ಭಾರತದೊಂದಿಗೆ ಶೀಘ್ರ ವ್ಯಾಪಾರ ಒಪ್ಪಂದ, ಆದರೆ ವಿಭಿನ್ನ ಸ್ವರೂಪ

Contributed by: vijay.cheelange@timesgroup.com|Vijaya Karnataka•
india us trade agreement preparations in full swing
ವಾಷಿಂಗ್ಟನ್ : ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ… ಟ್ರಂಪ್ ಮಹತ್ವದ ಮಾಹಿತಿ ನೀಡಿದ್ದಾರೆ. ‘‘ಎರಡೂ ದೇಶಗಳ ನಡುವೆ ಅತಿಶೀಘ್ರವೇ ವ್ಯಾಪಾರ ಒಪ್ಪಂದ ಏರ್ಪಡಲಿದೆ ಮತ್ತು ಈ ಒಪ್ಪಂದದ ಸ್ವರೂಪವು ತುಂಬಾ ವಿಭಿನ್ನವಾಗಿರುತ್ತದೆ,’’ ಎಂದು ಹೇಳಿದ್ದಾರೆ. ವಾಷಿಂಗ್ಟನ್ ನಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ. ಇದಕ್ಕಾಗಿ ಒಂದು ವರ್ಷದಿಂದ ನಿರಂತರವಾಗಿ ಮಾತುಕತೆಗಳು ನಡೆಯುತ್ತಿವೆ ಮತ್ತು ಈ ಒಪ್ಪಂದವು ಬಹುತೇಕ ಅಂತಿಮ ಹಂತದಲ್ಲಿದೆ,’’ ಎಂದು ಹೇಳಿದ್ದಾರೆ. ಅಮೆರಿಕದ ಸುಂಕ ನೀತಿಗಳಲ್ಲಿಆಗುತ್ತಿರುವ ಬದಲಾವಣೆಗಳಿಗೆ ತಕ್ಕಂತೆ ಎರಡೂ ದೇಶಗಳು ಬಾಕಿ ಉಳಿದಿರುವ ಕೆಲವು ಪ್ರಮುಖ ವಿಷಯಗಳನ್ನು ಬಗೆಹರಿಸಿಕೊಳ್ಳಲು ಶ್ರಮಿಸುತ್ತಿವೆ. ಮತ್ತೊಂದೆಡೆ, ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕೂಡ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಕೆಲವೇ ಕೆಲವು ವಿಷಯಗಳು ಮಾತ್ರ ಬಗೆಹರಿಯಬೇಕಿದೆ ಎಂದು ತಿಳಿಸಿದ್ದಾರೆ. ಈ ಹೊಸ ಬೆಳವಣಿಗೆಯಿಂದ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.

ಓದಲೇ ಬೇಕಾದ ಸುದ್ದಿ