ಅಪ್ರಾಪ್ತ ಬಾಲಕಿ ನಾಪತ್ತೆ: ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Contributed bybkyashas2010@gmail.com|Vijaya Karnataka
minor girl abduction pocso case filed against youth
ವಿಕ ಸುದ್ದಿಲೋಕ ಕಡಬ

ಕುಟ್ರುಪ್ಪಾಡಿ ಗ್ರಾಮದ ದರ್ಕಾಸು ಎಂಬಲ್ಲಿಯ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಯುವಕನೊಬ್ಬನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ನೂಜಿಬಾಳ್ತಿಲದ ಖಾಸಗಿ ಶಾಲೆಯೊಂದರಲ್ಲಿಹತ್ತನೇ ತರಗತಿಯಲ್ಲಿವ್ಯಾಸಂಗ ಮಾಡುತ್ತಿದ್ದ ಬಾಲಕಿ ಅನಾರೋಗ್ಯದ ನಿಮಿತ್ತ ಮನೆಯಲ್ಲಿದ್ದು, ಆ.20ರಂದು ಶಾಲೆಯಿಂದ ಪ್ರವಾಸ ಇದೆ ಎಂದು ಹೇಳಿ 150 ರೂ. ಕೇಳಿ ಪಡೆದು ಮನೆಯಿಂದ ಹೋಗಿದ್ದಳು. ಬಳಿಕ ಮನೆಗೆ ಹಿಂತಿರುಗಿರಲಿಲ್ಲ. ಆಕೆಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಆಕೆಯನ್ನು ಯಾರೋ ಅಪಹರಣ ಮಾಡಿರುವ ಶಂಕೆ ವ್ಯಕ್ತಪಡಿಸಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಕಡಬ ಪೊಲೀಸರು ಬಾಲಕಿಯನ್ನು ಆ.23ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕು ವಳಗೆರೆ ಸೋಮನಹಳ್ಳಿ ಎಂಬಲ್ಲಿಪತ್ತೆ ಮಾಡಿ ಠಾಣೆಗೆ ಕರೆ ತಂದಿದ್ದರು. ತನಿಖೆ ನಡೆಸಿದಾಗ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿಪರಿಚಯವಾಗಿದ್ದ ದಿನೇಶ ಎಂಬಾತನು ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಬಳಿಕ ಚೆನ್ನರಾಯಪಟ್ಟಣಕ್ಕೆ ಬಂದು ಅಲ್ಲಿಆಕೆಗೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಬಾಲಕಿ ತಿಳಿಸಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದಾಗ ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ ಚನ್ನಯಾರಪಟ್ಟಣದ ದಿನೇಶ್ ಎಂಬಾತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.