ಚಿತ್ರರಂಗದಲ್ಲಿತಮ್ಮ ವಿಭಿನ್ನ ಫ್ಯಾಷನ್ ಸೆನ್ಸ್ ನಿಂದ ಸದಾ ಸುದ್ದಿಯಲ್ಲಿರುವ ನಟಿ ತಾರಾ ಸುತಾರಿಯಾ ಇತ್ತೀಚಿನ ಫೋಟೊ ಶೂಟ್ ನಲ್ಲಿವಿಂಟೇಜ್ ಶೈಲಿಯ ಕಪ್ಪು ಬಣ್ಣದ ಲೇಸ್ ಗೌನ್ ಧರಿಸಿ ಗಮನ ಸೆಳೆದಿದ್ದಾರೆ. 1950ರ ದಶಕದ ಸೌಂದರ್ಯವನ್ನು ಮರುಸೃಷ್ಟಿಸಿರುವ ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾರಾ ಧರಿಸಿದ್ದ ಲೇಸ್ ಗೌನ್ ಹೂವಿನ ಡಿಸೈನ್ ಹೊಂದಿದ್ದು, ಈ ವಿಂಟೇಜ್ ಶೈಲಿಗೆ ಮತ್ತಷ್ಟು ಮೆರುಗು ನೀಡಲು ಅವರು ಕೈಗೆ ಉದ್ದನೆಯ ಕಪ್ಪು ಬಣ್ಣದ ಗ್ಲೌಸ್ ಧರಿಸಿದ್ದಾರೆ. ಕಪ್ಪು ಉಡುಪಿಗೆ ಸೂಕ್ತ ಕಾಂಟ್ರಾಸ್ವ್ ನೀಡಲು ಮುತ್ತಿನ ಚೋಕರ್ ನೆಕ್ಲೇಸ್ ಹಾಗೂ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಲುಕ್ ಗೆ ಅವರು ತಮ್ಮ ಮೇಕಪ್ ಅನ್ನು ಸರಳ ಹಾಗೂ ನೈಸರ್ಗಿಕವಾಗಿ ಮಾಡಿದ್ದಾರೆ. ಅವರ ಕೂದಲನ್ನು ನೀಟಾಗಿ ಹಿಂದಕ್ಕೆ ಕಟ್ಟಿ, ಮುಖದ ಅಂಚಿನಲ್ಲಿಕೆಲವು ಎಳೆಗಳನ್ನು ಬಿಟ್ಟು ಬನ್ ಶೈಲಿಯಲ್ಲಿವಿನ್ಯಾಸಗೊಳಿಸಲಾಗಿದೆ.