ಉತ್ತಮ ಆರೋಗ್ಯದ ಸ್ಥಿತಿಗತಿಯನ್ನು ತಿಳಿಯಲು ಎಲ್ಲರೂ ನಿಯಮಿತವಾಗಿ ದೇಹದ ರಕ್ತದೊತ್ತಡ, ಸಕ್ಕರೆ ಮಟ್ಟವನ್ನು ತಿಳಿದುಕೊಳ್ಳುವುದು ಅವಶ್ಯ ಎಂದು ಡಾ. ತಿಮ್ಮಣ್ಣ ಗಿರಡ್ಡಿ ಹೇಳಿದರು.ಇಲ್ಲಿನ ಕಾಲೇಜು ರಸ್ತೆಯಲ್ಲಿವಾಯು ವಿಹಾರಿಗಳಿಗೆ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಏರ್ಪಡಿಸಿದ್ದ ಉಚಿತ ಬಿಪಿ ಮತ್ತು ಶುಗರ್ ತಪಾಸಣೆ ಶಿಬಿರದಲ್ಲಿಮಾತನಾಡಿ, ‘ಬಿಪಿ ಮತ್ತು ಶುಗರ್ ಏರಿಳಿತದಿಂದಾಗಿ ಹೃದಯಾಘಾತ, ಪಾಶ್ರ್ವವಾಯು ಹಾಗೂ ಕಿಡ್ನಿ ವೈಫಲ್ಯಗಳಾಗುವ ಸಂಭವವಿದ್ದು ಬಿಪಿ ಮತ್ತು ಶುಗರ್ ತಪಾಸಣೆ ಬಗ್ಗೆ ನಿರ್ಲಕ್ಷ್ಯ ಮಾಡಬಾರದು’’, ಎಂದರು.
ಡಾ. ಯಲ್ಲಾಲಿಂಗ ಮಳವಾಡ, ಡಾ. ಮಲ್ಲಿಕಾರ್ಜುನ ಹಿರೇಮಠ ಆರೋಗ್ಯ ತಪಾಸಣೆ ಬಗ್ಗೆ ಜನರಲ್ಲಿಅರಿವು ಮೂಡಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ ದೇಸಾಯಿ. ‘‘ಲಯನ್ಸ್ ಕ್ಲಬ್ ದಿಂದ ಪ್ರತಿ 15ದಿನಗಳಿಗೊಮ್ಮೆ ತಜ್ಞ ವೈದ್ಯರ ಸಹಯೋಗದಲ್ಲಿಸಾರ್ವಜನಿಕ ಸ್ಥಳಗಳಲ್ಲಿಬಿಪಿ ಮತ್ತು ಶುಗರ್ ತಪಾಸಣೆ ಏರ್ಪಡಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಲಿ’’, ಎಂದರು.
ಕಾರ್ಯದರ್ಶಿ ಕೃಷ್ಣಾ ಕೆಂಪಸತ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂತೀಯ ಅಧ್ಯಕ್ಷ ಬಾಲಶೇಖರ ಬಂದಿ, ಜಿಲ್ಲಾಜಂಟಿ ಖಜಾಂಚಿ ವೆಂಕಟೇಶ ಸೋನವಾಲಕರ, ಮಹಾಂತೇಶ ಹೊಸೂರ, ಸಂಜಯ ಮೋಕಾಶಿ, ಶಿವಾನಂದ ಗಾಡವಿ, ಅಪ್ಪಣ್ಣ ಬಡಿಗೇರ, ಸಂತೋಷ ಅಂಗಡಿ ಇದ್ದರು.
ಫೋಟೊ:
(25ಎಮಡಿಎಲ್ -2): ಮೂಡಲಗಿಯಲ್ಲಿಲಯನ್ಸ್ ಕ್ಲಬ್ ಪರಿವಾರದಿಂದ ಸಾರ್ವಜನಿಕರ ಬಿಪಿ ಮತ್ತು ಶುಗರ್ ತಪಾಸಣೆ ನಡೆಸಲಾಯಿತು.