ಬೀಳಗಿ: ಪಟ್ಟಣದಲ್ಲಿನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಗಾಯಿತ್ರಿ ಜೋಶಿ, ರುಮಾನ್ ಗೋಲಂದಾಜ, ಸಂಜೀವಿನಿ ಮೂಕಿ, ಭೂಮಿಕಾ ಕಬ್ಬೂರ ಮತ್ತು ನಿವೇದಿತಾ ಬಿರಾದಾರ ಅವರು ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಎಂ.ಎನ್ .ಪಾಟೀಲ, ಆಡಳಿತಾಧಿಕಾರಿ ವಿ.ಎಸ್ .ಮೇಟಿ, ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಚಾರ್ಯ ಜಿ.ಆರ್ .ಪಾಟೀಲ, ವಿಜ್ಞಾನ ವಿಭಾಗದ ಪ್ರಾಚಾರ್ಯೆ ಎಂ.ಬಿ. ವೆಂಕಟಾಪೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಪೋಟೋ
ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಬೀಳಗಿ ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಪನ್ಯಾಸಕರು ಇದ್ದಾರೆ.