ಜ್ಯೂಸ್ ಕೋಟ್

Contributed byshubha.hegde@timesgroup.com|Vijaya Karnataka
fermented juice a new light for healthy living
ಇತ್ತೀಚೆಗೆ ಜನರಲ್ಲಿಆರೋಗ್ಯದ ಜಾಗೃತಿ ಹೆಚ್ಚಾಗಿದೆ. ಈ ಜ್ಯೂಸ್ ಗಳ ರುಚಿ ಚೆನ್ನಾಗಿರುವುದರಿಂದ ಯುವ ಪೀಳಿಗೆ ಇವುಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಫರ್ಮೆಂಟೇಷನ್ ಪ್ರಕ್ರಿಯೆಯಾಗುವುದರಿಂದ ದೇಹಕ್ಕೆ ಉಪಯುಕ್ತವಾದ ಒಳ್ಳೆಯ ಪ್ರೋಬಯೋಟಿP್ಸ… ಉತ್ಪತ್ತಿಯಾಗುತ್ತವೆ. ಇದು ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಆರೋಗ್ಯಕ್ಕೆ ಸೂಕ್ತ.ಎಲ್ಲಾಫರ್ಮೆಂಟೆಡ್ ಜ್ಯೂಸ್ ಗಳು ಎಲ್ಲರಿಗೂ ಒಳ್ಳೆಯದಲ್ಲ. ಸಕ್ಕರೆ ಬಳಸಿ ತಯಾರಿಸಿದ ಫರ್ಮೆಂಟೆಡ್ ಜ್ಯೂಸ್ ಗಳಲ್ಲಿಕ್ಯಾಲೋರಿಗಳು ಹೆಚ್ಚಿರುತ್ತವೆ.

ಆ್ಯಪಲ್ , ದ್ರಾಕ್ಷಿ, ಬೀಟ್ ರೂಟ್ ಮತ್ತು ಕ್ಯಾರಟ್ ಗಳಿಂದ ಮಾಡುವ ಫರ್ಮೆಂಟೆಡ್ ಜ್ಯೂಸ್ ಗಳಲ್ಲಿಹುದುಗುವಿಕೆ ಬೇಗ ಆಗುತ್ತದೆ ಮತ್ತು ಒಳ್ಳೆಯ ಸೂಕ್ಷ್ಮಜೀವಿಗಳು ಬೆಳೆಯುತ್ತವೆ. ಪ್ರತಿದಿನ ಸರಿಯಾದ ಪ್ರಮಾಣ ಹಾಗೂ ನೈಸರ್ಗಿಕ ಫರ್ಮೆಂಟೆಡ್ ಜ್ಯೂಸ್ ಗಳನ್ನು ಸೇವಿಸುವುದು ಉತ್ತಮ.
ಉಷಾ ಹರೀಶ್ | ಆಹಾರ ತಜ್ಞರು