‘ಇರಾನ್ ನಂಟು ತೊರೆಯಿರಿ, ಇಲ್ಲನಿರ್ಬಂಧ ಎದುರಿಸಿ’

Contributed byBeeralinge gowda|Vijaya Karnataka
us poised to impose new sanctions against iran decision to cut resources
ವಾಷಿಂಗ್ಟನ್ : ಇರಾನ್ ನ ಆರ್ಥಿಕ ಜಾಲ ಕತ್ತರಿಸಲು ಮುಂದಾಗಿರುವ ಅಮೆರಿಕ, ಟೆಹರಾನ್ ಜತೆ ಸಂಬಂಧ ಹೊಂದಿರುವ ಎಲ್ಲಾದೇಶಗಳು ತಮ್ಮ ವ್ಯಾವಹಾರಿಕ ನಂಟುಗಳನ್ನು ತೊರೆಯುವಂತೆ ಕಟ್ಟಪ್ಪಣೆ ಮಾಡಿದೆ.

‘‘ಇರಾನ್ ಆದಾಯ ಮೂಲಗಳನ್ನು ನಿರ್ಬಂಧಿಸಲು ಅಮೆರಿಕದ ಅಭಿಯಾನ ಕೈಗೊಳ್ಳಲಿದೆ,’’ ಎಂದು ತಿಳಿಸಿರುವ ಖಜಾನೆ ಇಲಾಖೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ , ‘‘ಇರಾನ್ ಸರಕಾರದ ಆಧಾರವಾಗಿರುವ ಆರ್ಥಿಕ ಸಂಪನ್ಮೂಲಗಳ ಹರಿವನ್ನು ಕಡಿತಗೊಳಿಸುವುದು. ಟೆಹ್ರಾನ್ ನೊಂದಿಗೆ ವ್ಯವಹರಿಸುವ ದೇಶಗಳು ಮತ್ತು ಸಂಸ್ಥೆಗಳು ಸಂಬಂಧಗಳ ಮುಂದುವರಿಕೆ ಕುರಿತು ಮರುಪರಿಶೀಲನೆ ನಡೆಸುವಂತೆ ಒತ್ತಾಯಿಸುವುದು ಗುರಿಯಾಗಿದೆ.’’ ಎಂದು ತಿಳಿಸಿದರು.
ತೈಲ, ಪರಮಾಣು, ಕ್ಷಿಪಣಿ ಮತ್ತು ಸೈಬರ್ ಜಾಲಗಳಂತಹ ವಿವಿಧ ವಲಯಗಳಲ್ಲಿಇರಾನ್ ಜತೆ ಸಂಬಂಧ ಹೊಂದಿರುವ ಸುಮಾರು 60 ಸಂಸ್ಥೆಗಳು, ವ್ಯಕ್ತಿಗಳು ಮತ್ತು ನೌಕೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಖಜಾನೆ ಇಲಾಖೆ ಹೊಸ ನಿರ್ಬಂಧ ಘೋಷಣೆ ಮಾಡಿದೆ.

‘‘ಇರಾನ್ ದೇಶವನ್ನು ಜಾಗತಿಕವಾಗಿ ಸಂಪೂರ್ಣ ಏಕಾಂಗಿಯಾಗಿಸುವ ಮೂಲಕ ನಿರಂಕುಶ ಆಡಳಿತದ ಆರ್ಥಿಕ ಜೀವನಾಡಿಗಳಳನ್ನು ಕತ್ತರಿಸುವುದು ನಮ್ಮ ಗುರಿ,’’ ಎಂದು ಬೆಸೆಂಟ್ ಹೇಳಿದರು.

‘‘ಇರಾನ್ ತೈಲ ಸಾಗಣೆ, ಹಣದ ಲಭ್ಯತೆ ಮತ್ತು ನಿರ್ಬಂಧಗಳನ್ನು ತಪ್ಪಿಸಲು ಬಳಸುವ ಜಾಲಗಳನ್ನು ಖಜಾನೆ ಇಲಾಖೆ ಗುರುತಿಸಿದೆ. ‘‘ಆಪರೇಷನ್ ಎಕನಾಮಿಕ್ ಔಟ್ ಕಾಸ್ಟ್ ’ ಯೋಜನೆಯಡಿ ತೈಲ ಕಳ್ಳಸಾಗಣೆ ಮತ್ತು ನಿರ್ಬಂಧಗಳ ಉಲ್ಲಂಘನೆಗಾಗಿ ಇರಾನ್ ಬಳಸಿದ ಪ್ರತಿಯೊಂದು ಕಳ್ಳ ಜಾಲಗಳನ್ನು ಗುರುತಿಸಲಾಗಿದೆ,’’ ಎಂದು ಬೆಸೆಂಟ್ ತಿಳಿಸಿದರು.