ವೀಣಾ ವಿ. ಕುಂಬಾರ vಛಿಛ್ಞಿa.k್ಠಞಚಿa್ಟಃಠಿಜಿಞಛಿsಟ್ಛಜ್ಞಿdಜಿa.್ಚಟಞ ರಂಗೋಲಿ ಗೂ ಮಹಿಳೆಗೂ ಅವಿನಾಭಾವ ನಂಟಿದೆ. ಬೆಳಗ್ಗೆ ಎದ್ದೊಡನೆ ಬಾಗಿಲ ಕಸ ಗುಡಿಸಿ, ನೀರು ಹಾಕಿ, ರಂಗೋಲಿ ಹಾಕುವುದ ರಿಂದಲೇ ಹೆಣ್ಣುಮಕ್ಕಳ ದಿನಚರಿ ಆರಂಭವಾಗುತ್ತದೆ. ಹಬ್ಬ, ವಿಶೇಷ ಸಂದರ್ಭಗಳಲ್ಲಿರಂಗೋಲಿ ತನ್ನದೇ ಆದ ಮಹತ್ವ ಹಾಗೂ ಭಾವನಾತ್ಮಕತೆ ಹೊಂದಿದೆ. ಅಷ್ಟೇ ಅಲ್ಲ, ರಂಗೋಲಿ ಹಾಕುವ ವಿಧಾನವು ಆರೋಗ್ಯ ಪ್ರಯೋಜನಗಳನ್ನು ನೀಡುವ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುತ್ತದೆ ಎನ್ನುತ್ತಾರೆ ತಜ್ಞರು. ಆರೋಗ್ಯ ಮಹತ್ವ: ರಂಗೋಲಿ ಹಾಕುವುದರಿಂದ ವ್ಯಕ್ತಿಯ ಸೃಜನಶೀಲತೆ ಹೊರಬರುತ್ತದೆ, ಕಲ್ಪನಾ ಶಕ್ತಿ ವೃದ್ಧಿಯಾಗುತ್ತದೆ. ರಂಗೋಲಿಯನ್ನು ಸುಂದರ ಮತ್ತು ಅಚ್ಚುಕಟ್ಟಾಗಿ ಚಿತ್ರಿಸುವ ನಿಟ್ಟಿನಲ್ಲಿಗಮನವನ್ನೆಲ್ಲಕೇಂದ್ರೀಕರಿಸುವುದರಿಂದ ಏಕಾಗ್ರತೆ ಹೆಚ್ಚಾಗಿ ಮನಸ್ಸು ಶಾಂತವಾಗುತ್ತದೆ. ಇದು ಒತ್ತಡ ನಿವಾರಣೆಗೆ ಹಾಗೂ ಮಿದುಳಿನ ಚುರುಕುತನಕ್ಕೂ ಸಹಕಾರಿ. ರಂಗೋಲಿ ಹಾಕುವ ಸಮಯ ಬೆಳಗಿನ ಬ್ರಾಹ್ಮೀ ಮುಹೂರ್ತವಾದ್ದರಿಂದ ಆಗ ವಾತಾವರಣದಲ್ಲಿಶುದ್ಧ ಆಮ್ಲಜನಕವಿರುತ್ತದೆ. ಇದರ ಉಸಿರಾಟದಿಂದ ದೇಹವು ಚೈತನ್ಯದಾಯಕವಾಗುತ್ತದೆ.
ಸಕಾರಾತ್ಮಕ ಉಲ್ಲಾಸ: ಬೆಳಗ್ಗೆ ಬೇಗ ಎದ್ದು ಬರಿಗಾಲಿನಲ್ಲಿಇಡೀ ಅಂಗಳದ ಕಸ ಗುಡಿಸುವುದರಿಂದ ಪಾದಕ್ಕೆ ಸಣ್ಣ ಸಣ್ಣ ಹರಳು ಚುಚ್ಚುವುದರಿಂದ ಅದು ಅಕ್ಯುಪಂಕ್ಚರ್ ಆಗಿ ಸಹ ನರನಾಡಿಗಳಲ್ಲಿಚೈತನ್ಯ ಮೂಡಿಸುತ್ತದೆ. ಆಕರ್ಷಕ ರಂಗೋಲಿ ಹಾಕಿದಾಗ ಅದರ ಚಿತ್ರಣ ಬಹಳ ಹೊತ್ತು ಮನದಲ್ಲಿಉಳಿದು ಮನಕ್ಕೆ ಮುದ ನೀಡುತ್ತದೆ. ಹೀಗಾಗಿ ಇದು ಮಾನಸಿಕ ಆರೋಗ್ಯಕ್ಕೂ ಸಹಾಯಕಾರಿ. ನೋಡುವವರಿಗೂ ಅದರ ಸೊಗಸು ಖುಷಿ ಕೊಡುತ್ತದೆ. ಬಣ್ಣಗಳು ಹಾಗೂ ಸುಂದರ ಆಕಾರಗಳು ಮನಸ್ಸಿಗೆ ಸಕಾರಾತ್ಮಕ ಉಲ್ಲಾಸ ನೀಡುತ್ತವೆ. ಚಿತ್ರವೇ ಹಾಗೆ. ಅದು ಮನುಷ್ಯನ ಮನಸ್ಸನ್ನು ಅರಿವಿಲ್ಲದೇ ಬಲಗೊಳಿಸುತ್ತದೆ. ಮಾನಸಿಕ ಬಲವರ್ಧನೆಯಿಂದ ಸಹಜವಾಗಿ ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಕೆಳಗೆ ಕುಳಿತು ರಂಗೋಲಿ ಬಿಡಿಸುವುದರಿಂದ ಬೆನ್ನುಮೂಳೆ ಹಾಗೂ ಕಾಲುಗಳ ಕೀಲುಗಳಿಗೆ ಉತ್ತಮ ವ್ಯಾಯಾಮ ವಾಗುತ್ತದೆ. ಬೆರಳುಗಳಿಂದ ಪುಡಿ ಹಾಕಿ ವಿನ್ಯಾಸ ಮಾಡುವುದರಿಂದ ಕೈ-ಕಣ್ಣಿನ ಸಮನ್ವಯ ಸುಧಾರಿಸುತ್ತದೆ.