ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ

Contributed bygvittalslb@gmail.com|Vijaya Karnataka
protest demanding punishment for wrongdoers
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ

ವಿಕ ಸುದ್ದಿಲೋಕ ಕೊಪ್ಪಳ
ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಸಾರ್ವಜನಿಕ ಸಭೆಯ ನಂತರ ಸ್ಥಳೀಯ ಸಂಘಟನೆಯೊಂದು ಗಂಗಾಜಲ ಹಾಗೂ ಹವನದ ಮೂಲಕ ಮೈದಾನ ಶುದ್ಧೀಕರಿಸಿದ ಘಟನೆ ಖಂಡಿಸಿ ನಗರದಲ್ಲಿಜನಪರ ಹಾಗೂ ನಾನಾ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಲಾ ಯಿತು.

‘‘ದಲಿತ ಸಮುದಾಯದ ಪ್ರಮುಖ ನಾಯಕರು ಭಾಗವಹಿಸಿದ್ದ ಸ್ಥಳವನ್ನು ಅಶುದ್ಧ ಎಂಬಂತೆ ಬಿಂಬಿಸಿ ರುವುದು ಅಮಾನವೀಯ ವಿಚಾರ. ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮವಹಿಸಬೇಕು,’’ ಎಂದು ಪ್ರತಿಭ ಟನಾಕಾರರು ಆಗ್ರಹಿಸಿದರು.

ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್ .ಎ.ಗಫಾರ್ , ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಮುಖ್ಯ ಸಂಚಾಲಕ ಬಸವರಾಜ ಶೀಲವಂತರ್ , ಫಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ , ಕೊಳಚೆ ನಿರ್ಮೂಲನಾ ವೇದಿಕೆ ಸಂಚಾಲಕ ಮಖಬೂಲ್ ರಾಯಚೂರು, ಮುಖಂಡ ಹನುಮೇಶ ಕಲ್ಮಂಗಿ, ದಲಿತ ಯುವ ವೇದಿಕೆ ಸಂಚಾಲಕ ಸುಂಕಪ್ಪ ಮೀಸಿ ಸೇರಿ ಇತರರು ಇದ್ದರು.

ಫೋಟೋ ಕ್ಯಾಪ್ಷನ್ : 25-ವಿಠ್ಠಲ-22

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭಾಗವಹಿಸಿದ್ದ ಸಾರ್ವಜನಿಕ ಸಭೆಯ ಮೈದಾನ ಶುದ್ಧೀಕರಣಗೊಳಿಸಿದ ಘಟನೆ ಖಂಡಿಸಿ ಕೊಪ್ಪಳದ ಅಶೋಕ ವೃತ್ತದಲ್ಲಿನಾನಾ ಸಂಘಟನೆಗಳಿಂದ ಪ್ರತಿಭ ಟಿಸಲಾಯಿತು.