ಚೆನ್ನೈ: ‘‘ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರಕಾರ ಚುನಾವಣೆ ವೇಳೆ ಎಲ್ಲಾಕುಟುಂಬಗಳಿಗೆ ವಾರ್ಷಿಕವಾಗಿ ಉಚಿತವಾಗಿ ಆರು ಸಿಲಿಂಡರ್ ನೀಡುವ ವಾಗ್ವಾನದಿಂದ ಹಿಂದೆ ಸರಿದಿದೆ. ಆರ್ಥಿಕ ನೆಪದಲ್ಲಿಸಿಲಿಂಡರ್ ಗಳ ಸಂಖ್ಯೆಯನ್ನು ಮೂರಕ್ಕೆ ಕಡಿತಗೊಳಿಸಿದೆ,’’ ಎಂದು ತಮಿಳುನಾಡು ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಆರೋಪಿಸಿದ್ದಾರೆ.
‘‘ಅನ್ನಪೂರ್ಣಿ ಸೂಪರ್ ಸಿಕ್ಸ್ ’ ಯೋಜನೆಯಡಿ ಎಲ್ ಪಿಜಿ ಸಿಲಿಂಡರ್ ನೀಡುತ್ತಿರುವ ಸರಕಾರ, ಕುಟುಂಬಗಳ ವಾರ್ಷಿಕ ಆದಾಯದ ನೆಪ ಮಾಡಿಕೊಂಡು ಆರು ಸಿಲಿಂಡರ್ ನೀಡಬೇಕಾದ ಸ್ಥಾನದಲ್ಲಿಮೂರು ಸಿಲಿಂಡರ್ ವಿತರಣೆ ಮಾಡಲು ಮುಂದಾಗಿದೆ. ಕೊಟ್ಟ ಮಾತು ತಪ್ಪುವ ಮೂಲಕ ಮತದಾರರಿಗೆ ವಂಚನೆ ಎಸಗಿದೆ,’’ ಎಂದು ನಾರಾಯಣನ್ ತಿರುಪತಿ ಆರೋಪ ಮಾಡಿದರು.‘‘ಚುನಾವಣೆ ಪ್ರಣಾಳಿಕೆಯಲ್ಲಿಎಲ್ಲಾಕುಟುಂಬಗಳಿಗೆ ಆರು ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದ ವಿಜಯ್ , ಅಧಿಕಾರಕ್ಕೆ ಬಂದ ಬಳಿಕ ಕುಂಟು ನೆಪ ಮಾಡಿಕೊಂಡು, ಸಿಲಿಂಡರ್ ಗಳ ಸಂಖ್ಯೆ ಕಡಿತಗೊಳಿಸಿದ್ದಾರೆ,’’ ಎಂದು ತಿರುಪತಿ ದೂರಿದರು.
ಸೋಮವಾರ ಅನ್ನಪೂರ್ಣ ಸೂಪರ್ ಸಿಕ್ಸ್ ಯೋಜನೆ ಅನಾವರಣಗೊಳಿಸಿದ ಸಿಎಂ ವಿಜಯ್ , ‘‘2027ರ ಪೊಂಗಲ್ ಹಬ್ಬದ ದಿನದಿಂದ ವಾರ್ಷಿಕವಾಗಿ ಪ್ರತಿ ಕುಟುಂಬಗಳಿಗೆ ಮೂರು ಸಿಲಿಂಡರ್ ವಿತರಣೆ ಮಾಡಲಾಗುವುದು,’’ ಎಂದು ಭರವಸೆ ನೀಡಿದರು. ರಾಜ್ಯದ 1.30 ಕೋಟಿ ಕುಟುಂಬಗಳಿಗೆ ಸಿಲಿಂಡರ್ ವಿತರಿಸಲು 4 ಸಾವಿರ ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.