ಯುವಕ ನೀರು ಪಾಲು

Contributed byn.narayanor101@gmail.com|Vijaya Karnataka
young man drowned in water bhima river accident
ಚಿತ್ರ : 24ವೈರುಲ-3: ರಂಗಪ್ಪ

ಯುವಕ ನೀರು ಪಾಲು
ವಿಕ ಸುದ್ದಿಲೋಕ ಯಾದಗಿರಿ ಗ್ರಾಮೀಣ

ಭೀಮಾ ನದಿಯಲ್ಲಿಸ್ನಾನ ಮಾಡಲು ತೆರಳಿದ್ದ ಯುವಕ ನೀರಿನಲ್ಲಿಕೊಚ್ಚಿ ಹೋದ ಘಟನೆ ಸೋಮವಾರ ನಡೆದಿದೆ. ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದ ನಿವಾಸಿ ರಂಗಪ್ಪ ನಾಯಕ (20) ಮೃತ.

ಭೀಮಾ ನದಿಗೆ ಅಡ್ಡಲಾಗಿ ಮಲ್ಹಾರ ಹಾಗೂ ಕುಮನೂರು ಗ್ರಾಮದ ಮಧ್ಯೆ ಆರೇಳು ಅಡಿ ಎತ್ತರ ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿದ್ದು, ಸೋಮವಾರ ಜಮೀನಿನಲ್ಲಿರಸಗೊಬ್ಬರ ಹಾಕಿ ಸ್ನಾನ ಮಾಡಲು ನಾಲ್ವರು ಯುವಕರು ನೀರಿಗೆ ಇಳಿದಿದ್ದರು. ಆದರೆ ನೀರಿನ ರಭಸಕ್ಕೆ ಅವರು ಕೊಚ್ಚಿಕೊಂಡು ಹೋಗಿದ್ದು, ಹತ್ತಿರದಲ್ಲೇ ಇದ್ದ ಮೀನುಗಾರರು ಮೂವರನ್ನು ರಕ್ಷಣೆ ಮಾಡಿದ್ದಾರೆ. ರಂಗಪ್ಪ ಮಾತ್ರ ಸಿಕ್ಕಿಲ್ಲಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸ್ , ಅಗ್ನಿಶಾಮಕ ದಳದವರು ಶೋಧ ಕಾರ್ಯ ಮುಂದುವರೆಸಿದ್ದಾರೆ.