ಕರ್ತವ್ಯ ಲೋಪ: ಮಹಾರಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಮಾನತು

Contributed byChandrashekar.Sk@timesgroup.com|Vijaya Karnataka
dismissed principal of maharani pre university college for negligence
ಕರ್ತವ್ಯ ಲೋಪ: ಮಹಾರಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಮಾನತು

ವಿಕ ಸುದ್ದಿಲೋಕ ಮೈಸೂರು
ನಿಯಮಗಳನ್ನು ಉಲ್ಲಂಘಿಘಿಸಿ ಆರ್ಥಿಕ ಅವ್ಯವಹಾರ ನಡೆಸಿ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿಮಹಾರಾಣಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಪಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಸೋಮಣ್ಣ ಅವರು ಕರ್ತವ್ಯ ಲೋಪ ಎಸಗಿರುವುದಾಗಿ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿಕಾಲೇಜಿನ ಲೆಕ್ಕಪತ್ರ ತಪಾಸಣೆಯನ್ನು ನಡೆಸಲಾಗಿತ್ತು. ಆದರೆ, ಕಾಲೇಜಿನ ಸರಕಾರಿ ಬ್ಯಾಂಕ್ ಖಾತೆ ಹಾಗೂ ಸರಕಾರೇತರ ಬ್ಯಾಂಕ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಬ್ಯಾಂಕ್ ಖಾತೆಗಳಲ್ಲಿನ ಮೊತ್ತಗಳನ್ನು ಪರಿಶೀಲಿಸಲಾಗಿತ್ತು. ಆದರೆ, ಸರಕಾರದ ಆರ್ಥಿಕ ಸಂಹಿತೆ ನಿಯಮಗಳನ್ನು ಪಾಲಿಸದೆ ಡ್ರಾ ಮಾಡಿರುವುದನ್ನು ತಪಾಸಣಾ ಅಧಿಕಾರಿಗಳು ವರದಿಯಲ್ಲಿಉಲ್ಲೇಖಿಸಿದ್ದಾರೆ.

ಈ ಕುರಿತು ಯಾವುದೇ ಸ್ಪಷ್ಟ ಹಾಗೂ ಸಮರ್ಥನೀಯ ಕಾರಣಗಳನ್ನು ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಎಂ . ಅವರು ಸಲ್ಲಿಸಿಲ್ಲ. ಹೀಗಾಗಿ ಇವರನ್ನು ಅಮಾನತುಗೊಳಿಸಿ ಹೆಚ್ಚಿನ ವಿಚಾರಣೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.