ವಿದ್ಯಾ ನವೀನ್ ಹಬ್ಬದ ಈ ಸೀಸನ್ ನಲ್ಲಿಮೇಕಪ್ ಪ್ರಾಮುಖ್ಯ ಪಡೆಯುತ್ತದೆ. ಉಡುಪು ಹಾಗೂ ಸಂದರ್ಭಕ್ಕೆ ಪೂರಕ ಮೇಕಪ್ ಆಕರ್ಷಕ. ಹಬ್ಬದ ಮೇಕಪ್ ನಲ್ಲಿಸರಳತೆ, ಸಂಪ್ರದಾಯದ ಸೊಗಡಿಗೆ ಆದ್ಯತೆ ನೀಡುವುದು ಉತ್ತಮ.
ಫೆಸ್ಟಿವ್ ಲುಕ್ ನೀಡುವ ಮೇಕಪ್ ಬಗ್ಗೆ ಇಲ್ಲಿದೆ ವಿವರ.
ಮುಖದ ತಯಾರಿ: ಮೇಕಪ್ ಗೂ ಮೊದಲು ಮುಖವನ್ನು ಸ್ವಚ್ಛಗೊಳಿಸಿ, ಮಾಯಿಶ್ಚರೈಸರ್ ಮತ್ತು ಸನ್ ಸ್ಕ್ರೀನ್ ಹಚ್ಚಿ.
ಲೈಟ್ ಬೇಸ್ : ಹಬ್ಬದ ದಿನ ತುಂಬಾ ದಪ್ಪವಾದ ಫೌಂಡೇಶನ್ ಗಿಂತ ನಿಮ್ಮ ಚರ್ಮದ ಬಣ್ಣಕ್ಕೆ ಹೊಂದುವ ಲೈಟ್ ಬೇಸ್ ಬಳಸಿದರೆ ನ್ಯಾಚುರಲ್ ಲುಕ್ ಸಿಗುತ್ತದೆ.
ಕಣ್ಣುಗಳ ಸೌಂದರ್ಯ: ಕಾಜಲ್ , ಐಲೈನರ್ ಮತ್ತು ಸ್ವಲ್ಪ ಮಸ್ಕರಾ ಬಳಸಿ ಕಣ್ಣುಗಳಿಗೆ ಆಕರ್ಷಕವಾದ ಸಾಂಪ್ರದಾಯಿಕ ಲುಕ್ ನೀಡಬಹುದು.
ಬೊಟ್ಟು ಮತ್ತು ಕುಂಕುಮ: ಸೀರೆಯ ಬಣ್ಣಕ್ಕೆ ಹೊಂದುವ ಬೊಟ್ಟು ಅಥವಾ ಕುಂಕುಮ ಹಬ್ಬದ ಮೇಕಪ್ ನ ಪ್ರಮುಖ ಭಾಗ. ಇದು ಸಾಂಪ್ರದಾಯಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಲಿಪ್ ಸ್ಟಿಕ್ : ನಿಮ್ಮ ಸೀರೆ ಹಾಗೂ ಆಭರಣಕ್ಕೆ ಹೊಂದುವ ನ್ಯಾಚುರಲ್ ಅಥವಾ ರಿಚ್ ಶೇಡ್ ಆಯ್ಕೆ ಮಾಡಿ.
ಬ್ಲಷ್ : ಕೆನ್ನೆಗಳಿಗೆ ಸ್ವಲ್ಪ ಬ್ಲಷ್ ಹಚ್ಚುವುದರಿಂದ ಮುಖಕ್ಕೆ ತಾಜಾತನ ಬರುತ್ತದೆ.
ಹೈಲೈಟರ್ : ಅತಿಯಾಗಿ ಬಳಸದೆ ಕೆನ್ನೆಯ ಮೇಲ್ಭಾಗ ಹಾಗೂ ಮೂಗಿನ ಮೇಲೆ ಸ್ವಲ್ಪ ಹೈಲೈಟರ್ ಬಳಸಬಹುದು.
ಹೂವಿನ ಅಲಂಕಾರ: ಜಡೆ ಅಥವಾ ಬನ್ ಗೆ ಮಲ್ಲಿಗೆ ಮುಂತಾದ ಹೂಗಳನ್ನು ಸೇರಿಸಿದರೆ ಸಾಂಪ್ರದಾಯಿಕ ಲುಕ್ ಮತ್ತಷ್ಟು ಸುಂದರವಾಗುತ್ತದೆ.