ಕೊಲೆ ಮಾಡಿ ಠಾಣೆಗೆ ಬಂದ ದಂಪತಿ!

Contributed byganeshganigask@gmail.com|Vijaya Karnataka
murder committed by a couple is questioned
ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡವನ ಹತ್ಯೆ | ಒಟ್ಟಿಗಿದ್ದ ಫೋಟೊ ಸ್ಟೇಟಸ್ ಇಟ್ಟಿದ್ದಕ್ಕೆ ಆಕ್ರೋಶ

ವಿಕ ಸುದ್ದಿಲೋಕ ಘಟಪ್ರಭಾ (ಬೆಳಗಾವಿ)
ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತ್ನಿಯೊಂದಿಗೇ ಸೇರಿ ಕೊಲೆ ಮಾಡಿ, ಬಳಿಕ ಈ ದಂಪತಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಗುಜನಟ್ಟಿ ಗ್ರಾಮದ ರಮೇಶ ಹನುಮಂತ ಬಂಟ್ರೋಳಿ (38) ಕೊಲೆಯಾದ ವ್ಯಕ್ತಿ. ಬನಪ್ಪಾ ವಡೇರ ಅವರ ಜಮೀನಿನನ್ನು ಗುತ್ತಿಗೆ ಆಧಾರದಲ್ಲಿಉಳುಮೆ ಮಾಡುತ್ತಿದ್ದ ರಮೇಶ, ಬನಪ್ಪನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಷ್ಟಕ್ಕೆ ಸುಮ್ಮನಾಗದೆ ತಮ್ಮ ಸಂಬಂಧದ ಬಗ್ಗೆ ಪ್ರಚಾರ ಮಾಡಿದ್ದಲ್ಲದೆ ಬನಪ್ಪನ ಪತ್ನಿ ಒಟ್ಟಿಗಿದ್ದ ಫೋಟೊವನ್ನು ವಾಟ್ಸಾಪ್ ಸ್ಟೇಟಸ್ ಇಟ್ಟುಕೊಂಡಿದ್ದ. ರಮೇಶ ಈ ಆಟಾಟೋಪದಿಂದ ಆಕ್ರೋಶಗೊಂಡ ಬನಪ್ಪಾ ದಂಪತಿ, ಸೋಮವಾರ ಕಲ್ಲೊಳ್ಳಿ ಬಳಿ ರಮೇಶನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಠಾಣೆಗೆ ಶರಣಾಗಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಪೋಟೊ- 25ಜಿಪಿಬಿ2

ರಮೇಶ ಬಂಟ್ರೋಳಿ