ಸಸ್ಯ ವೈವಿಧ್ಯ ವೈಜ್ಞಾನಿಕ ಗುರುತಿಸುವಿಕೆ

Contributed by: puru.dpete1987@gmail.com|Vijaya Karnataka•
Vijay Karnataka
-ಜೆಎಸ್ ಎಸ್ ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ವಿಶೇಷ ಉಪನ್ಯಾಸ ಕಾರ ್ಯಕ್ರಮ

ವಿಕ ಸುದ್ದಿಲೋಕ ಚಾಮರಾಜನಗರ
ನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ವತಿಯಿಂದ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿದ್ಯಾರ್ಥಿಗಳಿಗೆ ‘ಭಾರತೀಯ ಸಸ್ಯ ಸರ್ವೇಕ್ಷಣೆಯ ಪರಂಪರೆ ಮತ್ತು ಶಿಲೀಂಧ್ರ ಪ್ರಪಂಚದ ಒಂದು ನೋಟ’ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ ್ಯಕ್ರಮ ನಡೆಯಿತು.

ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆ ಅಂಡಮಾನ್ ಮತ್ತು ನಿಕೋಬಾರ್ ಪ್ರಾದೇಶಿಕ ಕೇಂದ್ರ, ಪೋರ್ಟ್ ಬ್ಲೇರ್ ನ ವಿಜ್ಞಾನಿ ಡಾ. ಮಹÜದೇವಕುಮಾರ್ ಎಸ್ . ಅವರು, ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆಯ ಸ್ಥಾಪನೆ, ಐತಿಹಾಸಿಕ ಹಿನ್ನೆಲೆ, ಉದ್ದೇಶಗಳು ಹಾಗೂ ಭಾರತದಲ್ಲಿನ ಸಸ್ಯ ಸಂಪತ್ತಿನ ಅನ್ವೇಷಣೆ, ದಾಖಲಾತಿ ಮತ್ತು ಸಂರಕ್ಷಣೆಯಲ್ಲಿಕ್ರಮವಹಿಸುತ್ತಿರುವ ಮಹತ್ವದ ಪಾತ್ರ ಕುರಿತು ವಿವರಿಸಿದರು.

ಭಾರತದ ಶ್ರೀಮಂತ ಸಸ್ಯ ವೈವಿಧ್ಯವನ್ನು ವೈಜ್ಞಾನಿಕವಾಗಿ ಗುರುತಿಸಿ, ವರ್ಗೀಕರಿಸಿ ಹಾಗೂ ದಾಖಲಿಸುವ ಕಾರ ್ಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ವರ್ಗೀಕರಣಶಾಸ್ತ್ರ ಮತ್ತು ಸಸ್ಯಗಳ ವೈಜ್ಞಾನಿಕ ಗುರುತಿಸುವಿಕೆಯ ಕುರಿತು ವಿವರವಾದ ಮಾಹಿತಿ ನೀಡಿದರು.

ಸಸ್ಯ ಮಾದರಿಗಳ ಸಂಗ್ರಹಣೆ, ಗುರುತಿಸುವಿಕೆ, ಸಂರಕ್ಷಣೆ ಹಾಗೂ ವೈಜ್ಞಾನಿಕ ದಾಖಲಾತಿಯಲ್ಲಿಹರ್ಬೇರಿಯಂನ ಮಹತ್ವವನ್ನು ವಿವರಿಸಿ, ಸಸ್ಯಶಾಸ್ತ್ರೀಯ ಅಧ್ಯಯನ ಮತ್ತು ಸಂಶೋಧನೆಯಲ್ಲಿಹರ್ಬೇರಿಯಂಗಳು ಪ್ರಮುಖ ಆಧಾರವಾಗಿದ್ದು, ಶಿಲೀಂಧ್ರಶಾಸ್ತ್ರ ಪರಿಸರ ವ್ಯವಸ್ಥೆಯ ಸಮತೋಲನದಲ್ಲಿಶಿಲೀಂಧ್ರಗಳು ವಹಿಸುವ ಪ್ರಮುಖ ಪಾತ್ರ, ಅವುಗಳ ವೈವಿಧ್ಯತೆ, ವಿಭಿನ್ನ ಪರಿಸರಗಳಲ್ಲಿಅವುಗಳ ಅಸ್ತಿತ್ವ ಹಾಗೂ ಜೀವವೈವಿಧ್ಯದಲ್ಲಿಅವುಗಳ ಕೊಡುಗೆ ಸಂಬಂಧ ಮಾಹಿತಿ ನೀಡಿದರು.

ಸಂಯೋಜಕ ಕೆಂಡಗಣ್ಣಸ್ವಾಮಿ ಮಾತನಾಡಿ, ‘‘ಪಠ್ಯಪುಸ್ತಕದ ಜ್ಞಾನವನ್ನು ಮೀರಿ, ನಾನಾ ಕ್ಷೇತ್ರಗಳ ತಜ್ಞರಿಂದ ನೇರವಾಗಿ ಜ್ಞಾನ ಮತ್ತು ಅನುಭವವನ್ನು ಪಡೆದುಕೊಳ್ಳುವುದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇಂತಹ ಕಾರ ್ಯಕ್ರಮಗಳು ವಿದ್ಯಾರ್ಥಿಗಳಲ್ಲಿವೈಜ್ಞಾನಿಕ ಕುತೂಹಲ, ಸಂಶೋಧನಾ ಮನೋಭಾವ ಹಾಗೂ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿಯನ್ನು ಬೆಳೆಸುತ್ತವೆ,’’ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ‘‘ಸಸ್ಯಶಾಸ್ತ್ರವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸಸ್ಯಗಳ ಮಹತ್ವವನ್ನು ಕೇವಲ ಪಠ್ಯಕ್ರಮದ ದೃಷ್ಟಿಯಿಂದ ಮಾತ್ರವಲ್ಲದೆ, ಪರಿಸರ ಮತ್ತು ಮಾನವ ಜೀವನದೊಂದಿಗೆ ಅವುಗಳ ಅವಿನಾಭಾವ ಸಂಬಂಧದ ದೃಷ್ಟಿಯಿಂದಲೂ ಅರಿತುಕೊಳ್ಳಬೇಕು. ಸಸ್ಯಗಳ ಕುರಿತು ಹೆಚ್ಚಿನ ಆಸಕ್ತಿ, ಕುತೂಹಲ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು,’’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ ್ಯಕ್ರಮದಲ್ಲಿಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಅಮೂಲ್ಯ, ಡಯಾನ, ತನುಶ್ರೀ, ಪೂಜಾ, ರಮ್ಯಾ, ಚೈತ್ರಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

ಸಿಎಚ್ ಎನ್ 31ಎಸ್ ಎಂಆರ್ 2

ಚಾಮರಾಜನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ ್ಯಕ್ರಮವನ್ನು ವಿಜ್ಞಾನಿ ಡಾ.ಮಹÜದೇವಕುಮಾರ್ ಎಸ್ . ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಓದಲೇ ಬೇಕಾದ ಸುದ್ದಿ