ಕಂಪ್ಲಿ: ವಚನ ಶ್ರಾವಣ ಕಾರ್ಯಕ್ರಮ

Contributed bykvkampli@gmail.com|Vijaya Karnataka
vachana shravan event inauguration of education and literature
ವಚನ ಶ್ರಾವಣ ಕಾರ್ಯಕ್ರಮ

ವಿಕ ಸುದ್ದಿಲೋಕ ಕಂಪ್ಲಿ
ಸ್ಥಳೀಯ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳದಿಂದ ಶಿಕ್ಷಕ ಮುದುಕಪ್ಪ ನೆಲಜೇರಿ ನಿವಾಸದಲ್ಲಿಸೋಮವಾರ ವಚನ ಶ್ರಾವಣ ಕಾರ್ಯಕ್ರಮ ನಡೆಯಿತು.

ತಾಲೂಕು ವೀರಶೈವ ಸಂಘದ ಅಧ್ಯಕ್ಷ ಎಸ್ .ಎಂ.ನಾಗರಾಜ ಮಾತನಾಡಿ, ‘‘ಶರಣ ಸಾಹಿತ್ಯವನ್ನು ಎಲ್ಲರೂ ಜೀವನದಲ್ಲಿಅಳವಡಿಸಿಕೊಳ್ಳಬೇಕು. ಇದರಿಂದ ಸರಳ ಸುಂದರ ಬದುಕನ್ನು ನಡೆಸಲು ಕಲಿಸುತ್ತದೆ,’’ ಎಂದರು.

ಕನ್ನಡ ವಿವಿ ಸಂಶೋಧನಾರ್ಥಿ ಬೇರ್ಗಿ ಜಯಶ್ರೀ ‘ಶರಣ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕೃತಿಗಳು’ ಕುರಿತು ಮಾತನಾಡಿದರು. ಚಿಕ್ಕಜಾಯಿಗನೂರು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಬಿ.ಎಂ.ಗಾಯತ್ರಿದೇವಿ ‘ಕಾಯಕ ಶ್ರೇಷ್ಠತೆ’ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳಾದ ಶ್ರೀರಕ್ಷಾ, ಮಲ್ಲಮ್ಮ, ಪ್ರಭಾವತಿ ನೆಲಜೇರಿ ಅವರಿಂದ ವಚನಗಾಯನ ನಡೆಯಿತು.

ಇಸಿಒ ಟಿ.ಎಂ.ಬಸವರಾಜ, ಪ್ರಮುಖರಾದ ಜಿ.ಪ್ರಕಾಶ, ಮುದುಕಪ್ಪ ನೆಲಜೇರಿ, ಡಾ.ಬಿ.ಸುನಿಲ್ , ಬಿ.ಎಂ.ಪುಷ್ಪಾ ರುದ್ರಯ್ಯ, ಅಶೋಕ ಕುಕನೂರು, ಡಾ.ಎಸ್ .ಎಂ.ಸಾವಿತ್ರಿ, ವೀರಯ್ಯಸಾಲಿಮಠ, ಚಂದ್ರಯ್ಯ ಸೊಪ್ಪಿಮಠ, ಎನ್ .ಬಿ.ರೇಣುಕಾರಾಧ್ಯ, ಗವಿ ವೀರನಗೌಡ, ಕೆ.ಎಂ.ವಾಗೀಶ್ , ಜಿ.ಮೇಲಾರೆಡ್ಡಿ, ಎಸ್ .ರಾಮಪ್ಪ ಇದ್ದರು.

---

ಪೊ.ಶೀ.25ಕೆಎಂಪಿ3;- ಕಂಪ್ಲಿಯಲ್ಲಿನಡೆದ ವಚನ ಶ್ರಾವಣ ಕಾರ್ಯಕ್ರಮದಲ್ಲಿತಾಲೂಕು ವೀರಶೈವ ಸಂಘದ ಅಧ್ಯಕ್ಷ

ಎಸ್ .ಎಂ.ನಾಗರಾಜ ಷಟ್ ಸ್ಥಳ ಧ್ವಜಾರೋಹಣ ನೆರವೇರಿಸಿದರು.