ಗುತ್ತಿಗೆದಾರರ ಅನಿರ್ದಿಷ್ಟಾವಧಿ ಮುಷ್ಕರ ಅಂತ್ಯ

Contributed by: ashok.kashetti@yahoo.co.in|Vijaya Karnataka•
contractors end strike discussions with minister
ವಿಕ ಸುದ್ದಿಲೋಕ ಸವಣೂರು

15ನೇ ಹಣಕಾಸು ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಸವಣೂರು ಪುರಸಭೆ ಕಾರ್ಯಾಲಯದ ಎದುರಿಗೆ ರಾಜ್ಯ ಮಾದಾರ ಗುತ್ತಿಗೆದಾರರ ಮಹಾಸಭಾ, ಎಸ್ ಸಿ, ಎಸ್ ಟಿ ಗುತ್ತಿಗೆದಾರರ ಸಂಘ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸದಸ್ಯರು ಆರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಸೋಮವಾರ ಜಿಲ್ಲಾಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಭೇಟಿ ನೀಡಿ ಭರವಸೆ ನೀಡಿದ ಬಳಿಕ ಮುಷ್ಕರ ಅಂತ್ಯಗೊಂಡಿದೆ.
ಕಳೆದ ಒಂದು ವಾರದಿಂದ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿನಡೆದಿದ್ದ ಪ್ರತಿಭಟನೆ, ಸೋಮವಾರಕ್ಕೆ ಎಂಟನೇ ದಿನಕ್ಕೆ ಕಾಲಿಟ್ಟಿತ್ತು. ಸಚಿವ ರುದ್ರಪ್ಪ ಲಮಾಣಿ ಹಾಗೂ ಶಾಸಕ ಯಾಸಿರ್ ಅಹ್ಮದಖಾನ್ ಪಠಾಣ ಆಗಮಿಸಿ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದರು. ಸಂಸದರಿಗೆ ಕರೆ ಮಾಡಿದ ಸಚಿವ ಲಮಾಣಿ, 15ನೇ ಹಣಕಾಸು ಯೋಜನೆಯ ಬಾಕಿ ಸಮಸ್ಯೆಯನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು ಶೀಘ್ರ ಇತ್ಯರ್ಥಪಡಿಸುವ ಭರವಸೆ ನೀಡಿದರು. ಶಾಸಕ ಪಠಾಣ ಅವರು, ಕೇಂದ್ರದಿಂದ ಹಣ ಬಿಡುಗಡೆಯಾಗದಿದ್ದಲ್ಲಿರಾಜ್ಯ ಸರಕಾರದ ಮೂಲಕ ಪರ್ಯಾಯ ಮಾರ್ಗ ಕಂಡುಕೊಂಡು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಭರವಸೆ ಹಿನ್ನೆಲೆಯಲ್ಲಿಗುತ್ತಿಗೆದಾರರು ಮುಷ್ಕರ ಹಿಂಪಡೆದಿದ್ದಾರೆ. ಆದರೆ ನಿಗದಿತ ಕಾಲಮಿತಿಯೊಳಗೆ ಬಾಕಿ ಹಣ ಬಿಡುಗಡೆಯಾಗದಿದ್ದರೆ ಮತ್ತೆ ಹೋರಾಟ ತೀವ್ರಗೊಳಿಸುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿಲಕ್ಷ್ಮಣ ಕನ್ನವಳ್ಳಿ, ಶಿವಾನಂದ ಹುಲ್ಲಮ್ಮನವರ, ಪ್ರವೀಣ ಬಾಲೆಹೊಸೂರು, ವಿನಾಯಕ ಭೋವಿ, ರಾಜೇಶ ವಡ್ಡರ, ವಿನಾಯಕ ಈಳಗೇರ, ಮಂಜುನಾಥ ಕೈರಣ್ಣವರ, ಗೌಸ್ ಪಿರಜಾದೆ ಶಫಿ ಬಾಡ, ರಾಘವೇಂದ್ರ ಬಾಲೆಹೊಸೂರು, ಬಸವರಾಜ ಕರ್ನೂಲ, ಶಂಕ್ರಪ್ಪ ಮರಗಪ್ಪನವರ, ಗುತ್ಯಪ್ಪ ಹರಿಜನ, ರಾಜು ಮಾದರ, ಮಾಲತೇಶ ಬ್ಯಾಡಗಿ, ಶೇಖಪ್ಪ ದಂಡಿನ, ಸುರೇಶ ಮೂಡನವರ, ಮಂಜುನಾಥ ಹರಿಜನ, ದ್ಯಾಮಣ್ಣ ಹರಿಜನ, ಮಾಲತೇಶ ಚೌಡನ್ನವರ ಇತರರು ಉಪಸ್ಥಿತರಿದ್ದರು.

31ಎಸ್ ವಿಆರ್ 2

ಸವಣೂರು ಪುರಸಭೆ ಕಾರ್ಯಾಲಯದ ಎದುರು ಗುತ್ತಿಗೆದಾರರು ನಡೆಸಿದ್ದ ಅನಿರ್ದಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಜಿಲ್ಲಾಉಸ್ತುವಾರಿ ಸಚಿವರು, ಶಾಸಕರು ಭೇಟಿ ನೀಡಿ ಮಾತನಾಡಿದರು.