ಮೊಗ್ರಾಲ್ ನಲ್ಲಿಈದ್ ಮಿಲಾದ್ : ಬೃಹತ್ ರಾಲಿ, ಮೌಲೀದ್ ಸಭೆ

Contributed byshreemolu.93@gmail.com|Vijaya Karnataka
a grand procession highlighting the five year celebration of the mirth meal nabi festival in mogral
ವಿಕ ಸುದ್ದಿಲೋಕ ಕುಂಬಳೆ

ಇಸ್ಲಾಮಿಕ್ ಧರ್ಮಗುರು ಪ್ರವಾಚಕ ಮುಹಮ್ಮದ್ ನಬಿ(ಸ) ಅವರ ಜನ್ಮದಿನವಾದ ‘ ಈದ್ ಮಿಲಾದ್ ’ನ್ನು ಮೊಗ್ರಾಲ್ ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಅತ್ಯಂತ ಭಕ್ತಿ-ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಿದರು. ಹಿಜ್ರಿ ವರ್ಷದ ರಬಿಉಲ್ ಅವ್ವಲ್ 12ರ ಈ ಪವಿತ್ರ ದಿನವನ್ನು ಮೀಲಾಡ್ ನಬಿ, ಮೀಲಾಡ್ ಶರೀಫ್ ಹಾಗೂ ಈದ್ ಮೀಲಾಡ್ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿದ್ದು, ಇಸ್ಲಾಮಿಕ್ ಸುನ್ನಿ ವಿಭಾಗದ ನೇತೃತ್ವದಲ್ಲಿವಿಧವಿಧದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ರಬಿಉಲ್ ಅವ್ವಲ್ ಮಾಸ ಆರಂಭಗೊಳ್ಳುತ್ತಿದ್ದಂತೆ ಮಸೀದಿ ಮತ್ತು ಮದರಸಾಗಳನ್ನು ವಿಶೇಷವಾಗಿ ಅಲಂಕರಿಸಿ ನಬಿ ದಿನದ ಸಂಭ್ರಮಕ್ಕೆ ಚಾಲನೆ ನೀಡಲಾಗಿತ್ತು. ನಬಿ ದಿನದ ಪೂರ್ವಭಾವಿಯಾಗಿ ಮಸೀದಿಗಳಲ್ಲಿಭವ್ಯವಾದ ಗ್ರಾತ್ರ್ಯಂಡ್ ಮೌಲೀದ್ ಸಭೆಗಳನ್ನು ಆಯೋಜಿಸಲಾಗಿದ್ದರೆ, ಜನ್ಮದಿನದಂದು ಮುಂಜಾನೆ ಮದರಸಾಗಳ ನೇತೃತ್ವದಲ್ಲಿವರ್ಣರಂಜಿತ ರಾಲಿಗಳು ನಡೆದವು. ಹಾಲಿನ ಕಡಲಿನಂತೆ ಕಂಗೊಳಿಸುವ ಬಿಳಿಯ ಹೊಸ ಉಡುಪುಗಳನ್ನು ಧರಿಸಿದ ನೂರಾರು ವಿದ್ಯಾರ್ಥಿಗಳು ಪ್ರವಾಚಕ ಕೀರ್ತನೆ ಹಾಗೂ ಪ್ರಶಂಸಾ ಗೀತೆ ಹಾಡುತ್ತಾ ಸಂಭ್ರಮದಿಂದ ಹೆಜ್ಜೆ ಹಾಕಿದರು. ರಾಲಿಯಲ್ಲಿಪ್ರದರ್ಶನಗೊಂಡ ದಫ್ ಮುಟ್ ಹಾಗೂ ಸ್ಕೌಟ್ ತಂಡಗಳ ಸಾಹಸಗಳು ಸಾರ್ವಜನಿಕರ ಗಮನ ಸೆಳೆದವು. ಶೋಭಾಯಾತ್ರೆಯನ್ನು ವೀಕ್ಷಿಸಲು ರಸ್ತೆಯ ಎರಡೂ ಬದಿಗಳಲ್ಲಿನೂರಾರು ಮಹಿಳೆಯರು, ಪೋಷಕರು ಮತ್ತು ಸ್ಥಳೀಯರು ಜಮಾಯಿಸಿದ್ದರು. ಈ ಸಂದರ್ಭದಲ್ಲಿವಿವಿಧ ಸ್ವಯಂಸೇವಾ ಸಂಸ್ಥೆಗಳ ವತಿಯಿಂದ ಮೆರವಣಿಗೆಯಲ್ಲಿಪಾಲ್ಗೊಂಡವರಿಗೆ ತಂಪು ಪಾನೀಯ, ಸಿಹಿ ತಿಂಡಿ ಹಾಗೂ ಪಾಯಸ ವಿತರಿಸಲಾಯಿತು.

ಮೊಗ್ರಾಲ್ ನ ಸಿರಾಜುಲ್ ಉಲೂಮ್ ಮದರಸ ಕೊಪ್ಪಳಂ, ಹಯಾತುಲ್ ಇಸ್ಲಾಂ ಮದರಸ ಕುನ್ನಿಲ್ , ನೂರುಲ್ ಹುದಾ ಮದರಸ ಹಾಗೂ ಬದ್ರುಲ್ ಉಲೂಮ್ ಮದರಸ ಸೇರಿದಂತೆ ವಿವಿಧ ಮದರಸಾಗಳ ಆಶ್ರಯದಲ್ಲಿಬೃಹತ್ ನಬಿ ದಿನದ ಶೋಭಾಯಾತ್ರೆ ನಡೆಯಿತು. ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯರು ಒಂದಾಗಿ ಮೊಗ್ರಾಲ್ ಟೌನ್ ಕೇಂದ್ರೀಕರಿಸಿ ಶೋಭಾಯಾತ್ರೆಯಲ್ಲಿಭಾಗವಹಿಸಿದರು.

ಆಚರಣೆಯ ಭಾಗವಾಗಿ ಮದರಸಾಗಳಲ್ಲಿವಿದ್ಯಾರ್ಥಿಗಳಿಗಾಗಿ ಇಸ್ಲಾಮಿಕ್ ಸಾಂಸ್ಕೃತಿಕ ಹಾಗೂ ಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮುಂದಿನ ದಿನಗಳಲ್ಲೂಈ ಸ್ಪರ್ಧೆಗಳು ಮುಂದುವರಿಯಲಿವೆ. ಸ್ಪರ್ಧೆಯಲ್ಲಿಪಾಲ್ಗೊಳ್ಳುವ ಎಲ್ಲವಿದ್ಯಾರ್ಥಿಗಳಿಗೆ ಮಸೀದಿ ಹಾಗೂ ಮದರಸ ಸಮಿತಿಗಳ ವತಿಯಿಂದ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

25ಕೆಯು ಮೊಗ್ರಾಲ್ ನಲ್ಲಿನಾನಾ ಮದರಸಾಗಳ ಆಶ್ರಯದಲ್ಲಿನಡೆದ ನಬಿ ದಿನದ ಬೃಹತ್ ರಾಲಿ.