳಿಕ ನಕ್ಷೆ (3ಡಿ) ಸಹಿತ ಪೂರ್ಣ ಮಾಹಿತಿ ಇದೆ. ಗುಂಡಿ ಒತ್ತಿದರೆ ಆಯಾ ನದಿಗಳ ಉಗಮ ಸ್ಥಾನ ಮತ್ತು ಎಲ್ಲೆಲ್ಲಿಹರಿಯುತ್ತದೆ, ಎಲ್ಲಿಸಮುದ್ರ ಸೇರುತ್ತದೆ ಇತ್ಯಾದಿ ಮಾಹಿತಿಗಳಿವೆ. ಪಶ್ಚಿಮಘಟ್ಟಗಳ 10 ಶಿಖರಗಳು, ಪಶ್ಚಿಮಘಟ್ಟಗಳ ಬಗ್ಗೆ ಆಸಕ್ತಿದಾಯಕ ಮಾಹಿತಿ, ಪ್ರಾಣಿಗಳ ವೈವಿಧ್ಯತೆಯ ಮಾದರಿ ಪ್ರದರ್ಶನ.
* ಕೊಠಡಿ 2: ಅಕ್ಕಮಹಾದೇವಿಯ ಡಿಯೋರಮಾ, ಕರ್ನಾಟಕ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಹಾಗೂ ಕರ್ನಾಟಕದ ಪೂರ್ಣ ಇತಿಹಾಸ. ಇದೆಲ್ಲವುಗಳ ಪ್ರದರ್ಶನ ವ್ಯವಸ್ಥೆ.
* ಕೊಠಡಿ 3: 3ಡಿ ಪ್ರಾಣಿಗಳ ಮಾದರಿಗಳೊಂದಿಗೆ ಅರಣ್ಯದ ಡಿಯೋರಮಾ. ಕಾಡಿನ ಅನುಭವ ನೀಡುವ ನಡಿಗೆ, ಧ್ವನಿ ವ್ಯವಸ್ಥೆ, ಶಿವಮೊಗ್ಗದ ಪ್ರಾಣಿಗಳ ವೈವಿಧ್ಯತೆಯ ಬಗ್ಗೆ ಮಾಹಿತಿ.
* ಕೊಠಡಿ 4: ಸ್ಮಾರ್ಟ್ ಸಿಟಿಯ ಡಿಯೋರಮಾ, ಅದರ ಬಗ್ಗೆ ಸಂಪೂರ್ಣ ಮಾಹಿತಿ. ಡಿಜಿಟಲ್ ಯಂತ್ರದ ಮುಖೇನ ಹವಾಮಾನ ಬದಲಾವಣೆಯ ಮಾಹಿತಿ ಒದಗಿಸಲಾಗುತ್ತದೆ. ಜತೆಗೆ, ನಾಗರಿಕರ ಜವಾಬ್ದಾರಿಗಳ ಬಗ್ಗೆ ಪರಿಚಯ, ಡಿಜಿಟಲ್ ಪರದೆಯ ಮೇಲೆ ಪ್ರತಿಜ್ಞಾ ವಿಧಿ, ಪರಿಸರಕ್ಕೆ ಪೂರಕವಾಗಿ ಹೇಗೆ ಬದುಕಬೇಕೆಂದು ಸೂಚಿಸಲು ಮತದಾನದ ವ್ಯವಸ್ಥೆ.
* ಕೊಠಡಿ 5: ಮೀಟಿಂಗ್ ರೂಂ, ಥಿಯೇಟರ್ / ವೀಕ್ಷಣಾ ಕೊಠಡಿಯಲ್ಲಿವಚ್ರ್ಯುವಲ್ ರಿಯಾಲಿಟಿ ದೃಶ್ಯ ಪರದೆಯ ಮೇಲೆ ವೇದ್ಯವಾಗುತ್ತದೆ. ತಾನು ಪ್ರಾಣಿಯೊಂದಿಗೆ ಕುಳಿತ ಅನುಭವವಾಗುತ್ತದೆ.
===
ಮಕ್ಕಳ ನೆಚ್ಚಿನ ತಾಣ
ಶಾಲಾ- ಕಾಲೇಜು ರಜಾ ದಿನ ಮತ್ತು ವಾರಾಂತ್ಯಗಳಲ್ಲಿನಿತ್ಯ 200-250 ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇನ್ನುಳಿದ ದಿನಗಳಲ್ಲಿಪೋಷಕರೊಂದಿಗೆ ಸರಾಸರಿ 100 ಮಕ್ಕಳು ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಮನೋರಂಜನೆಯ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳುವ ಆಟಿಕೆಗಳು ಇಲ್ಲಿವೆ.
===
ಖರ್ಚೆಷ್ಟು?
ಕೇಂದ್ರಕ್ಕಾಗಿ ಗಾಂಧಿ ಪಾರ್ಕ್ನಲ್ಲಿ2 ಎಕರೆ ಜಾಗ ಮೀಸಲಿಡಲಾಗಿದೆ. ಆದರೆ, ಕೇಂದ್ರ ಮತ್ತು ಪರಿಕರಗಳಿರುವುದು 11 ಸಾವಿರ ಚದರಡಿ ಪ್ರದೇಶದಲ್ಲಿ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಇದಕ್ಕಾಗಿ 8.50 ಕೋಟಿ ರೂ. ಮಂಜೂರಾಗಿದ್ದು, 5.50 ಕೋಟಿ ರೂ. ಸಿವಿಲ್ ಮತ್ತು ಪರಿಕರ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ. ಇನ್ನುಳಿದ 3 ಕೋಟಿ ರೂ. ಐದು ವರ್ಷ ನಿರ್ವಹಣೆಗೆ ನೀಡಲಾಗಿದೆ. ಪರಿಸರ ಶಿಕ್ಷಣ ಕೇಂದ್ರ (ಸಿಇಇ) ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ.
===
ಸಮಯ: ಬೆಳಗ್ಗೆ 10ರಿಂದ ಸಂಜೆ 6
ಪ್ರವೇಶ ಶುಲ್ಕ: ವಯಸ್ಕರಿಗೆ 10 ರೂ., 12 ವರ್ಷ ಕೆಳಗಿನವವರಿಗೆ 5 ರೂ., 5 ವರ್ಷ ಒಳಪಟ್ಟ ಮಕ್ಕಳಿಗೆ ಪ್ರವೇಶ ಉಚಿತ.