ಆಳಂದ: ಸಾಲಬಾಧೆ ಮತ್ತು ಕೃಷಿಯಲ್ಲಿಉಂಟಾದ ನಷ್ಟದಿಂದ ಮನನೊಂದು ಕ್ರಿಮಿನಾಶಕ ಔಷಧಿ ಸೇವಿಸಿ ರೈತ ಕಬ್ಬಿನ ತೋಟದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಆಲೂರ(ಬಿ) ಗ್ರಾಮದಲ್ಲಿನಡೆದಿದೆ.ವಿಠ್ಠಲ ಅಪ್ಪಯ್ಯ ಜೋಳದ (65) ಮೃತ. ಪತ್ನಿ, ಒಬ್ಬ ಪುತ್ರ, ನಾಲ್ವರು ಪುತ್ರಿಯರು ಇದ್ದಾರೆ. ಕಡಗಂಚಿಯ ಎಸ್ ಬಿಐ ಬ್ಯಾಂಕ್ ನಲ್ಲಿ3.50 ಲಕ್ಷ ರೂ. ಹಾಗೂ ಕೈಗಡ 7 ಲಕ್ಷ ರೂ. ಸೇರಿ ಒಟ್ಟು 10.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. 3 ಎಕರೆ 39 ಗುಂಟೆ ಜಮೀನು ಇದ್ದು, ಕೊಳವೆ ಬಾವಿ ಕೊರೆದ 2 ತಿಂಗಳು ನೀರು ಬಂದು ನಂತರ ಬತ್ತಿ ಹೊಗಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪಿಎಸ್ ಐ ಇಂದುಮತಿ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ನಿಂಬರ್ಗಾ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.