ಶ್ರೀ ಕಾಳಿಕಾಂಬಾ ದೇವಸ್ಥಾನ: ಧಾನ್ಯಲಕ್ಷ್ಮೀ ಪೂಜೆ, ಭಕ್ತರಿಗೆ ಕದಿರು ವಿತರಣೆ

Contributed by: dhanushkulal9@gmail.com|Vijaya Karnataka•
sri kalikamba temple unique ceremony of dhanyalakshmi worship and rice distribution
ವಿಕ ಸುದ್ದಿಲೋಕ ಮಂಗಳೂರು

ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿನವರಾತ್ರಿ ಪ್ರಯುಕ್ತ ಬುಧವಾರ ಧಾನ್ಯಲಕ್ಷ್ಮೀ ಪೂಜೆ ಹಾಗೂ ಕದಿರು ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಕ್ಷೇತ್ರದ ಅಶ್ವತ್ಥ ಕಟ್ಟೆಯಲ್ಲಿಪ್ರಧಾನ ಅರ್ಚಕ ವಿN್ನೕಶ್ ಪುರೋಹಿತರು ಧಾನ್ಯಲಕ್ಷ್ಮೀ ಪೂಜೆ ನೆರವೇರಿಸಿದರು. ಬಳಿಕ ಕ್ಷೇತ್ರಕ್ಕೆ ಕದಿರನ್ನು ತಂದು, ಹೊಸ ಭತ್ತದ ಬೆಳೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀ ಗುರುಮಠದಲ್ಲಿಸುದರ್ಶನ್ ಪುರೋಹಿತರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಪೂಜೆಯ ಬಳಿಕ ಭಕ್ತರಿಗೆ ಕದಿರು ವಿತರಿಸಲಾಯಿತು. ನಾನಾ ವೈದಿಕರು ಪೂಜಾ ಕಾರ್ಯಗಳಿಗೆ ಸಹಕರಿಸಿದರು.

ಕ್ಷೇತ್ರದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಹಾಗೂ ಮಾಜಿ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, ಎ. ಲೋಕೇಶ್ ಆಚಾರ್ಯ ಚಿಲಿಂಬಿ, ಮಾಜಿ ಆಡಳಿತ ಮಂಡಳಿ ಸದಸ್ಯರಾದ ಕೆ.ಕೆ. ವಿಠ್ಠಲ ಆಚಾರ್ಯ ಹಾಗೂ ಸುಜೀರ್ ವಿನೋದ್ , ಶ್ರೀ ಗುರುಸೇವಾ ಪರಿಷತ್ ಮಂಗಳೂರಿನ ಅಧ್ಯಕ್ಷ ಕಡೇಶ್ವಾಲ್ಯ ನಾಗರಾಜ್ ಆಚಾರ್ಯ, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಸಿದ್ದಕಟ್ಟೆ, ಗೌರವಾಧ್ಯಕ್ಷ ಪಿ. ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಫೊಟೋ :

21ಒ- ಕಾಳಿಕಾಂಬಾ

ಪೂಜೆಯ ಬಳಿಕ ಕದಿರು ವಿತರಿಸಲಾಯಿತು.

ಓದಲೇ ಬೇಕಾದ ಸುದ್ದಿ