ಪೊಲೀಸರ ಸಲಿಂಗ ವಿವಾಹ !

Contributed byBeeralinge gowda|Vijaya Karnataka
same sex marriage of constables seeking legal recognition two female constables undergoing gender transition
ಮುಂಬಯಿನ ಇಬ್ಬರು ಮಹಿಳಾ ಕಾನ್ಸ್ ಟೇಬಲ್ಸ್ ಜೋಡಿಯಾಗಲು ಸಿದ್ಧ

ಕಾನೂನು ಮಾನ್ಯತೆಗಾಗಿ ಲಿಂಗ ಪರಿವರ್ತನೆಗೂ ಮುಂದಾಗಿರುವ ಲೇಡಿ
ಮುಂಬಯಿ: ಪಿಂಪ್ರಿ-ಚಿಂಚವಾಡ ಪೊಲೀಸ್ ಆಯುಕ್ತಾಲಯದಲ್ಲಿಕೆಲಸ ಮಾಡುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಕಾಸ್ಸ್ ಟೇಬಲ್ ಗಳು ಮದುವೆಯಾಗಲು ನಿರ್ಧರಿಸಿದ್ದಾರೆ.

ಆ.30 ರಂದು ಆಲಂದಿಯಲ್ಲಿನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ರಜೆ ಕೋರಿ ಇಬ್ಬರು ಅರ್ಜಿ ಸಲ್ಲಿಸಿದ್ದಾರೆ. ಕಾಸ್ಸ್ ಟೇಬಲ್ ಗಳ ನಡೆ ಪೊಲೀಸ್ ಇಲಾಖೆಯಲ್ಲಿಗಮನ ಸೆಳೆದಿದ್ದು, ಮದುವೆಗೆ ಒಬ್ಬ ಮಹಿಳಾ ಕಾಸ್ಸ್ ಟೇಬಲ್ ಕುಟುಂಬ ವಿರೋಧ ವ್ಯಕ್ತಪಡಿಸಿದೆ.

ಪಿಂಪ್ರಿ-ಚಿಂಚ್ ವಾಡ 2018ರಲ್ಲಿಪೊಲೀಸ್ ಆಯುಕ್ತಾಲಯವಾಗಿ ರಚನೆಯಾದ ನಂತರ ಸೇವೆಗೆ ಸೇರಿದ ಇಬ್ಬರು ಕಾಸ್ಸ್ ಟೇಬಲ್ ಗಳು, ಮೂರು ವರ್ಷಗಳಿಂದ ಒಟ್ಟಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈದಿಕ ಸಂಪ್ರದಾಯದಂತೆ ವೈವಾಹಿಕ ಬಂಧಕ್ಕೆ ಒಳಗಾಗಲು ನಿರ್ಧರಿಸಿದ್ದಾರೆ. ಮುದ್ರಿತ ವಿವಾಹ ಆಹ್ವಾನ ಪತ್ರಿಕೆಯೊಂದಿಗೆ ರಜೆ ಕೋರಿ ಹಿರಿಯ ಅಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದಾರೆ.

ಪೊಲೀಸ್ ತರಬೇತಿಯ ನಂತರ ಇಬ್ಬರು ಮುಂಬಯಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದರು. ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳೊಂದಿಗೆ ವಸತಿಯನ್ನು ಹಂಚಿಕೊಂಡಿದ್ದರು. ನಂತರ ಪಿಂಪ್ರಿ-ಚಿಂಚ್ ವಾಡ ಪೊಲೀಸ್ ಆಯುಕ್ತಾಲಯಕ್ಕೆ ವರ್ಗಾವಣೆಗೊಂಡಿದ್ದರು. ಮುಂಬಯಿನಿಂದ ಸ್ಥಳಾಂತರಗೊಂಡ ನಂತರವೂ ಇಬ್ಬರು ಒಟ್ಟಿಗೆ ವಾಸವಿದ್ದರು. ಕಾಲಕ್ರಮೇಣ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾದ ಮಟ್ಟಿಗೆ ಸಂಬಂಧ ಬೆಳೆಯಿತು. ಪರಸ್ಪರ ದೂರವಾಗುವ ಅಪಾಯ ತಪ್ಪಿಸಲು ಇಬ್ಬರು ವಿವಾಹಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಲಿಂಗ ಪರಿವರ್ತನೆ : ಭಾರತದಲ್ಲಿವಯಸ್ಕರ ನಡುವಿನ ಪರಸ್ಪರ ಒಪ್ಪಿಗೆಯ ಮೇರೆಗಿನ ಸಲಿಂಗ ಸಂಬಂಧಗಳು ಕಾನೂನುಬದ್ಧವಾಗಿವೆ. ಆದರೆ, ಪ್ರಸ್ತುತ ದೇಶದ ವಿವಾಹ ಕಾನೂನುಗಳ ಅಡಿಯಲ್ಲಿಸಲಿಂಗ ವಿವಾಹಗಳಿಗೆ ಶಾಸನಬದ್ಧ ಮಾನ್ಯತೆ ಇಲ್ಲ.

ಹೀಗಾಗಿ ದೇಶದ ಕಾನೂನು ಅಡಿಯಲ್ಲಿವೈವಾಹಿಕ ಮಾನ್ಯತೆ ಪಡೆಯಲು ಇಬ್ಬರು ಕಾಸ್ಸ್ ಟೇಬಲ್ ಗಳ ಪೈಕಿ ಒಬ್ಬರು ಲಿಂಗ ಪರಿವರ್ತನಾ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸುವ ಸಾಧ್ಯಸಾಧ್ಯತೆ ಬಗ್ಗೆ ಇಬ್ಬರು ಪರಿಶೀಲಿಸುತ್ತಿದ್ದಾರೆ.

ಕುಟುಂಬದ ವಿರೋಧ

ಇದಕ್ಕೆ ಒಂದು ಕುಟುಂಬ ವಿರೋಧ ವ್ಯಕ್ತಪಡಿಸಿದ್ದು, ಮಧ್ಯಪ್ರವೇಶಿಸಿ ಬುದ್ದಿ ಹೇಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದೆ. ಇಬ್ಬರ ಖಾಸಗಿ ವಿಷಯವಾಗಿರುವ ಹಿನ್ನೆಲೆಯಲ್ಲಿಯಾವುದೇ ಕ್ರಮ ಕೈಗೊಳ್ಳಲು ಬರುವುದಿಲ್ಲಎಂದು ತಿಳಿಸಿದ್ದಾರೆ.