ಚಿಕ್ಕಮಗಳೂರು : ನಾಗರಿಕರಿಂದ ಕುಂದು ಕೊರತೆಗಳ ಮನವಿ ಸ್ವೀಕರಿಸಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಅ.24ರಂದು ಪ್ರಜಾ ಸೇವೆ ಆಂದೋಲನ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೇಳಿದ್ದಾರೆ.ಚಿಕ್ಕಮಗಳೂರು ತಾಲೂಕು, ಆವತಿ ಗ್ರಾಮದ ಡಾ.ಬಿ.ಆರ್ .ಅಂಬೇಡ್ಕರ್ ಸಮುದಾಯ ಭವನಲ್ಲಿಮೂಡಿಗೆರೆ ಕ್ಷೇತ್ರ ಶಾಸಕರಾದ ನಯನಾ ಮೋಟಮ್ಮ ಅವರ ಅಧ್ಯಕ್ಷತೆಯಲ್ಲಿಸಭೆ ನಡೆಯಲಿದೆ. ಕಡೂರು ತಾಲೂಕಿನ, ಯಗಟಿ ಪೊಲೀಸ್ ಠಾಣೆ ಪಕ್ಕದ ಮೈದಾನದಲ್ಲಿ, ಕ್ಷೇತ್ರದ ಶಾಸಕ ಕೆ.ಎಸ್ .ಆನಂದ್ ಅವರ ಅಧ್ಯಕ್ಷತೆಯಲ್ಲಿ, ತರೀಕೆರೆ ತಾಲೂಕು ಬೆಟ್ಟದಹಳ್ಳಿ ತರಳುಬಾಳು ಸಮುದಾಯ ಭವನದಲ್ಲಿಶಾಸಕ ಜಿ.ಎಚ್ .ಶ್ರೀನಿವಾಸ ಅವರ ಅಧ್ಯಕ್ಷತೆಯಲ್ಲಿಹಾಗೂ ನರಸಿಂಹರಾಜಪುರ ತಾಲೂಕು ಶೆಟ್ಟಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರ ಅಧ್ಯಕ್ಷತೆಯಲ್ಲಿಸಭೆ ನಡೆಯಲಿದೆ.
ಸಭೆಗಳು ನಡೆಯುವ ಸ್ಥಳಗಳಲ್ಲಿಇಲಾಖಾವಾರು ವಿಶೇಷ ಕೌಂಟರ್ ಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರು ಸಲ್ಲಿಸುವ ಎಲ್ಲಅರ್ಜಿಗಳನ್ನು ಸ್ಥಳದಲ್ಲಿಯೇ hಠಿಠಿps://ಜಿpಜ್ಟs.ka್ಟ್ಞaಠಿaka.ಜಟv.ಜ್ಞಿ ಪೋರ್ಟಲ್ ನಲ್ಲಿಅಪ್ ಲೋಡ್ ಮಾಡಿ ವಿಶಿಷ್ಟ ಸಂಖ್ಯೆ ಇರುವ ಆನ್ ಲೈನ್ ಸ್ವೀಕೃತಿ ಪತ್ರವನ್ನು ನೀಡಲಾಗುವುದು.
ಜಿಲ್ಲೆಯ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಬಹುದಾಗಿದ್ದು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.