‘ಮಧ್ವಾಚಾರ್ಯರ ಜಯಂತಿ ದೇಶದೆಲ್ಲೆಡೆ ಆಚರಿಸಬೇಕು’

Contributed by: manjunathsalic@gmail.com|Vijaya Karnataka•
steps should be taken to celebrate madhvacharya jayanti across the country
ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿಕೆ

‘ ಮಧ್ವಾಚಾರ್ಯರ ಜಯಂತಿ ದೇಶದೆಲ್ಲೆಡೆ ಆಚರಿಸಬೇಕು’
ವಿಕ ಸುದ್ದಿಲೋಕ ರಾಯಚೂರು

‘‘ಮಧ್ವಾಚಾರ್ಯರ ಜಯಂತಿಯನ್ನು ದೇಶದ ಉದ್ದಗಲಕ್ಕೂ ಆಚರಿಸಲು ಕೇಂದ್ರ ಸರಕಾರ ವಿಶೇಷವಾಗಿ ಗಮನಹರಿಸಬೇಕು,’’ ಎಂದು ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದರು.

ಮಂತ್ರಾಲಯದಲ್ಲಿಮಂಗಳವಾರ ನಡೆದ ಮಧ್ವಾಚಾರ್ಯರ ಜಯಂತಿ ನಿಮಿತ್ತ ಅನುಗ್ರಹ ಸಂದೇಶ ನೀಡಿದ ಅವರು, ‘‘ಪುರಾಣ ಪ್ರಸಿದ್ಧ ಉಡುಪಿ ಸಮೀಪದ ಪಾಜಕ ಎಂಬ ಹಳ್ಳಿಯಲ್ಲಿಜನಿಸಿದ ಮಧ್ವಾಚಾರ್ಯರು ಜಗತ್ತಿಗೆ ತತ್ತ$್ವಜ್ಞಾನ ಉಣಬಡಿಸಿದರು. ಮತತ್ರಯಾಚಾರ್ಯರಲ್ಲಿಒಬ್ಬರಾದ ಅವರು ದೇಶದ ಉದ್ದಗಲಕ್ಕೂ ಸಂಚರಿಸಿದರು. ಸನಾತನ ಹಿಂದೂ ಧರ್ಮ ಪರಿರಕ್ಷಿಸಿ ಅದರ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದರು. ದ್ವೈತ ಸಿದ್ಧಾಂತದ ಅಪೂರ್ವ ಪ್ರಮೇಯಗಳನ್ನು ಜಗತ್ತಿಗೆ ಉಣ ಬಡಿಸಿದರು. ಅವರ ಜಯಂತಿಯನ್ನು ಅಧಿಕೃತ ಆಚರಣೆಯನ್ನಾಗಿ ಮಾಡಬೇಕು ಎಂಬ ಬಹುದಶಕಗಳ ಬೇಡಿಕೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರ ಅಸ್ತು ಎಂದಿರುವುದು ಅಭಿನಂದನೀಯ. ಕೇಂದ್ರ ಸರಕಾರವೂ ಈ ನಿಟ್ಟಿನಲ್ಲಿಚಿಂತನೆ ಮಾಡಿ ಸೂಕ್ತ ಆದೇಶ ಹೊರಡಿಸಬೇಕು,’’ ಎಂದರು.

‘‘ಒಂದು ಪ್ರಾಂತಕ್ಕೆ ಸೀಮಿತಗೊಳ್ಳದ ಇಡೀ ವಿಶ್ವದ ಗುರು ಎನಿಸಿಕೊಂಡ ಮಧ್ವಾಚಾರ್ಯರ ಜಯಂತಿಯನ್ನು ಎಲ್ಲೆಡೆಯೂ ಸೌಹಾರ್ದಯುತವಾಗಿ ಆಚರಿಸುವಂತಾಗಬೇಕು. ಅವರ ಸಂದೇಶವನ್ನು ಮನನ ಮಾಡುವುದರೊಂದಿಗೆ ವಿಶ್ವದ ಶಾಂತಿಗೆ ಕಾರಣರಾಗಬೇಕು,’’ ಎಂದು ತಿಳಿಸಿದರು.

ಓದಲೇ ಬೇಕಾದ ಸುದ್ದಿ