ಚನ್ನರಾಯಪಟ್ಟಣ: ದೇವನಹಳ್ಳಿ ತಾಲೂಕು ಗಂಗವಾರದ ಪ್ರಸನ್ನ ಪಾರ್ವತಿ ಸಮೇತ ಸೋಮೇಶ್ವರ ದೇವಾಲಯದಲ್ಲಿವಿಜಯದಶಮಿ ಅಂಗವಾಗಿ ದೇವರಿಗೆಹೂವಿನ ಅಲಂಕಾರ ಮಾಡಿ, ವಿಶೇಷ ಪೂಜೆ ಫಲ ಪಂಚಾಮೃತ ಅಭಿಷೇಕ ನಡೆಯಿತು. ಕೆಡಿಬಿಐ ಸದಸ್ಯ ಬೈರೇಗೌಡ ಮಾತನಾಡಿ, ನವರಾತ್ರಿ ಅಂಗವಾಗಿ ದೇವಾಲಯಗಳಲ್ಲಿನಾಡ ದೇವತೆಗೆ ವಿಶೇಷ ಪೂಜೆ ನಡೆಯುತ್ತಿದೆ. ಈ ಸಂದರ್ಭದೇವರ ದರ್ಶನ ಮಾಡುವುದರಿಂದ ಗ್ರಾಮಗಳಿಗೆ ಒಳಿತಾಗುತ್ತದೆ ಎಂದರು. ಈ ಸಂದರ್ಭದಲ್ಲಿದೇವಾಲಯ ಅರ್ಚಕ ಮಂಜುನಾಥ್ , ಶಿಕ್ಷಕ ಅಶ್ವಥ್ ಹಾಜರಿದ್ದರು.