ಕನಕ ದುರ್ಗಮ್ಮ ಪಲ್ಲಕ್ಕಿ ಮೆರವಣಿಗೆ ಬಳ್ಳಾರಿ : ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಆವರಣದಲ್ಲಿದೇವಿಯ ಪಲ್ಲಕ್ಕಿ ಮೆರವಣಿಗೆ ಶ್ರದ್ಧಾ, ಭಕ್ತಿಯಿಂದ ಬುಧವಾರ ಅದ್ಧೂರಿಯಾಗಿ ನಡೆಯಿತು. ಪಲ್ಲಕ್ಕಿಯಲ್ಲಿದೇವಿಯನ್ನು ಕೂರಿಸಿ ದೇವಸ್ಥಾನದ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ರಾಯಲ್ ವೃತ್ತ, ಎಸ್ಪಿ ವೃತ್ತ, ಕೌಲ್ ಬಜಾರ್ , ಬಂಡಿಮೋಟ್ ವರೆಗೂ ಪಲ್ಲಕ್ಕಿ ಉತ್ಸವ ಸಂಚರಿಸಿತು. ಪಲ್ಲಕ್ಕಿಗೆ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಭಕ್ತರು ಕನಕ ದುರ್ಗಮ್ಮ ದೇವಿಯ ಪಲ್ಲಕ್ಕಿ ನಮಿಸಿ ಸಂಭ್ರಮಿಸಿದರು. ಮೆರವಣಿಗೆ ಮಾರ್ಗದಲ್ಲಿಬಿಗಿ ಪೊಲೀಸ್ ಬಂದೋಬಸ್ ್ತ ಮಾಡಲಾಗಿತ್ತು.
* ಫೋಟೊ
21 ಪೀರಾಸಾಬ್ - ಪಲ್ಲಕ್ಕಿ, ಎ
ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಆವರಣದಲ್ಲಿದೇವಿಯ ಪಲ್ಲಕ್ಕಿ ಮೆರವಣಿಗೆ ಮೆರವಣಿಗೆ ನಡೆಯಿತು.