ಟಾಪ್ ರೈಟ್

Contributed bybabitha.salian@timesgroup.com|Vijaya Karnataka
nishvika naidu debut with a new bold role in top right
ದುಬೈ ಚಿನ್ನದ ಸ್ಮಗ್ಲಿಂಗ್ ನಲ್ಲಿನಿಶ್ವಿಕಾ!

ಇಂಟ್ರೊ
ಕ್ಯೂಟ್ ಪಾತ್ರಗಳಿಂದಾಚೆಗೆ ಬಂದು ಒಂದು ಸ್ಟೈಲಿಶ್ ಬೋಲ್ಡ್ ಅವತಾರದಲ್ಲಿಚಿನ್ನದ ಸ್ಮಗ್ಲಿಂಗ್ ಮಾಡಲು ಸಜ್ಜಾಗಿರುವ ನಟಿ ನಿಶ್ವಿಕಾ ನಾಯ್ಡು ತಮ್ಮ ವೆಬ್ ಸರಣಿ ಲೋಕದ ಎಂಟ್ರಿ ಬಗ್ಗೆ ಲವಲವಿಕೆಯೊಂದಿಗೆ ಮಾತನಾಡಿದ್ದಾರೆ.

-ಮಲ್ವೀರ

ಸ್ಯಾಂಡಲ್ ವುಡ್ ನ ಬೋಲ್ಡ್ ಬ್ಯೂಟಿ ನಿಶ್ವಿಕಾ ನಾಯ್ಡು ಸಿನಿಮಾಗಳಲ್ಲಿಪಕ್ಕದ್ಮನೆ ಹುಡುಗಿಯಾಗಿ ಕನ್ನಡಿಗರ ಮನಗೆದ್ದು, ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ವೀಕ್ಷಕರ ಪ್ರೀತಿ ಸಂಪಾದಿಸಿ ಈಗ ಓಟಿಟಿ ಅಡ್ಡಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡಿದ್ದ ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಪ್ರಕರಣವನ್ನೇ ಹೋಲುವ ಕಥೆಯ ವೆಬ್ ಸಿರೀಸ್ ನಲ್ಲಿಅವರು ಗೋಲ್ಡನ್ ಗಲ್ ರ್ ರಮ್ಯಾ ಆಗಿ ನಿಶ್ವಿಕಾ ನಟಿಸಲಿದ್ದಾರೆ. ಕೋಟ್ಯಂತರ ಮೌಲ್ಯದ ರಹಸ್ಯ ಹೊತ್ತು ಬಂದ ಚಿನ್ನದ ಹುಡುಗಿಯ ಕಥೆಯ ಸರಣಿಯ ಭಾಗವಾಗಿದ್ದಾರೆ ಅವರು.

ಈ ನಡುವೆ ಫಿಟ್ನೆಸ್ ಚಟುವಟಿಕೆಗಳಿಂದ ತಮ್ಮ ಅಭಿಮಾನಿಗಳಿಗೆ ಸ್ಫೂರ್ತಿ ತುಂಬುತ್ತಾ ಸೋಶಿಯಲ್ ಮೀಡಿಯಾದಲ್ಲಿಹೆಚ್ಚು ಆ್ಯಕ್ಟಿವ್ ಆಗಿರುವ ನಿಶ್ವಿಕಾ ನಾಯ್ಡು ನಟನೆಯ ಹೊಸ ಸಿನಿಮಾ ಯಾವುದು ಎಂದು ಕಾಯುತ್ತಿದ್ದವರಿಗೆ ಅವರು ಓಟಿಟಿಗೆ ಎಂಟ್ರಿಯಾಗುತ್ತಿರುವ ಅಪ್ಡೇಟ್ ನೀಡಿದ್ದಾರೆ. ಇದೇ ಮೊದಲ ಬಾರಿಗೆ ‘ಆಪರೇಷನ್ ಬಂಗಾರ’ ವೆಬ್ ಸಿರೀಸ್ ನಲ್ಲಿನಟಿಸುತ್ತಿರುವ ಅವರು, ‘ಸಿನಿಮಾಗಳಲ್ಲಿಹೆಚ್ಚಾಗಿ ಹೋಮ್ಲಿಹುಡುಗಿಯ ಪಾತ್ರಗಳಲ್ಲಿಮಿಂಚಿದ್ದೆ. ತಮ್ಮ ಮನೆಯ ಸದಸ್ಯೆಯಂತೇ ಜನರು ನನ್ನನ್ನು ಸ್ವೀಕರಿಸಿದ್ದರು. ಕನ್ನಡಿಗರಿಗೆ ನಾನು ಹಾಗೇ ಹೆಚ್ಚು ಇಷ್ಟವಾಗಿದ್ದೆ. ನಂತರ ರಿಯಾಲಿಟಿ ಶೋನಲ್ಲಿನನ್ನ ಜಡ್ಜಿಂಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ವೆಬ್ ಸಿರೀಸ್ ಎಂಬ ಹೊಸ ಪ್ರಯತ್ನ ಹಾಗೂ ಈ ಜಗತ್ತಿನ ಬಗ್ಗೆ ನನಗೂ ಕುತೂಹಲವಿದೆ. ಸದ್ಯಕ್ಕೆ ಇದರ ಫೋಟೊಶೂಟ್ ಆಗಿದ್ದು, ಶೂಟಿಂಗ್ ಶುರುವಾಗಬೇಕಿದೆ’ ಎಂದು ಹೇಳಿದ್ದಾರೆ.

‘ಟೈಟಲ್ಲೇ ಹೇಳುವ ಹಾಗೆ ಈ ಸಿರೀಸ್ ಗೋಲ್ಡ್ ಸ್ಮಗ್ಲಿಂಗ್ ಕುರಿತಾಗಿದೆ. ಇದರಲ್ಲಿನನ್ನದು ಸ್ವಲ್ಪ ನೆಗೆಟಿವ್ ಶೇಡ್ ಇರುವ ಬೋಲ್ಡ್ ಮತ್ತು ಸ್ಟೈಲಿಶ್ ಪಾತ್ರ. ತನ್ನ ಗುರಿ ತಲುಪಲು ಯಾವ ದಾರಿಯಲ್ಲಿಬೇಕಾದರೂ ಸಾಗುವ ಈಗಿನ ಕಾಲದ ಒಬ್ಬ ದಿಟ್ಟ ಕಾರ್ಪೊರೇಟ್ ಮಹಿಳೆಯ ಪಾತ್ರ’ ಎಂದು ನಿಶ್ವಿಕಾ ತಿಳಿಸಿದ್ದಾರೆ. ‘ಮಾರ್ಕ್’ ಸಿನಿಮಾದ ‘ಮಸ್ ್ತ ಮಲೈಕಾ’ ಹಾಡಿನಲ್ಲಿಅವರು ಈ ಥರದ ಹಾಡಿನಲ್ಲೂಗಮನ ಸೆಳೆಯಬಲ್ಲರು ಎಂದು ನಿರೂಪಿಸಿದ್ದರು. ಇದರಂತೆ ಈ ಸಿರೀಸ್ ನಲ್ಲಿನ ನನ್ನ ಪಾತ್ರ ಕೂಡ ಜನರಿಗೆ ಮತ್ತೊಂದು ಸರ್ ಪ್ರೈಸ್ ಆಗಿರಲಿದೆ ಎಂದಿದ್ದಾರೆ ಅವರು.

‘ಇಲ್ಲಿಯವರೆಗೂ ನನ್ನನ್ನು ಈ ರೀತಿಯ ಪಾತ್ರದಲ್ಲಿಜನರು ನೋಡಿಲ್ಲ. ಲೈಫಲ್ಲಿತುಂಬಾ ಎತ್ತರಕ್ಕೆ ಹಾರಬೇಕೆಂದಿದ್ದ ಮಹಿಳೆ ತನಗೆ ಬೇಕಾದ ಅಧಿಕಾರ, ದುಡ್ಡು, ಯಶಸ್ಸು ಎಲ್ಲದಕ್ಕೂ ಒಂದು ಬೆಲೆ ಇರುತ್ತದೆ ಎಂದು ಕಂಡುಕೊಂಡು ಯಾವ ದಾರಿ ಹಿಡಿಯುತ್ತಾಳೆ ಎಂಬ ಟ್ವಿಸ್ಟ್ ಗಳಿರುವ ಪಾತ್ರವಿದು. ನಾನು ಒಂದು ಪಾತ್ರ ಆಯ್ಕೆ ಮಾಡಲು ಯಾಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ಕೇಳುವವರಿಗೆ ಈ ಪಾತ್ರ ಉತ್ತರವಾಗಲಿದೆ. ಸದ್ಯಕ್ಕೆ ನಾನು ಒಂದಷ್ಟು ಸಿನಿಮಾಗಳ ಕಥೆ ಕೇಳಿದ್ದು, ಕೆಲವು ಖಚಿತವಾಗುವ ಹಂತದಲ್ಲಿದೆ. ಈ ವೆಬ್ ಸಿರೀಸ್ ಥರನೇ ಅವು ಕೂಡ ಸರ್ ಪ್ರೈಸಿಂಗ್ ಆಗಿರಲಿವೆ’ ಎಂದು ವಿವರಿಸುತ್ತಾರೆ ನಿಶ್ವಿಕಾ ನಾಯ್ಡು.