ಮಂಗಳೂರು ಮಹಾನಗರ ಪಾಲಿಕೆಗೆ ಹೊಂದಿಕೊಂಡಿರುವ ಉತ್ತರ ಭಾಗದ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಹಳೆಯಂಗಡಿ ಕೂಡ ಒಂದು. ಹಳೆಯಂಗಡಿ, ಪಾವಂಜೆ ಹಾಗೂ ಸಸಿಹಿತ್ಲುಗ್ರಾಮಗಳನ್ನು ಒಳಗೊಂಡಿರುವ ಪಂಚಾಯಿತಿ ಎರಡು ಕಡೆ ನದಿಯಿಂದ ಆವೃತವಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶ ಹೊಂದಿದೆ. ಪಂಚಾಯಿತಿ ಮಟ್ಟದಲ್ಲೇ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ ಸ್ವಂತ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಸಾಧ್ಯ ಎಂಬುದು ಸ್ಥಳೀಯರ ಅಭಿಪ್ರಾಯ.
ನಿರ್ಮಲ ಗ್ರಾಮ ಪಂಚಾಯಿತಿ ಪುರಸ್ಕಾರ ಪಡೆದಿರುವ ಹಳೆಯಂಗಡಿ ಗ್ರಾ.ಪಂ. ವ್ಯಾಪ್ತಿಯ ಸಸಿಹಿತ್ಲುಬೀಚ್ ಹಿಂದೆ ಪಂಚಾಯಿತಿ ವತಿಯಿಂದಲೇ ಅಭಿವೃದ್ಧಿಪಡಿಸಲಾಗಿತ್ತು. ಬಳಿಕ ಸರ್ಫಿಂಗ್ ಬೀಚ್ ಆಗಿ ದೇಶದ ಗಮನ ಸೆಳೆದಿತ್ತು. ಇದೀಗ ಬೀಚ್ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಸ್ಥಳೀಯರು ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ವ್ಯವಸ್ಥಿತ ಮೀನು ಮಾರುಕಟ್ಟೆ, ಬಸ್ ನಿಲ್ದಾಣ, ಎರಡು ಹಿಂದೂ ರುದ್ರಭೂಮಿಗಳು ಸೇರಿದಂತೆ ಹಲವು ಸೌಲಭ್ಯಗಳಿವೆ. ಮನೆಮನೆ ಕಸ ಸಂಗ್ರಹ ವ್ಯವಸ್ಥೆಯೂ ಇದೆ.
ಪಾವಂಜೆ ಹಾಗೂ ಅರಂದುಗೆ ತುಂಬೆ ನೀರು ಪೂರೈಕೆಯಾಗುತ್ತಿದೆ. ಉಳೆಪಾಡಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ನೀರು ಇಂದಿರಾನಗರದವರೆಗೆ ಬರುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಸಂಪರ್ಕ ಬಯಸಿದ 1,608 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ.
ಬೇಸಿಗೆಯಲ್ಲಿಕುಡಿಯುವ ನೀರಿನ ಸಮಸ್ಯೆ: ಪಂಚಾಯಿತಿಯ ಹಲವು ಭಾಗಗಳಲ್ಲಿಬೇಸಿಗೆಯಲ್ಲಿಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ತುಂಬೆ ನೀರು ಪ್ರಸ್ತುತ ಮೂಲ್ಕಿ ನಗರ ಪಂಚಾಯಿತಿ ಮೂಲಕ ಬರಬೇಕಿದ್ದು, ನೇರವಾಗಿ ಪಂಚಾಯಿತಿ ವ್ಯಾಪ್ತಿಗೆ ನೀರು ಪೂರೈಸುವ ವ್ಯವಸ್ಥೆಯಾಗಬೇಕು ಎಂಬ ಬೇಡಿಕೆ ಇದೆ.
ನಂದಿನಿ ನದಿಗೆ ತಡೆಗೋಡೆ ಕೊರತೆಯಿಂದ ಹಳೆಯಂಗಡಿ, ಪಾವಂಜೆ ಹಾಗೂ ಸಸಿಹಿತ್ಲುಭಾಗಗಳಲ್ಲಿಕೃಷಿ ಭೂಮಿ ಮತ್ತು ಕುಡಿಯುವ ನೀರಿನ ಬಾವಿಗಳಿಗೆ ಉಪ್ಪುನೀರಿನ ಸಮಸ್ಯೆ ಎದುರಾಗುತ್ತಿದೆ. ಕೊಳುವೈಲು ಭಾಗದಲ್ಲಿತಡೆಗೋಡೆ ಕಾಮಗಾರಿ ಪೂರ್ಣಗೊಂಡಿದ್ದು, ಸಸಿಹಿತ್ಲುಭಾಗದಲ್ಲಿಯೂ ತಡೆಗೋಡೆ ನಿರ್ಮಿಸಬೇಕಾಗಿದೆ.
ಒಳಚರಂಡಿ ವ್ಯವಸ್ಥೆಗೆ ಸವಾಲು: ಪಂಚಾಯಿತಿ ವ್ಯಾಪ್ತಿಯಲ್ಲಿಅಂತರ್ಜಲ ಮೇಲ್ಮಟ್ಟದಲ್ಲಿರುವುದರಿಂದ ಲೀಚ್ ಪಿಚ್ ಸೇರಿದಂತೆ ಒಳಚರಂಡಿ ವ್ಯವಸ್ಥೆ ನಿರ್ಮಿಸುವುದು ಕಷ್ಟಕರವಾಗಿದೆ. ಪಂಚಾಯಿತಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸೂಕ್ತ ಅನುದಾನವೂ ಲಭ್ಯವಿಲ್ಲ. ಹೀಗಾಗಿ ಬಹುಮಹಡಿ ಅಪಾರ್ಟ್ ಮೆಂಟ್ ಗಳು ತಮ್ಮದೇ ಆದ ಒಳಚರಂಡಿ ವ್ಯವಸ್ಥೆ ರೂಪಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪಂಚಾಯಿತಿ ವ್ಯಾಪ್ತಿಯ ಬಹುತೇಕ ಪ್ರದೇಶಗಳು ಸಿಆರ್ ಝಡ್ ನಿಯಮದ ವ್ಯಾಪ್ತಿಗೆ ಒಳಪಡುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಲವು ನಿರ್ಬಂಧಗಳು ಎದುರಾಗುತ್ತಿವೆ. ನದಿಯಲ್ಲಿಹೂಳೆತ್ತದಿರುವುದರಿಂದ ಮಳೆಗಾಲದಲ್ಲಿನೆರೆ ಸಮಸ್ಯೆ ಉಂಟಾಗುತ್ತಿದ್ದು, ಹೂಳೆತ್ತುವ ಕಾರ್ಯ ಕೈಗೊಳ್ಳಬೇಕಾಗಿದೆ.
ಅನುದಾನದ ನಿರೀಕ್ಷೆ: 15ನೇ ಹಣಕಾಸು ಯೋಜನೆಯಡಿ ಕಳೆದ ಸಾಲಿನಲ್ಲಿಬರಬೇಕಿದ್ದ ಸುಮಾರು 45 ಲಕ್ಷ ಅನುದಾನ ಇನ್ನೂ ನಿರೀಕ್ಷೆಯಲ್ಲಿದೆ. ಮೂಡಾದಿಂದ ಅಭಿವೃದ್ಧಿ ಶುಲ್ಕ ವಸೂಲಾಗುತ್ತಿದ್ದರೂ ಕೆರೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಿಗೆ ಸೂಕ್ತ ಅನುದಾನ ಒದಗಿಸಬೇಕು ಎಂಬ ಬೇಡಿಕೆ ಇದೆ.
ಚತುಷ್ಪಥ ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣವಾಗುತ್ತಿದ್ದು, ಇದರಿಂದ ಪಂಚಾಯಿತಿ ವ್ಯಾಪ್ತಿಯ ನಗರೀಕರಣ ಹಾಗೂ ಸೌಂದರ್ಯೀಕರಣಕ್ಕೂ ಅವಕಾಶ ದೊರೆಯಲಿದೆ. ಮುಂದಿನ ದಿನಗಳಲ್ಲಿಮೂಲ್ಕಿಗೆ ಗುರುಪುರ ನದಿ ನೀರು ದೊರೆತ ಬಳಿಕ ಪಾಲಿಕೆ ನೀರನ್ನು ಹಳೆಯಂಗಡಿಗೂ ಪೂರೈಸುವ ಸಾಧ್ಯತೆ ಇದೆ. ಪಂಚಾಯಿತಿಗೆ ದಿನವಹಿ ಸಂತೆ ಮಾರುಕಟ್ಟೆಯ ಅಗತ್ಯವೂ ಇದೆ.
**
ಕೋಟ್ ..
- ಪಂಚಾಯಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರಿಂದಲೂ ಸಹಕಾರ ದೊರೆಯುತ್ತಿದೆ. ಪಾಲಿಕೆ ನೀರು ಪೂರೈಸಿದಲ್ಲಿಸಸಿಹಿತ್ಲುಭಾಗದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಹಿಂದೆ ಇದ್ದಂತೆ ಪಂಚಾಯಿತಿಗೆ ಅವಕಾಶ ನೀಡಿದರೆ ಬೋಟಿಂಗ್ , ಸರ್ಫಿಂಗ್ ಮತ್ತಿತರ ಚಟುವಟಿಕೆಗಳ ಮೂಲಕ ಸ್ವಂತ ಸಂಪನ್ಮೂಲ ಹೆಚ್ಚಿಸಿಕೊಳ್ಳಬಹುದು. ಸರ್ವರೂ ಸಹಕಾರ ನೀಡಿದರೆ ಪಂಚಾಯಿತಿ ಮಟ್ಟ ಮೀರಿ ಪಟ್ಟಣ ಪಂಚಾಯಿತಿ ಮಾದರಿಯ ಸೌಲಭ್ಯಗಳನ್ನು ಜನರಿಗೆ ಒದಗಿಸಲು ಪ್ರಯತ್ನಿಸಲಾಗುವುದು.
-ಪಿಡಿಒ ಸಾಯೀಶ್ ಚೌಟ.
21ಹಳೆ
21ಮಿನ್
21ಸಾಯಿಶ್
-
ಗ್ರಾಮ ಚಿತ್ರಣ
ಜನಸಂಖ್ಯೆ: 14000, ಮನೆಗಳು:1,779, ಪ್ರಾಥಮಿಕ ಶಾಲೆ-3, ಕಾಲೇಜು 1, ಜೂನಿಯರ್ ಕಾಲೇಜು 1, ತೆರಿಗೆ ಸಂಗ್ರಹ: ಶೇ.78
ಪ್ರಮುಖ ಬೇಡಿಕೆಗಳು:
*ಸಸಿಹಿತ್ಲುಭಾಗಕ್ಕೆ ನೇರವಾಗಿ ಕುಡಿಯುವ ನೀರು ಪೂರೈಸಬೇಕು.
*ನಂದಿನಿ ನದಿಗೆ ಸಸಿಹಿತ್ಲುಸೇರಿದಂತೆ ಅಗತ್ಯವಿರುವೆಡೆ ಉಪ್ಪು ನೀರು ತಡೆಗೋಡೆ ನಿರ್ಮಿಸಬೇಕು.
*ನದಿಯಲ್ಲಿಹೂಳೆತ್ತಿ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
*15ನೇ ಹಣಕಾಸು ಯೋಜನೆಯ ಬಾಕಿ 45 ಲಕ್ಷ ಅನುದಾನ ಬಿಡುಗಡೆ ಮಾಡಬೇಕು.
*ಪ್ರವಾಸೋದ್ಯಮ ಅಭಿವೃದ್ಧಿಗೆ ಪಂಚಾಯಿತಿಗೆ ಹೆಚ್ಚಿನ ಅವಕಾಶ ನೀಡಿ ಬೋಟಿಂಗ್ , ಸರ್ಫಿಂಗ್ ಗೆ ಉತ್ತೇಜನ ನೀಡಬೇಕು.
**
15000 ರೂ ಆ್ಯಡ್ ನೀಡಲು ಹಿಂದೆಯೇ ಒಪ್ಪಿದ್ದಾರೆ
ಹಾಗಾಗಿ 100-200 ಪ್ರತಿಗೆ ಒಪ್ಪಲಾಗಿದೆ.
ನೆಗೆಟಿವ್ ಹೆಡ್ಡಿಂಗ್ ನೀಡುವುದು ಬೇಡ ಎಂದು ಪಿಡಿಒ ಹೇಳಿದ್ದಾರೆ.
ಇದರ ಹಿಂದೆ 5-6 ಸಲ ಸುತ್ತಾಡಿದ್ದು ಇಲ್ಲಿಗೇ ಗ್ರಾಮ ನೋಟ ಸಾಕು