ಮುದಗಲ್ : ಸಮೀಪದ ತುರಡಗಿ ಗ್ರಾಮದಲ್ಲಿಸಿಡಿಲು ಬಡಿದು ಐದು ಮೇಕೆ ಸಾವನ್ನಪ್ಪಿವೆ. ಗ್ರಾಮದ ಸುತ್ತಲಿನ ಪ್ರದೇಶದಲ್ಲಿಕುರಿಗಾಹಿ ಮೇಕೆಗಳನ್ನು ಮೇಯಿಸಲು ತೆರಳಿದ್ದು, ಗಾಳಿ-ಮಳೆ, ಸಿಡಿಲಿಗೆ ಸಿದ್ದಪ್ಪ ತಳವಾರ, ರಾಜಹುಸೇನ್ ರಾಜಸಾಬ್ , ಪರಸಪ್ಪ ಕನಕಪ್ಪ, ಯಲ್ಲಪ್ಪ ಕಟ್ಟೆಪ್ಪ ವಾಲ್ಮೀಕಿ ಹಾಗೂ ಶ್ಯಾಮಣ್ಣ ಕನಕಪ್ಪ ಅವರಿಗೆ ಸೇರಿದ ತಲಾ ಒಂದು ಮೇಕೆ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಮೇಕೆಗಳ ಸಾವಿನಿಂದ ಕುರಿಗಾಹಿಗಳಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗಿದೆ. ನಷ್ಟ ಅನುಭವಿಸಿದ ಕುರಿಗಾಹಿಗಳಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ನೀರಿಕ್ಷಕ ಶರಣಗೌಡ, ಗ್ರಾಮ ಆಡಳಿತಾಧಿಕಾರಿ ಚನ್ನಮ್ಮ ಭೇಟಿ ನಿಡಿ ಪರಿಶೀಲಿಸಿದರು.