ವಿಕ ಸುದ್ದಿಲೋಕ ಬೇವೂರ‘‘ ಕಿತ್ತೂರು ರಾಣಿ ಚನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಪ್ರಥಮ ವೀರ ಮಹಿಳೆ. ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ರಾಣಿ, ಅವರ ಜೀವನ ಯುವ ಜನರಿಗೆ ಸ್ಫೂರ್ತಿ ಆಗಬೇಕು,’’ಎಂದು ಸಮಾಜ ಸೇವಕ ಹನುಮಂತ ಚಿಮ್ಮಲಗಿ ಹೇಳಿದರು.
ಸಮೀಪದ ಭಗವತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
‘‘ನಾವೆಲ್ಲಇಂದು ಸ್ವತಂತ್ರವಾಗಿ ಜೀವಿಸುತ್ತಿದ್ದೇವೆ ಎಂದರೆ ಸ್ವಾತಂತ್ರ್ಯಕ್ಕೆ ಹೋರಾಡಿದ ದೇಶದ ಮಹಾನ್ ನಾಯಕರ ಹೋರಾಟ, ತ್ಯಾಗ ಬಲಿದಾನವೇ ಕಾರಣ. ಹೆಣ್ಣುಮಕ್ಕಳು ಯಾವ ಕ್ಷೇತ್ರದಲ್ಲೂಕಡಿಮೆ ಇಲ್ಲ. ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು,’’ಎಂದರು.
ಸಂಗಣ್ಣ ಮಡ್ಡಿ ಮಾತನಾಡಿ, ‘‘ಮಹಿಳೆಯರ ರಕ್ಷಣೆಗಾಗಿ ಇಂದು ಸಾಕಷ್ಟು ಮಹಿಳಾ ಸಂಘಟನೆಗಳು ರಚನೆಗೊಂಡಿವೆ. ಆದರೆ ಕೆಲವು ಮಹಿಳಾ ಸಂಘಟನೆಗಳು ತನ್ನ ಸ್ವಂತ ಹಿತಾಸಕ್ತಿಗೆ ಸಂಘಟನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದು ಆಗಬಾರದು. ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಧ್ವನಿ ಎತ್ತುವ ಕೆಲಸ ಮಹಿಳಾ ಸಂಘಟನೆ ಮಾಡಬೇಕು,’’ಎಂದರು.
ಮುಖಂಡ ಶಿವಶಂಕರ ಬೀರದಾರ ಮಾತನಾಡಿದರು. ಪಿಡಿಒ ಶಶಿಕಲಾ ಕೊಡತಿ, ಕಾರ್ಯದರ್ಶಿ ಪುಟ್ಟು ಲಮಾಣಿ, ರವಿ ಕಾಸರ, ಹಿರಿಯ ಮಲ್ಲಣ್ಣ, ಶೇಕಪ್ಪ ನಾಯಕ, ದ್ಯಾಮಣ್ಣ ಹವೇಲಿ, ನಾಗರಾಜ ತಿಪ್ಪಣ್ಣವರ, ಶ್ರೀಶೈಲ ಬೀರದಾರ, ಮುತ್ತಪ್ಪ ಕಂಬಾರ, ಅಜಯ ತಿಪ್ಪಣ್ಣವರ, ಕಾಂತಪ್ಪ ಅಸೂಟಿ ಇದ್ದರು.
ಬೇವೂರ-23-02
ಬೇವೂರ ಸಮೀಪದ ಭಗವತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು..