ಒಂದೇ ದಿನದಲ್ಲಿಹೋರಾಟ ಅಂತ್ಯ

Contributed bysanjukoli5050@gmail.com|Vijaya Karnataka
farmers protest for water supply from canal ends in a day
ಕಾಲುವೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ | ಅಧಿಕಾರಿಗಳ ಭರವಸೆ

ಒಂದೇ ದಿನದಲ್ಲಿಹೋರಾಟ ಅಂತ್ಯ
ವಿಕ ಸುದ್ದಿಲೋಕ ಝಳಕಿ

ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ಕಡೆಯ ಭಾಗದ ರೈತರಿಗೆ ನಾರಾಯಣಪುರ ಎಡದಂಡೆ ಕಾಲುವೆ ಮುಖಾಂತರ ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗ್ರಾಮದ ಕೆಬಿಜೆಎನ್ ಎಲ್ ನ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ರೈತ ಮುಖಂಡ ಶಿವಾನಂದ ಬಿರಾದಾರ ಮಾತನಾಡಿ, ‘‘ಚಡಚಣ ತಾಲೂಕಿನ ನಾರಾಯಣಪುರ ಎಡದಂಡೆ ಕಾಲುವೆ ಡಿಸ್ಟ್ರಿಬ್ಯೂಟರ್ 132 ರಿಂದ 172 ರವರೆಗಿನ ಕಾಲುವೆ ಮೂಲಕ ದಸೂರ ಗ್ರಾಮದ ಕೊನೆಯವರೆಗೂ ನೀರು ಹರಿಸಬೇಕು. ಮೂರು ಸಾರಿ ಪಾಳಿ ಬಿಟ್ಟರು ನೀರು ಬಂದಿಲ್ಲ. ನೀರು ಬಿಡದೇ ಹೋದರೆ ಉಗ್ರ ಹೋರಾಟ ಮಾಡಲಾಗುವುದು,’’ ಎಂದು ಎಚ್ಚರಿಸಿದರು.

ರೈತೋದಯ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಮಾತನಾಡಿ, ‘‘ಇಂಡಿ ತಾಲೂಕಿನ ರೈತರಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗಿಲ್ಲ. ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ಕೊನೆಯ ಭಾಗದ ರೈತರಿಗೆ ಕಾಲುವೆ ನೀರು ಹರಿಸುವಲ್ಲಿಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಜನ ಜಾನುವಾರುಗಳಿಗೆ ಕುಡಿವ ನೀರಿನ ಅಭಾವ ಉಂಟಾಗುತ್ತಿದ್ದು, ಶೀಘ್ರ ನೀರು ಹರಿಸಲು ಕ್ರಮ ಕೈಗೊಳ್ಳಬೇಕು,’’ ಎಂದು ಆಗ್ರಹಿಸಿದರು.

ಭಾರತಿ ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಬಗಲಿ, ಅಶೋಕ ನಡನಟ್ಟಿ, ಅಣ್ಣಾರಾಯ ಶಿರನಾಳ, ಕಾಶಿರಾಯ ಕಾಮಗೊಂಡ, ಸುರೇಶ ಸಾಲುಟಗಿ, ಮಾಹಾಂತೇಶ ಬಿರಾದಾರ ಇತರರು ಇದ್ದರು.

---

ರೈತರ ಮನವೊಲಿಸಿದ ಅಧಿಕಾರಿಗಳು

ಕೆಬಿಜೆಎನ್ ಎಲ್ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಲು ಮುಂದಾದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ ದಾಯಗೊಡೆ, ಎಇ ಚಂದ್ರಕಂತ ಕೋಳಿ ಹಾಗೂ ಝಳಕಿ ಪಿಎಸ್ ಐ ಮಂಜುನಾಥ ತಿಕ್ಕನವರ ಮಾತನಾಡಿ, ಎಡದಂಡೆ ಡಿಸ್ಟ್ರಿಬ್ಯೂಟರ್ ಕಾಲುವೆ ಮೂಲಕ ಕೊನೆಯ ಹಂತದವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ರೈತರು ಸಹಕರಿಸಬೇಕು. ಬರುವ ಸೆ.3 ರಿಂದ 5 ರವರೆಗೆ ಟೇಲ್ ಎಂಡ್ ವರೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿ ರೈತರ ಮನವೊಲಿಸಿದರು.

ಫೋಟೊ

24 ಝಳಕಿ ಪೋಟೋ 01

ಝಳಕಿಯ ಕೆಬಿಜೆಎನ್ ಎಲ್ ಕಚೇರಿ ಆವರಣದಲ್ಲಿರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೈಗೊಂಡ ಹೋರಾಟವನ್ನು ರೈತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕೈಬಿಟ್ಟರು.