ಸಿಮ್ರಾನ್ , ಪ್ರವೀಣ್ , ಸಚಿನ್ ಶೈನ್

Contributed by: manjunath.gowda@timesofindia.com|Vijaya Karnataka•
india athletics team wins 18 medals with impactful athletes
ಮೂರನೇ ದಿನ ಅಥ್ಲೆಟಿಕ್ಸ್ ನಲ್ಲಿ5 ಚಿನ್ನ ಸೇರಿ 18 ಪದಕ ಗೆದ್ದ ಭಾರತ | ಪದಕಗಳ ಸಂಖ್ಯೆ 62ಕ್ಕೆ ಏರಿಕೆ

ಐಚಿ-ನಗೋಯಾ: ಪ್ರಸಕ್ತ ಏಷ್ಯನ್ ಪ್ಯಾರಾ ಗೇಮ್ಸ್ ನ ಮೂರನೇ ದಿನವಾದ ಬುಧವಾರ ಭಾರತಕ್ಕೆ ಸ್ಮರಣೀ ದಿನ. ಅಥ್ಲೆಟಿಕ್ಸ್ ತಂಡ ಐದು ಚಿನ್ನ ಸೇರಿದಂತೆ ಒಟ್ಟು 18 ಪದಕಗಳನ್ನು ಗೆದ್ದು ಮಿಂಚಿತು. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 62ಕ್ಕೆ ಏರಿಕೆಯಾಗಿದ್ದು, ಪದಕ ಪಟ್ಟಿಯಲ್ಲಿಐದನೇ ಸ್ಥಾನಕ್ಕೇರಿದೆ.
ಓಟಗಾರ್ತಿ ಸಿಮ್ರನ್ , ಹೈಜಂಪರ್ ಪ್ರವೀಣ್ ಕುಮಾರ್ ಹಾಗೂ ಶಾಟ್ ಪುಟರ್ ಸಚಿನ್ ಖಿಲಾರಿ ತಮ್ಮ ತಮ್ಮ ಸ್ಪರ್ಧೆಗಳಲ್ಲಿಕ್ರೀಡಾಕೂಟದ ದಾಖಲೆ ನಿರ್ಮಿಸಿದರು. ದಿಲೀಪ್ ಗಾಯಕ್ವಾಡ್ ಮತ್ತು ಆಯುಷ್ ವರ್ಮಾ ಕೂಡ ಚಿನ್ನದ ಪದಕ ಗೆದ್ದರು. ಬುಧವಾರ ಐಚಿ-ನಗೋಯಾದಲ್ಲಿನಡೆದ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿಭಾರತೀಯ ಅಥ್ಲೀಟ್ ಗಳು ಪ್ರಾಬಲ್ಯ ಸಾಧಿಸಿದರು.

ಭಾರತವು ಪ್ರಸ್ತುತ 14 ಚಿನ್ನ, 22 ಬೆಳ್ಳಿ ಹಾಗೂ 26 ಕಂಚಿನ ಪದಕಗಳನ್ನು ಗೆದ್ದಿದ್ದು ಪದಕ ಪಟ್ಟಿಯಲ್ಲಿ5ನೇ ಸ್ಥಾನ ಗಳಿಸಿದೆ. ಅಥ್ಲೆಟಿಕ್ಸ್ ಒಂದರಲ್ಲೇ ಭಾರತ 13 ಚಿನ್ನ, 14 ಬೆಳ್ಳಿ ಮತ್ತು 15 ಕಂಚು ಸೇರಿದಂತೆ ಒಟ್ಟು 42 ಪದಕಗಳನ್ನು ಗೆದ್ದಿದೆ. ಇದಲ್ಲದೆ, ಪ್ಯಾರಾ ಆರ್ಚರಿ, ಪ್ಯಾರಾ ಈಜು ಮತ್ತು ಪವರ್ ಲಿಫ್ಟಿಂಗ್ ನಲ್ಲಿಯೂ ಭಾರತ ಪದಕಗಳನ್ನು ಗೆದ್ದಿದೆ. ಬ್ಯಾಡ್ಮಿಂಟನ್ ನಲ್ಲಿಮತ್ತಷ್ಟು ಪದಕಗಳ ನಿರೀಕ್ಷೆ ಮೂಡಿದೆ.

ಸಿಮ್ರಾನ್ ದಾಖಲೆ; ಗಾಯಕ್ವಾಡ್ , ಪ್ರವೀಣ್ ಮಿಂಚು

ಸಿಮ್ರಾನ್ ಭಾರತದ ಪ್ರಮುಖ ಸಾಧಕರಲ್ಲಿಒಬ್ಬರಾಗಿದ್ದು, ಮಹಿಳೆಯರ 100 ಮೀ.ಟಿ12 ವಿಭಾಗದಲ್ಲಿ12.02 ಸೆಕೆಂಡ್ ಗಳಲ್ಲಿಗುರಿ ತಲುಪಿ ಚಿನ್ನದ ಪದಕ ಗೆದ್ದರು. ದೃಷ್ಟಿಹೀನ ಓಟಗಾರ್ತಿಯಾದ ಸಿಮ್ರಾನ್ , ಮಂಗಳವಾರ ನಡೆದ ಮಹಿಳೆಯರ 200 ಮೀ.ಟಿ12 ಸ್ಪರ್ಧೆಯಲ್ಲೂಕ್ರೀಡಾಕೂಟದ ದಾಖಲೆ ನಿರ್ಮಿಸಿ ಬಂಗಾರ ಪದಕ ಗೆದ್ದಿದ್ದರು. ಇದರೊಂದಿಗೆ ಅವರು ಈ ಕ್ರೀಡಾಕೂಟದಲ್ಲಿಸ್ಟ್ರಿಂಟ್ ನಲ್ಲಿಡಬಲ್ ಸಾಧನೆ ಮಾಡಿದರು.

ಪುರುಷರ 100 ಮೀ.ಟಿ 47 ವಿಭಾಗದಲ್ಲಿದಿಲೀಪ್ ಗಾಯಕ್ವಾವಾಡ್ 10.69 ಸೆಕೆಂಡ್ ಗಳಲ್ಲಿಬಂಗಾರದ ಸಾಧನೆ ತೋರಿದರೆ, ಮೊಹಮ್ಮದ್ ಎಂ. ಬಸಿಲ್ 10.72 ಸೆಕೆಂಡ್ ಗಳಲ್ಲಿಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಅವರು ಈ ಓಟದಲ್ಲಿಕ್ರೀಡಾಕೂಟದ ದಾಖಲೆ ನಿರ್ಮಿಸಿದರು. ಮೊದಲೆರಡು ಸ್ಥಾನಗಳನ್ನು ಭಾರತೀಯರು ಅಲಂಕರಿಸಿದರು. ಪುರುಷರ ಹೈಜಂಪ್ ಟಿ44/64 ವಿಭಾಗದಲ್ಲಿಪ್ರವೀಣ್ ಕುಮಾರ್ ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನ ಫಸಲು ತೆಗೆದರು. ಪುರುಷರ ಶಾಟ್ ಪುಟ್ ಎಫ್ 46 ವಿಭಾಗದಲ್ಲಿಸಚಿನ್ ಖಿಲಾರಿ ಅಗ್ರಸ್ಥಾನ ಪಡೆದರೆ, ಎಫ್ 53 ವಿಭಾಗದಲ್ಲಿಆಯುಷ್ ವರ್ಮಾ ಚಿನ್ನದ ಪದಕ ಗೆದ್ದರು.

ಬುಧವಾರ ಬೆಳಗಿನ ಅವಧಿಯಲ್ಲಿಭಾರತ ನಾಲ್ಕು ಬೆಳ್ಳಿ ಪದಕಗಳನ್ನು ಗೆದ್ದಿತು. ಪುರುಷರ ಹೈಜಂಪ್ ಟಿ44/64 ವಿಭಾಗದಲ್ಲಿಬಂಟಿ, ಮಹಿಳೆಯರ ಶಾಟ್ ಪುಟ್ ಎಫ್ 34 ವಿಭಾಗದಲ್ಲಿಭಾಗ್ಯಶ್ರೀ ಜಾಧವ್ , ಪುರುಷರ ಶಾಟ್ ಪುಟ್ ಎಫ್ 46 ವಿಭಾಗದಲ್ಲಿಮೊಹಮ್ಮದ್ ಯಾಸರ್ ಹಾಗೂ ಪುರುಷರ ಜಾವೆಲಿನ್ ಥ್ರೋ ಎಫ್ 12/13 ವಿಭಾಗದಲ್ಲಿಮಂಜೀತ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಪುರುಷರ 100 ಮೀ. ಟಿ 35 ವಿಭಾಗದಲ್ಲಿಅನುಭವ್ ಚೌಧರಿ, ಪುರುಷರ ಶಾಟ್ ಪುಟ್ ಎಫ್ 46 ವಿಭಾಗದಲ್ಲಿಪವೀರ್ ನ್ ಹಾಗೂ ಪುರುಷರ 100 ಮೀ. ಟಿ37 ವಿಭಾಗದಲ್ಲಿರಾಕೇಶ್ ಭಾಯಿ ಭಟ್ ಕಂಚಿನ ಪದಕ ಗೆದ್ದರು.

ಅಥ್ಲೆಟಿಕ್ಸ್ ನಲ್ಲಿಪದಕಗಳ ಸಂಖ್ಯೆ 42ಕ್ಕೆ

ಪ್ರೀತಿ ಪಾಲ್ ಮಹಿಳೆಯರ 100 ಮೀ. ಟಿ 35 ವಿಭಾಗದಲ್ಲಿಬೆಳ್ಳಿ ಗೆದ್ದು, ತನ್ನ ಪದಕಗಳ ಸಂಖ್ಯೆಯನ್ನು ಎರಡಕ್ಕೆ ಏರಿಸಿಕೊಂಡರು. ಅವರು ಮಂಗಳವಾರ ನಡೆದ 200 ಮೀ.ಟಿ 35 ಸ್ಪರ್ಧೆಯಲ್ಲೂಬೆಳ್ಳಿ ಗೆದ್ದಿದ್ದರು. 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿಎರಡು ಕಂಚಿನ ಪದಕ ಗೆದ್ದಿದ್ದ ಪ್ರೀತಿ ಪಾಲ್ , ಈ ಕ್ರೀಡಾಕೂಟದಲ್ಲಿಎರಡು ಪದಕ ಗೆದ್ದಿರುವ ಮೂವರು ಭಾರತೀಯ ಕ್ರೀಡಾಪಟುಗಳಲ್ಲಿಒಬ್ಬರಾಗಿದ್ದಾರೆ.ಬುಧವಾರದ ವೇಳೆಗೆ ಭಾರತದ ಅಥ್ಲೆಟಿಕ್ಸ್ ತಂಡ ಒಟ್ಟು 42 ಪದಕಗಳನ್ನು ಗೆದ್ದಿದೆ. ಭಾರತ ಸ್ಪರ್ಧಿಸುತ್ತಿರುವ 62 ಸ್ಪರ್ಧೆಗಳ ಪೈಕಿ 60ರಲ್ಲಿಪದಕ ಗೆಲ್ಲುವ ಮಹತ್ವಾಕಾಂಕ್ಷಿ ಗುರಿಯತ್ತ ತಂಡ ಮುನ್ನಡೆಯುತ್ತಿದೆ.

ಶೀತಲ್ ದೇವಿಗೆ ಕೈತಪ್ಪಿದ ಚಿನ್ನ

ಕೈಗಳಿಲ್ಲದ ಆರ್ಚರಿ ತಾರೆ ಶೀತಲ್ ದೇವಿ ಮತ್ತು ಪಾಯಲ್ ನಾಗ್ ಮಹಿಳೆಯರ ಕಾಂಪೌಂಡ್ ಡಬಲ್ಸ್ ವಿಭಾಗದಲ್ಲಿಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಫೈನಲ್ ನಲ್ಲಿಅವರು ಚೀನಾದ ಜೋಡಿಯ ವಿರುದ್ಧ ಸೋತು ನಿರಾಸೆ ಎರಡನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಪ್ಯಾರಾ ಈಜಿನಲ್ಲಿದೃಷ್ಟಿಹೀನ ಈಜುಗಾರ ರವಿ ಕಾರ್ತಿಕ್ ಬುದಿಗಿನಾ ಪುರುಷರ 100 ಮೀ. ಬ್ಯಾಕ್ ಸ್ಟೊ್ರೕಕ್ ಎಸ್ 13 ವಿಭಾಗದಲ್ಲಿ1:10.10 ಸಮಯದೊಂದಿಗೆ ಬೆಳ್ಳಿ ಗೆದ್ದರು. ಇದು ಈ ಕ್ರೀಡಾಕೂಟದಲ್ಲಿಅವರ ಎರಡನೇ ಪದಕವಾಗಿದೆ. ಹಿಮಾಂಶು ನಂದಲ್ ಪುರುಷರ 100 ಮೀ. ಬ್ರೆಸ್ಟ್ ಸ್ಟೊ್ರೕಕ್ ಎಸ್ 11 ವಿಭಾಗದಲ್ಲಿ1:20.72 ಸಮಯದೊಂದಿಗೆ ಕಂಚು ಗೆದ್ದರು. ಅವರಿಗೂ ಇದು ಎರಡನೇ ಪದಕವಾಗಿದೆ. ಪವರ್ ಲಿಫ್ಟರ್ ಕಸ್ತೂರಿ ರಾಜಮಣಿ ಮಹಿಳೆಯರ 67 ಕೆ.ಜಿ. ವಿಭಾಗದಲ್ಲಿಬೆಳ್ಳಿ ಪದಕ ಗೆದ್ದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆಗಳಲ್ಲಿಒಂದಾಗಿದೆ.

ಬ್ಯಾಡ್ಮಿಂಟನ್ ನಲ್ಲಿಭಾರತದ ಪುರುಷರ ಸಿಂಗಲ್ಸ್ ಎಸ್ ಎಲ್ 4 ವಿಭಾಗದಲ್ಲಿಕನಿಷ್ಠ ಮೂರು ಪದಕಗಳು ಖಚಿತವಾಗಿವೆ. ಹಾಲಿ ಚಾಂಪಿಯನ್ ಸುಹಾಸ್ ಎಲ್ .ವೈ., ನವೀನ್ ಶಿವಕುಮಾರ್ ಮತ್ತು ಅಭಿಜೀತ್ ಸಖುಜಾ ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ. ಎಸ್ ಎಲ್ 4 ವಿಭಾಗದಲ್ಲಿಕೆಳ ಅಂಗಗಳಲ್ಲಿಮಧ್ಯಮ ಪ್ರಮಾಣದ ಅಂಗವೈಕಲ್ಯ ಹೊಂದಿರುವ ಕ್ರೀಡಾಪಟುಗಳು ಸ್ಪರ್ಧಿಸುತ್ತಾರೆ.ಪುರುಷರ ಡಬಲ್ಸ್ ಎಸ್ ಎಚ್ 6 ವಿಭಾಗದಲ್ಲಿಕೃಷ್ಣ ನಾಗರ್ ಮತ್ತು ಶಿವರಾಜನ್ ಸೋಲೈಮಲೈ ರಜತ ಗೆದ್ದು ಗಮನ ಸೆಳೆದರು. ನಾಲ್ಕು ಜೋಡಿಗಳು ಒಂದೇ ಗುಂಪಿನಲ್ಲಿಸ್ಪರ್ಧಿಸಿದ್ದರಿಂದ, ನಾಕೌಟ್ ಹಂತದ ಬದಲಿಗೆ ಅಂತಿಮ ಗುಂಪು ಅಂಕಪಟ್ಟಿಯ ಆಧಾರದ ಮೇಲೆ ಪದಕಗಳನ್ನು ನೀಡಲಾಯಿತು.

ಮತ್ತಷ್ಟು ಪದಕಗಳ ನಿರೀಕ್ಷೆ

ವಿವಿಧ ಕ್ರೀಡೆಗಳಲ್ಲಿಭಾರತದ ಶ್ರೇಷ್ಠ ಪ್ರದರ್ಶನವು ಪದಕ ಪಟ್ಟಿಯಲ್ಲಿದೇಶದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಅಥ್ಲೆಟಿಕ್ಸ್ ತಂಡವೇ ಭಾರತದ ಪದಕ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದೆ. ಬುಧವಾರ ಗೆದ್ದ ಐದು ಚಿನ್ನದ ಪದಕಗಳೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಒಟ್ಟು ಪದಕಗಳ ಸಂಖ್ಯೆ 62ಕ್ಕೆ ತಲುಪಿದೆ.ಶನಿವಾರ ಕ್ರೀಡಾಕೂಟ ಮುಕ್ತಾಯಗೊಳ್ಳುವವರೆಗೆ ಇನ್ನಷ್ಟು ಸ್ಪರ್ಧೆಗಳು ಬಾಕಿ ಇರುವುದರಿಂದ, ಅಥ್ಲೆಟಿಕ್ಸ್ , ಬ್ಯಾಡ್ಮಿಂಟನ್ , ಈಜು ಸೇರಿದಂತೆ ವಿವಿಧ ವಿಭಾಗಗಳಲ್ಲಿಭಾರತ ತನ್ನ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಲ್ಲಿದೆ.

ಓದಲೇ ಬೇಕಾದ ಸುದ್ದಿ