ಕನಕಗಿರಿ-ಕನ್ನಡದ ಉಳಿವಿಗೆ ಎಲ್ಲರೂ ಕೈಜೋಡಿಸಿ

Contributed by: Veereshanayaka2001@gmail.com|Vijaya Karnataka•
join hands for the survival of kannada importance of the kanakagiri conference
ಕನ್ನಡದ ಉಳಿವಿಗೆ ಎಲ್ಲರೂ ಕೈಜೋಡಿಸಿ

*ಸಚಿವ ಶಿವರಾಜ ತಂಗಡಗಿ ಹೇಳಿಕೆ
ವಿಕಸುದ್ದಿಲೋಕ ಕನಕಗಿರಿ

‘‘ ಕನ್ನಡ ಭಾಷೆ , ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿಕನ್ನಡ ಸಾಹಿತ್ಯ ಸಮ್ಮೇಳನಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿತಾಲೂಕಿನ ಜನರೆಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಕನ್ನಡದ ತೇರನ್ನು ಎಳೆಯಬೇಕು,’’ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಶನಿವಾರ ಸಂಜೆ ಆಯೋಜಿಸಿದ್ದ ಕನಕಗಿರಿ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಚೇರಿ ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ ಸಮಾರಂಭದಲ್ಲಿಮಾತನಾಡಿದರು.

‘‘ನ.7ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಅಗತ್ಯ ಸಹಕಾರ ನೀಡಲಾಗುವುದು. ಜಿಲ್ಲೆಯ ಪ್ರತಿಯೊಂದು ತಾಲೂಕುಗಳಲ್ಲಿಯೂ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುವ ಮೂಲಕ ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕು. ತಾಲೂಕಿನ ಪ್ರತಿಯೊಂದು ಕುಟುಂಬದ ಸದಸ್ಯರು ಸಮ್ಮೇಳನದಲ್ಲಿಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ನೀಡಬೇಕು,’’ ಎಂದು ಮನವಿ ಮಾಡಿದರು.

ತಾಲೂಕ ಅಧ್ಯಕ್ಷ ಮೆಹಬೂಬ್ ಹುಸೇನ್ , ಶರಣಬಸಪ್ಪ ಭತ್ತದ್ ಮಾತನಾಡಿದರು. ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ.ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ, ರಾಜಾಸಾಬ್ ನಂದಾಪುರ, ರಾಖೇಶ ಕಂಪ್ಲಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಗಂಗಾಧರಸ್ವಾಮಿ, ಜಿಪಂ ಮಾಜಿ ಸದಸ್ಯರಾದ ವೀರೇಶಪ್ಪ ಸಮಗಂಡಿ, ಹನುಮೇಶ ನಾಯಕ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ, ಪ್ರಮುಖರಾದ ಬಸವಂತಗೌಡ ಪಾಟೀಲ್ , ಶಂಶಾದ್ ಬೇಗಂ, ಹುಲುಗಪ್ಪ ವಾಲೇಕಾರ, ಪರಸಪ್ಪ ಹೊರಪೇಟೆ, ಆನಂದ ಭತ್ತದ, ರವಿ ಪಾತ್ರದ, ತಿಪ್ಪಣ್ಣ ಮಡಿವಾಳ, ಷರೀಫ್ ವಟರ್ವಿ ಇದ್ದರು. ಶಿಕ್ಷಕ ಬಾಲಾಜಿ ನಿರ್ವಹಿಸಿದರು.

=====

ಕನಕಗಿರಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಆಯೋಜಿಸಿದ್ದ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಚೇರಿ ಉದ್ಘಾಟಿಸಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು.

ಓದಲೇ ಬೇಕಾದ ಸುದ್ದಿ