Special Banni Mudiya Event Of North Karnataka 2023
(ನೋಡಿದೆ)ಇಂದು ಬನ್ನಿ ಮುಡಿಯುವ ವಿಶೇಷ ಕಾರ್ಯಕ್ರಮ
Contributed by: Mahadev Swamy|Vijaya Karnataka•
ಇಂದು ಬನ್ನಿ ಮುಡಿಯುವ ವಿಶೇಷ ಕಾರ್ಯಕ್ರಮ
ಮೈಸೂರು: ಉತ್ತರ ಕರ್ನಾಟಕ ಸಾಂಸ್ಕೃತಿಕ ಸಂಘದ ವತಿಯಿಂದ ಉತ್ತರ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ ಹಾಗೂ ಸಹೋದರತ್ವದ ಸಂಕೇತವಾದ ಬನ್ನಿ ಮುಡಿಯುವ ವಿಶೇಷ ಕಾರ್ಯಕ್ರಮವನ್ನು ಅ. 24ರಂದು ಸಂಜೆ 5.30ಕ್ಕೆ ಕುವೆಂಪುನಗರದ ಉತ್ತರ ಕರ್ನಾಟಕ ಸಾಂಸ್ಕೃತಿಕ ಸಭಾಂಗಣದಲ್ಲಿಆಯೋಜಿಸಲಾಗಿದೆ. ಮುಖ್ಯಅತಿಥಿ ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಕ ಲಾಳಿ ಭಾಗವಹಿಸುವರು. ಸಂಘದ ಅಧ್ಯಕ್ಷ ಪಿ.ವಿ.ಅವರಾದಿ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಎಸ್ .ಆರ್ .ಪಾಟೀಲ್ ನೇತೃತ್ವ ವಹಿಸಲಿದ್ದಾರೆ. ಜೂನಿಯರ್ ಪ್ರಾಣೇಶ್ ಹಾಸ್ಯ ಸಂಜೆ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.